ನವದೆಹಲಿ: ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಂಧ್ರ ಪ್ರದೇಶದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿದ್ದಾರೆಂದು ಕೇಂದ್ರ ಸಚಿವ ಹರ್ಷವರ್ಧನ್ ಟ್ವೀಟ್ ಮಾಡಿ ಕೆಲ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ.
ತಮ್ಮ ಟ್ವಿಟರ್ ಅಕೌಂಟ್ನಿಂದ ಬಿಜೆಪಿ ಹಿರಿಯ ಮುಖಂಡೆ, ನನ್ನ ದೀದಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳು. ಎಲ್ಲ ಕ್ಷೇತ್ರಗಳಲ್ಲೂ ಅಪಾರ ಅನುಭವ ಹೊಂದಿರುವ ನಿಮ್ಮ ಸೇವೆಯಿಂದ ಆಂಧ್ರ ಪ್ರದೇಶದ ಜನರು ಹೆಮ್ಮೆ ಪಡುವಂತೆ ಆಗಲಿ ಎಂದು ಬರೆದುಕೊಂಡಿದ್ದರು. ಆದರೆ ತದನಂತರ ಅದನ್ನ ಡಿಲೀಟ್ ಮಾಡಿದ್ದಾರೆ.
-
Union Minister Dr Harsha Vardhan tweets, "Congratulations to senior BJP leader & former External Affairs Minister, Sushma Swaraj ji on being appointed as the Governor of Andhra Pradesh." pic.twitter.com/JIMGTAyKGe
— ANI (@ANI) June 10, 2019 " class="align-text-top noRightClick twitterSection" data="
">Union Minister Dr Harsha Vardhan tweets, "Congratulations to senior BJP leader & former External Affairs Minister, Sushma Swaraj ji on being appointed as the Governor of Andhra Pradesh." pic.twitter.com/JIMGTAyKGe
— ANI (@ANI) June 10, 2019Union Minister Dr Harsha Vardhan tweets, "Congratulations to senior BJP leader & former External Affairs Minister, Sushma Swaraj ji on being appointed as the Governor of Andhra Pradesh." pic.twitter.com/JIMGTAyKGe
— ANI (@ANI) June 10, 2019
ಈ ಹಿಂದೆ ಮೋದಿ ಕ್ಯಾಬಿನೆಟ್ನಲ್ಲಿ ಸುಷ್ಮಾ ಸ್ವರಾಜ್ ಕೇಂದ್ರ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಅನಾರೋಗ್ಯದ ಕಾರಣ ಸ್ಪರ್ಧೆಯಿಂದ ದೂರ ಉಳಿದಿದ್ದರು. ಈಗಾಗಲೇ ಇ.ಎಸ್.ಎಲ್.ನರಸಿಂಹನ್ ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ.
ಟ್ವೀಟ್ ಮೂಲಕ ಸುಷ್ಮಾ ಸ್ಪಷ್ಟನೆ
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸುಷ್ಮಾ ಸ್ವರಾಜ್, ಆಂಧ್ರ ಪ್ರದೇಶದ ಗವರ್ನರ್ ಆಗಿ ನಾನು ಆಯ್ಕೆಯಾಗಿದ್ದೇನೆ ಎಂಬುದು ಸುಳ್ಳು. ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ಬರೆದುಕೊಂಡಿದ್ದಾರೆ.
-
The news about my appointment as Governor of Andhra Pradesh is not true.
— Sushma Swaraj (@SushmaSwaraj) June 10, 2019 " class="align-text-top noRightClick twitterSection" data="
">The news about my appointment as Governor of Andhra Pradesh is not true.
— Sushma Swaraj (@SushmaSwaraj) June 10, 2019The news about my appointment as Governor of Andhra Pradesh is not true.
— Sushma Swaraj (@SushmaSwaraj) June 10, 2019