ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದಲ್ಲಿ ಆತಿಥೇಯ ತಂಡ 17 ರನ್ಗಳ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತ್ತು. ಆತಿಥೇಯರಿಗೆ ಆರಂಭದಲ್ಲಿ ಪಾರ್ಥಿವ್ ಪಟೇಲ್ ಹಾಗೂ ನಂತರದಲ್ಲಿ ಡಿವಿಲಿಯರ್ಸ್ ಉತ್ತಮ ಕೊಡುಗೆ ನೀಡಿದ್ದರು.
ಬ್ಯಾಟ್ಸ್ಮನ್ಗಳ ಸ್ವರ್ಗ ಬೆಂಗಳೂರಿನ ಪಿಚ್ನಲ್ಲಿ ದುರ್ಬಲ ಬೌಲಿಂಗ್ ಹೊಂದಿರುವ ಆರ್ಸಿಬಿಗೆ ಗೆಲುವು ಕೊಂಚ ಸವಾಲೇ ಆಗಿತ್ತು.
-
When victory was in sight and the wickets were tumbling, you get these reactions from the @RCBTweets skipper 🔥#RCBvKXIP pic.twitter.com/WMaEOT523y
— IndianPremierLeague (@IPL) April 24, 2019 " class="align-text-top noRightClick twitterSection" data="
">When victory was in sight and the wickets were tumbling, you get these reactions from the @RCBTweets skipper 🔥#RCBvKXIP pic.twitter.com/WMaEOT523y
— IndianPremierLeague (@IPL) April 24, 2019When victory was in sight and the wickets were tumbling, you get these reactions from the @RCBTweets skipper 🔥#RCBvKXIP pic.twitter.com/WMaEOT523y
— IndianPremierLeague (@IPL) April 24, 2019
ಕಿಂಗ್ಸ್ ಇಲೆವೆನ್ ಪಂಜಾಬ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟ ನೀಡಿ ಗೆಲುವಿಗೆ ಭದ್ರ ಅಡಿಪಾಯ ಹಾಕಿದ್ದರು. ನಂತರದಲ್ಲಿ ನಿಕೋಲಸ್ ಪೂರನ್ ಮಿಂಚಿನ ಆಟವಾಡಿ ತಂಡವನ್ನು ಗೆಲುವಿನ ಸನಿಹ ತಂದು ಔಟಾದರು.
ಆ ಬಳಿಕ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ಪಂಜಾಬ್ ಗೆಲುವಿನಿಂದ ದೂರವಾಯಿತು. ನಿಗದಿತ 20 ಒವರ್ನಲ್ಲಿ ಪಂಜಾಬ್ 7 ವಿಕೆಟ್ಗೆ 185 ಗಳಿಸಿ 17 ರನ್ಗಳಿಂದ ಸೋಲೊಪ್ಪಿಕೊಂಡಿತು.
-
.@RCBTweets hold their nerve in the death overs to defeat KXIP by 17 runs here in Bengaluru 🙌#RCBvKXIP pic.twitter.com/X1FkbMCJbJ
— IndianPremierLeague (@IPL) April 24, 2019 " class="align-text-top noRightClick twitterSection" data="
">.@RCBTweets hold their nerve in the death overs to defeat KXIP by 17 runs here in Bengaluru 🙌#RCBvKXIP pic.twitter.com/X1FkbMCJbJ
— IndianPremierLeague (@IPL) April 24, 2019.@RCBTweets hold their nerve in the death overs to defeat KXIP by 17 runs here in Bengaluru 🙌#RCBvKXIP pic.twitter.com/X1FkbMCJbJ
— IndianPremierLeague (@IPL) April 24, 2019
ಬುಧವಾರ ನಡೆದ ಪಂದ್ಯದ ಗೆಲುವಿನಿಂದ ಆರ್ಸಿಬಿ ಪ್ಲೇಆಫ್ ಕನಸು ಜೀವಂತವಾಗಿದ್ದು ಮುಂದಿನ ಎಲ್ಲ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯೂ ಇದೆ. ಜೊತೆಗೆ ರನ್ರೇಟ್ ಸಹ ಉತ್ತಮಪಡಿಸಿಕೊಳ್ಳಬೇಕಿದೆ.