ETV Bharat / briefs

ಬೈಕ್​ಗೆ ನಾಯಿಕಟ್ಟಿ ಎಳೆದೊಯ್ದ ಕಿರಾತಕರು: ಮಂಗಳೂರಿನಲ್ಲಿಯೂ ನಡೆಯಿತಾ ಅಮಾನವೀಯ ಕೃತ್ಯ? - mangalore crime news

ನಗರದ ಸುರತ್ಕಲ್​​​​ನ ಎನ್ಐಟಿಕೆ ಬಳಿಯ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳ ರಸ್ತೆಯಲ್ಲಿ ನಾಯಿಯೊಂದನ್ನು ಬೈಕ್ ಹಿಂದಕ್ಕೆ ಹಗ್ಗದಿಂದ ಕಟ್ಟಿ ಸವಾರರಿಬ್ಬರು ಬೈಕ್ ಚಲಾಯಿಸುತ್ತಿರೆನ್ನಲಾದ ವಿಡಿಯೋ ವೈರಲ್ ಆಗಿದೆ.

 Youth who dragged the dog through bike
Youth who dragged the dog through bike
author img

By

Published : Apr 22, 2021, 9:31 PM IST

Updated : Apr 22, 2021, 9:45 PM IST

ಮಂಗಳೂರು: ಕೇರಳ ರಾಜ್ಯದಲ್ಲಿ ಸಂಚರಿಸುತ್ತಿರುವ ಬೈಕ್​ಗೆ ನಾಯಿಯೊಂದನ್ನು ಕಟ್ಟಿ ಎಳೆದೊಯ್ಯುವ ಅಮಾನವೀಯ ಘಟನೆ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಅಂತಹದೇ ಘಟನೆ ಮಂಗಳೂರಿನಲ್ಲಿಯೂ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.

ಬೈಕ್​ಗೆ ನಾಯಿಕಟ್ಟಿ ಎಳೆದೊಯ್ದ ಕಿರಾತಕರು

ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನಗರದ ಸುರತ್ಕಲ್​​​​ನ ಎನ್ಐಟಿಕೆ ಬಳಿಯ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್ ಕೆಳ ರಸ್ತೆಯಲ್ಲಿ ನಾಯಿಯೊಂದನ್ನು ಬೈಕ್ ಹಿಂದಕ್ಕೆ ಹಗ್ಗದಿಂದ ಕಟ್ಟಿ ಸವಾರರಿಬ್ಬರು ಬೈಕ್ ಚಲಾಯಿಸುತ್ತಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಎ.15ರಂದು ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ವಾಹನದಲ್ಲಿ ಸಂಚಾರ ಮಾಡುತ್ತಿದ್ದ ಸವಾರರು ಈ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಗಳ ಬಂಧನ ಆಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ಶಶಿಧರ್ ಶೆಟ್ಟಿಯವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನಾಯಿಯನ್ನು ಹಿಂಸಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Last Updated : Apr 22, 2021, 9:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.