ಲಂಡನ್: ಸತತ ಎರಡು ಪಂದ್ಯ ಸೋಲನುಭವಿಸುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ದ.ಆಫ್ರಿಕಾ ತಂಡಕ್ಕೆ ಇದೀಗ ಸ್ಟಾರ್ ಬೌಲರ್ ಲುಂಗಿ ಎಂಗಿಡಿ ಕೂಡ ಗಾಯಗೊಂಡಿರುವುದು ಆಘಾತ ತಂದಿದೆ.
ಮೊದಲ ಪಂದ್ಯದಲ್ಲೇ 104 ರನ್ಗಳಿಂದ ಸೋಲನುಭವಿಸಿದ ಹರಿಣ ಪಡೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 21 ರನ್ಗಳಿಂದ ಸೋಲನುಭವಿಸಿದೆ. ಈಗಾಗಲೆ ಆಮ್ಲಾ, ಡ್ವೇನ್ ಸ್ಟೈನ್ ಗಾಯಗೊಂಡು ತಂಡಕ್ಕೆ ಹಿನ್ನಡೆಯಾಗಿತ್ತು. ಇದೀಗ ಎಂಗಿಡಿ ಗಾಯಗೊಂಡಿದ್ದು ಒಂದು ವಾರ ಅಥವಾ 10 ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಿದೆ ಎಂಬ ಮಾಹಿತಿಯಿದ್ದು, ಈ ಸುದ್ದಿ ಡು ಪ್ಲೆಸಿಸ್ ಪಡೆಯನ್ನು ಕಂಗಾಲಾಗಿಸಿದೆ.
-
🤕 INJURY UPDATE 🤕
— Cricket World Cup (@cricketworldcup) June 2, 2019 " class="align-text-top noRightClick twitterSection" data="
South Africa's Lungi Ngidi is expected to be out for a week to 10 days. The Proteas are aiming to have him back in action for their clash against West Indies at the Hampshire Bowl on Monday, 10 June.https://t.co/jLbLJZozYC
">🤕 INJURY UPDATE 🤕
— Cricket World Cup (@cricketworldcup) June 2, 2019
South Africa's Lungi Ngidi is expected to be out for a week to 10 days. The Proteas are aiming to have him back in action for their clash against West Indies at the Hampshire Bowl on Monday, 10 June.https://t.co/jLbLJZozYC🤕 INJURY UPDATE 🤕
— Cricket World Cup (@cricketworldcup) June 2, 2019
South Africa's Lungi Ngidi is expected to be out for a week to 10 days. The Proteas are aiming to have him back in action for their clash against West Indies at the Hampshire Bowl on Monday, 10 June.https://t.co/jLbLJZozYC
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು 3 ವಿಕೆಟ್ ಪಡೆದಿದ್ದ ಎಂಗಿಡಿ, ನಿನ್ನೆ ನಡೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೇವಲ 4 ಓವರ್ ಎಸೆದು ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದಿದ್ದರು. ನಂತರ ಬ್ಯಾಟಿಂಗ್ಗೂ ಸಹಾ ಇಳಿದಿರಲಿಲ್ಲ. ಬಾಂಗ್ಲಾದಂತಹ ತಂಡದೆದುರೆ 330 ರನ್ ಬಿಟ್ಟುಕೊಟ್ಟ ಆಫ್ರಿಕನ್ ಬೌಲರ್ಗಳು ಸ್ಟೈನ್, ಎಂಗಿಡಿ ಇಲ್ಲದೆ ಭಾರತದಂತಹ ಟಾಪ್ ತಂಡದೆದುರು ಆಡಬೇಕಿದ್ದು, ಈ ಪಂದ್ಯ ಆಫ್ರಿಕನ್ನರ ಪಾಲಿಗೆ ನಿಜಕ್ಕೂ ಮರೀಚಿಕೆಯಾಗಲಿದೆ.
ಜೂನ್ 5 ರಂದು ಭಾರತದೆದುರು ನಡೆಯುವ ಪಂದ್ಯಕ್ಕೆ ಎಂಗಿಡಿ ಬದಲು ಡ್ವೇನ್ ಪ್ರಿಟೋರಿಯಸ್ ಕಣಕ್ಕಿಳಿಯುವ ಸಾಧ್ಯತೆಯಿದೆ.