ಯಾದಗಿರಿ: ಭೀಕರ ಬರಗಾಲಕ್ಕೆ ತುತ್ತಾಗಿರುವ ಯಾದಗಿರಿ ಜಿಲ್ಲೆಯಲ್ಲಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥತಿ ಉದ್ಭವಾವಗಿದ್ದು, ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೊಡ್ಡ ಸಾಗರ ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆ ಇದ್ದ ಶಂಕರರಾಯನ ಕೆರೆಯು ನೀರಿಲ್ಲದೆ ಭತ್ತಿ ಹೋಗಿದೆ. ಜಿಲ್ಲೆಯಲ್ಲಿ ಶಂಕರರಾಯನ ಕೆರೆ ಹಾಗೂ ಬೋನಾಳ ಕೆರೆ ಪ್ರಮುಖ ಪಕ್ಷಿ ಧಾಮಗಳ ಕೆರೆಯಾಗಿದೆ. ಆದ್ರೆ ಇಂದು ಸಾವಿರಾರು ಪಕ್ಷಿಗಳಿಗೆ ವರದಾನವಾಗಿರಬೇಕಾಗಿದ್ದ ಶಂಕರರಾಯನ ಕೆರೆಯು ಪಾಳು ಬಿದ್ದಿರುವುದರಿಂದ ಪಕ್ಷಿಗಳ ಸಂತತಿ ಅಳಿವಿನ ಅಂಚಿನಲ್ಲಿವೆ.
ನಿಜಾಮರ ಕಾಲದಲ್ಲಿದ ಶಂಕರ ರಾಯನ ಪಕ್ಷಿಧಾಮ ಕೆರೆಯು ಸುಮಾರು ನೂರು ಎಕರೆ ಪ್ರದೇಶವಾಗಿದೆ. ಈ ಪಕ್ಷಿಧಾಮದಲ್ಲಿ ಸಾವಿರಾರು ಹಾಗೂ ಲಕ್ಷಾಂತರ ಪಕ್ಷಿಗಳು ವಲಸೆ ಬರುವ ಮುಖಾಂತರ ಕೆರೆಗಳನ್ನು ಆವರಿಸಿ ಕಂಗೋಳಿಸುವಂತೆ ಮಾಡುತ್ತಿದ್ದವು.
ದಿನಾಲು ಬೆಳ್ಳಿಗೆ ಎದ್ದು ಪಕ್ಷಿಗಳ ಕಲರವ ನೋಡುವುದಕ್ಕೆ ಬಹು ಸುಂದರವಾಗಿರುತ್ತದೆ. ಕೆರೆಯಲ್ಲಿ ಪಕ್ಷಿಗಳು ಆಹಾರವನ್ನು ಹುಡುಕುವುದು, ಧಣಿವಾದಾಗ ಅರಸಿ ಬರುವುದು, ಬಿಸಿಲಿನ ದಗೆಯನ್ನು ಕಡಿಮೆಗೊಳಿಸಲು ಕೆರೆಯಲ್ಲಿ ಪಕ್ಷಿಗಳು ಈಜಾಡುವುದು ನೋಡುಗರಿಗೆ ರೋಮಾಂಚನವನ್ನು ನೀಡುತ್ತವೆ.
ಈ ಶಂಕರ ರಾಯನ ಕೆರೆಗೆ ಸುಮಾರು 128 ಜಾತಿಯ ಪಕ್ಷಿ ಪ್ರಭೇದಗಳು ವಲಸೆ ಆಗಮಿಸತ್ತವೆ. ಅವುಗಳಲ್ಲಿ ರಾಜಹಂಸ್, ರೆಡ್ ಪಿಕಾಕ್, ಕರಿ ತಲೆ ಹಕ್ಕಿ, ಕಿರು ಬೆಳ್ಳಕ್ಕಿ, ಡೊಡ್ಡ ಬೆಳ್ಳಕ್ಕಿ, ವೈಟ್ ನೈಕಡ್ ಸ್ಟ್ರೋಕ್, ಲಾರ್ಜ ಎರೆಟ್, ಇಂಡಿಯನ್ ಶಾಗ್,ಸ್ನೇಕ್ ಬಡ್೯ ಹೀಗೆ ನಾನ ರೀತಿಯ ಪಕ್ಷಿಗಳು ವಲಸೆ ಆಗಮಿಸಿ ತಮ್ಮ ಸಂತತಿಯನ್ನು ಬೆಳಸುತ್ತವೆ.
ಹಲವಾರು ರೀತಿಯಲ್ಲಿ ಆಗಮಿಸುವ ಪಕ್ಷಿಗಳು ಜನರನ್ನು ಆಕರ್ಷಿಸಿ ಕೈ ಬೀಸಿ ಕರೆಯುತ್ತಿವೆ. ಶುಭ ಮುಂಜಾನೆಯಲ್ಲಿ ಪಕ್ಷಿಗಳು ಖುಷಿಯಿಂದ ವಿಹರಿಸುತ್ತವೆ. ಇಲ್ಲಿಗೆ ಸಾವಿರಾರು ಜನರು ಕೆರೆಗೆ ಆಗಮಿಸುತ್ತಿದ್ದವು. ಆದ್ರೆ ಈ ಬಾರಿ ಶಂಕರರಾಯನ ಕೆರೆಯು ಭತ್ತಿ ಬರಿದಾಗಿರುವ ಕಾರಣ ಪಕ್ಷಿಗಳು ವಲಸೆ ಬರುವುದು ಕ್ಷೀಣಿಸುತ್ತಿದೆ.
ಸುಮಾರು ನೂರಾರು ಎಕರೆ ಹೊಂದಿರುವ ಶಂಕರರಾಯನ ಕೆರೆಗೆ ಪಕ್ಷಿಗಳು ಬರುವುದು ಕಮ್ಮಿಯಾದ್ರೂ ಕೂಡ ಪಕ್ಷಿಗಳ ಕಲರವ ನಿಂತಿಲ್ಲ ಎನ್ನುತಾರೆ ಸ್ಥಳೀಯರು. ಆದ್ರೆ ಪ್ರವಾಸೋದ್ಯಮ ಇಲಾಖೆ ಈ ಶಂಕರರಾಯನ ಕೆರೆಯನ್ನು ಮುತುವರ್ಜಿವಹಿಸಿ ಉತ್ತಮ ಪಕ್ಷಿಧಾಮ ಮಾಡುವ ಮುಖಾಂತರ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗಬೇಕಿದೆ ಜಿಲ್ಲೆಯ ಜನರ ಆಶಯವಾಗಿದೆ.