ETV Bharat / briefs

ತ್ರಿಮೂರ್ತಿಗಳನ್ನು ಒಂದುಗೂಡಿಸಿದ ವಿಶ್ವಕಪ್​... ಅಂದೂ ಇಂದು ಒಂದೇ ಫೀಲಿಂಗ್​ ಎಂದ ಸಚಿನ್

ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಸೆಹ್ವಾಗ್​, ಗಂಗೂಲಿ ಹಾಗೂ ತೆಂಡೂಲ್ಕರ್​ ಕಾಮೆಂಟ್​ಟೇಟರ್​ ಆಗಿ ಕಾರ್ಯ ನಿರ್ವಹಿಸಿದ್ದ ಫೋಟೋಗಳನ್ನು ಸೆಹ್ವಾಗ್​ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ssg
author img

By

Published : Jun 1, 2019, 1:22 PM IST

ಲಂಡನ್​: ಭಾರತ ತಂಡದ ಪರ 2003 ವಿಶ್ವಕಪ್​ನಲ್ಲಿ ಅದ್ದೂರಿ ಬ್ಯಾಟಿಂಗ್​ ಪ್ರದರ್ಶನ ತೋರಿಸಿ ಫೈನಲ್​ ತಲುಪಿಸಿದ್ದ ಸೆಹ್ವಾಗ್​,ಸಚಿನ್​ ಹಾಗೂ ಗಂಗೂಲಿ ಇಂದು ಅದೇ ಕ್ರೀಡಾಂಗಣಗಳಲ್ಲಿ ಕಾಮೆಂಟೇಟರ್​ ಆಗಿ ವಿಶ್ವಕಪ್​ನ ಭಾಗವಾಗಿದ್ದಾರೆ.

ದ.ಆಫ್ರಿಕಾ ಮತ್ತು ಇಂಗ್ಲೆಂಡ್​ ನಡುವಿನ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಸೆಹ್ವಾಗ್​, ಗಂಗೂಲಿ ಹಾಗೂ ತೆಂಡೂಲ್ಕರ್​ ಕಾಮೆಂಟ್​ಟೇಟರ್​ ಆಗಿ ಕಾರ್ಯ ನಿರ್ವಹಿಸಿದ್ದರು.

ಪಂದ್ಯದ ನಡುವೆ ತಮ್ಮ ಅನುಭವ ಹಂಚಿಕೊಂಡ ಸಚಿನ್​ 30 ವರ್ಷಗಳ ಹಿಂದೆ ನಾನು ಪಾಕಿಸ್ತಾನದ ವಿರುದ್ಧ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ದಿನದ ಅನುಭವ ಇಂದೂ ಆಗುತ್ತಿದೆ. ಅಂದು ನನ್ನ ಕೈಯಲ್ಲಿ ಬ್ಯಾಟ್​ ಇತ್ತು, ಇಂದು ಮೈಕ್ರೋಫೋನ್​ ಇದೆ ಎಂದು ಸ್ನೇಹಿತರೊಂದಿಗೆ ತಮ್ಮ ಮೊದಲ ಅನುಭವ ಹಂಚಿಕೊಂಡಿದ್ದಾರೆ.

World Cup
ಸಚಿನ್​,ಸೆಹ್ವಾಗ್​ ಹಾಗೂ ಗಂಗೂಲಿ(photo: ಸೆಹ್ವಾಗ್​ ಟ್ಟಿಟರ್​)

ಇದೇ ವೇಳೆ ಭಾರತ ಬಿಟ್ಟು ಬೇರೆ ತಂಡಗಳ ಅತ್ಯುತ್ತಮ ಬ್ಯಾಟ್ಸ್​ಮನ್​ ಹಾಗೂ ಬೌಲರ್​ರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಚಿನ್​, ಡೇವಿಡ್​ ವಾರ್ನರ್​ ಹಾಗೂ ಜೋಫ್ರಾ ಆರ್ಚರ್​ರನ್ನು ಸೆಲೆಕ್ಟ್​ ಮಾಡಿದ್ದಾರೆ.

ಸೆಹ್ವಾಗ್​ ತಮ್ಮ ಟ್ವಿಟರ್​, ಇನ್​ಸ್ಟಾಗ್ರಾಂನಲ್ಲಿ ಗಂಗೂಲಿ ಹಾಗೂ ಸಚಿನ್​ ಜೊತೆ ಕಾಮೆಂಟರಿ ಮಾಡುತ್ತಿರುವ ಫೋಟೋಗಳನ್ನು ಶೇರ್ ಮಾಡಿ 'ಟುಗೆದರ್​ ಅಗೈನ್'​ ಎಂದು ಬರೆದುಕೊಂಡಿದ್ದಾರೆ.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.