ನಾಟಿಂಗ್ಹ್ಯಾಮ್: ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ವಿಶ್ವಕಪ್ನ 10 ನೇ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಬೌಲಿಂಗ್ ಆಯ್ದುಕೊಂಡಿದೆ.
ಆಸೀಸ್ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ. ಆದರೆ ವಿಂಡೀಸ್ ತಂಡದಲ್ಲಿ ಡ್ಯಾರೆನ್ ಬ್ರಾವೋ ಸ್ಥಾನಕ್ಕೆ ಎವಿನ್ ಲೆವಿಸ್ ಆಯ್ಕೆಯಾಗಿದ್ದಾರೆ.
ಮುಖಾಮುಖಿ:
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಒಟ್ಟು 139 ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 73 ಹಾಗೂ ವೆಸ್ಟ್ ಇಂಡೀಸ್ 60 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. 3 ಪಂದ್ಯಗಳು ಟೈ ಆಗಿವೆ.
ಇನ್ನು ವಿಶ್ವಕಪ್ನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು ವಿಂಡೀಸ್ 5 ಹಾಗೂ ಆಸೀಸ್ 4 ಗೆಲುವು ಸಾಧಿಸಿದೆ.
ವೆಸ್ಟ್ ಇಂಡೀಸ್:
ಜಾಸನ್ ಹೋಲ್ಡರ್( ನಾಯಕ), ಡೆರಾನ್ ಬ್ರಾವೋ, ಶಿಮ್ರಾನ್ ಹೆಟ್ಮೈರ್, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶೆಲ್ಡನ್ ಕಾಟ್ರೆಲ್, ಕ್ರಿಸ್ ಗೇಲ್, ಶೈ ಹೋಪ್, ಆಶ್ಲೇ ನರ್ಸ್, ಒಶೇನ್ ಥಾಮಸ್, ಕಾರ್ಲೋಸ್ ಬ್ರಾತ್ವೈಟ್
ಆಸ್ಟ್ರೇಲಿಯಾ:
ಆ್ಯರೋನ್ ಫಿಂಚ್(ನಾಯಕ), ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಕಾಲ್ಟರ್-ನೇಲ್, ಪ್ಯಾಟ್ ಕಮ್ಮಿನ್ಸ್, ಉಸ್ಮಾನ್ ಖವಾಜ ,ಗ್ಲೇನ್ ಮ್ಯಾಕ್ಸ್ವೆಲ್, ಸ್ಟಿವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಡೇವಿಡ್ ವಾರ್ನರ್, ಆ್ಯಡಮ್ ಜಂಪಾ.