ETV Bharat / briefs

ಗ್ಯಾಸ್ಟ್ರೋ ಸಮಸ್ಯೆ: ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹಿಂದೆ ಸರಿದ ಸೈನಾ - ETV sportsnews kannada

ಸ್ವಿಸ್​ ಓಪನ್​ನಿಂದ್ ಹಿಂದೆ ಸರಿದ ನಂತರ ಇದೀಗ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತ ಬ್ಯಾಡ್ಮಿಂಟನ್​ ಸ್ಟಾರ್​ ಆಟಗಾರ್ತಿ ಸೈನಾ ನೆಹ್ವಾಲ್​ ಇಂಡಿಯನ್​ ಓಪನ್​ನಿಂದಲೂ ಹಿಂದೆ ಸರಿದಿದ್ದಾರೆ.

saina
author img

By

Published : Mar 21, 2019, 10:13 AM IST

ಹೊಸದಿಲ್ಲಿ: ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದು ಇಂಡಿಯನ್​ ಓಪನ್​ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 500 ಇಂದ ಹಿಂದೆ ಸರಿದಿದ್ದಾರೆ.

ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ನಡೆಯುವ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಈ ಟೂರ್ನಿಯಲ್ಲಿ ಸೈನಾ ಸೆಮಿಫೈನಲ್​ವರೆಗೂ ತಲುಪಿದ್ದರು. ನಂತರ ಸ್ವಿಸ್‌ ಓಪನ್‌ನಿಂದಲೂ ಹಿಂದೆ ಸರಿದಿದ್ದರು. ಇದೀಗ ಸೋಮವಾರವಷ್ಟೇ 29ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ, ಜಠರದಲ್ಲಿನ ತೀವ್ರ ಸ್ವರೂಪದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.

saina nehwal
ಸೈನಾ ನೆಹ್ವಾಲ್​

ಬುಧವಾರ ಸ್ವತಃ ಸೈನಾ ಬ್ಯಾಡ್ಮಿಂಟನ್​ ಅಸೋಸಿಯೇಷನ್​ಗೆ ತಾವೂ ಇಂಡಿಯನ್​ ಓಪನ್​ನಿಂದ ಹಿಂದೆ ಸರಿಯುತ್ತಿರುವದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಟೂರ್ನಿ 350000 ಅಮೆರಿಕನ್​ ಡಾಲರ್​ (2.4 ಕೋಟಿ ರೂ.) ಬಹುಮಾನ ಮೊತ್ತ ಹೊಂದಿದೆ.

ಈ ಕುರಿಯು ಮಾಧ್ಯಮದೊಂದಿಗೆ ಮಾತನಾಡಿರುವ ಅಧಿಕಾರಿಯೊಬ್ಬರು ಬಿಐಎನ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಬಳಿಕ ಸೈನಾ ಆರೋಗ್ಯ ಸ್ಥಿತಿ ಸರಿಯಿಲ್ಲ, ಹೊಟ್ಟೆ ನೋವಿನ ಕಾರಣ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಕಳುಹಿಸಿದ್ದಾರೆ ಎಂದಿದ್ದಾರೆ.

ಸೈನಾ ನೆಹ್ವಾಲ್​ ಹಿಂದೆ ಸರಿದ ಕಾರಣ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಪಿ.ವಿ ಸಿಂಧೂ ಭಾರತದ ಪ್ರಶಸ್ತಿ ಗೆಲುವಿನ ಏಕೈಕ ಭರವಸೆಯಾಗುಳಿದಿದ್ದಾರೆ.

Intro:Body:

ಗಾಯದ ಸಮಸ್ಯೆ... ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಿಂದ ಹಿಂದೆ ಸರಿದ  ಸೈನಾ

ಹೊಸದಿಲ್ಲಿ : ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದು  ಇಂಡಿಯನ್​ ಓಪನ್​ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 500 ಇಂದ ಹಿಂದೆ ಸರಿದಿದ್ದಾರೆ.    

ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ನಡೆಯುವ ವೇಳೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು ಈ ಟೂರ್ನಿಯಲ್ಲಿ ಸೈನಾ ಸೆಮಿಫೈನಲ್​ವರೆಗೂ ತಲುಪಿದ್ದರು. ನಂತರ ಸ್ವಿಸ್‌ ಓಪನ್‌ನಿಂದಲೂ ಹಿಂದೆ ಸರಿದಿದ್ದರು. ಇದೀಗ ಸೋಮವಾರವಷ್ಟೇ 29ನೇ ವಸಂತಕ್ಕೆ ಕಾಲಿಟ್ಟ ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ, ಜಠರದಲ್ಲಿನ ತೀವ್ರ ಸ್ವರೂಪದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ

ಬುಧವಾರ ಸ್ವತಃ ಸೈನಾ ಬ್ಯಾಡ್ಮಿಂಟನ್​ ಅಸೋಸಿಯೇಷನ್​ಗೆ ತಾವೂ ಇಂಡಿಯನ್​ ಓಪನ್​ನಿಂದ ಹಿಂದೆ ಸರಿಯುತ್ತಿರುವದರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಟೂರ್ನಿ 350000 ಅಮೆರಿಕನ್​ ಡಾಲರ್​ (2.4 ಕೋಟಿ ರೂ. )ಬಹುಮಾನ ಮೊತ್ತ ಹೊಂದಿದೆ. 

ಈ ಕುರಿಯು ಮಾಧ್ಯಮದೊಂದಿಗೆ ಮಾತನಾಡಿರುವ ಅಧಿಕಾರಿಯೊಬ್ಬರು ಬಿಐಎನ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಬಳಿಕ  ಸೈನಾ ಆರೋಗ್ಯ ಸ್ಥಿತಿ ಸರಿಯಿಲ್ಲ, ಹೊಟ್ಟೆ ನೋವಿನ ಕಾರಣ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಕಳುಹಿಸಿದ್ದಾರೆ ಎಂದಿದ್ದಾರೆ.

ಸೈನಾ ನೆಹ್ವಾಲ್​ ಹಿಂದೆ ಸರಿದ ಕಾರಣ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿರುವ ಪಿ.ವಿ ಸಿಂಧೂ ಭಾರತದ ಪ್ರಶಸ್ತಿ ಗೆಲುವಿನ ಏಕೈಕ ಭರವಸೆಯಾಗುಳಿದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.