ಹೈದರಾಬಾದ್: ಐಪಿಎಲ್ನ ಆರ್ಸಿಬಿ ಪಂದ್ಯದ ವೇಳೆ ಕೆಲ ಸೆಕೆಂಡ್ಗಳ ಕಾಲ ಪರದೆಯಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ದೀಪಿಕಾ ಘೋಷ್ ಎನ್ನುವ ಪಕ್ಕಾ ಆರ್ಸಿಬಿ ಫ್ಯಾನ್ ಸದ್ಯ ವಿರಾಟ್ ಪಡೆಗೆ ವಿಶೇಷ ರೀತಿಯಲ್ಲಿ ವಿಶ್ ಮಾಡಿದ್ದಾಳೆ.
ಐದು ಸಾವಿರದಿಂದ ಲಕ್ಷ ದಾಟಿದ ಫಾಲೋವರ್ಸ್... ಎಲ್ಲ ಇಂಟರ್ನೆಟ್ ಮಹಿಮೆ...!
ಕೆಲ ದಿನದ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ದೀಪಿಕಾ ವಿರಾಟ್ ಕೊಹ್ಲಿ ಜೆರ್ಸಿ ತೊಟ್ಟು ಸಖತ್ ಡ್ಯಾನ್ಸ್ ಮಾಡಿದ್ದಾಳೆ. ಭರ್ಜರಿಯಾಗಿ ಮೈ ಕುಣಿಸಿರುವ ಈಕೆ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದ್ದಾಳೆ.
ಆ್ಯಕ್ಸಿಡೆಂಟಲ್ ಸೆಲೆಬ್ರೆಟಿ ಸಾಲಿಗೆ ಸೇರಿದ ಆರ್ಸಿಬಿ ಫ್ಯಾನ್... ಯಾರಿವಳು?
ಆರ್ಸಿಬಿ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದಾಗ ದೀಪಿಕಾ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಳು. ಏಕಾಏಕಿ ಹಲವರ ದಿಲ್ ಕದ್ದ ಈಕೆಯ ಫ್ಯಾನ್ಕ್ಲಬ್ಗಳು ಇನ್ಸ್ಟಾಗ್ರಾಮ್ನಲ್ಲಿ ತೆರೆಯಲಾಗಿತ್ತು.
- " class="align-text-top noRightClick twitterSection" data="
">