ETV Bharat / briefs

ಬೇಸರ ಕಳೆಯಲೆಂದು ಮೀನು ಹಿಡಿಯಲು ತೆರಳಿದ ಯುವಕರು ನೀರುಪಾಲು! - ಕಾರವಾರ ಅಪರಾಧ ಸುದ್ದಿ

ಮನೆಯಲ್ಲಿದ್ದು ಬೇಸರಗೊಂಡಿದ್ದ ಇಬ್ಬರು ಯುವಕರು ಮೀನು ಹಿಡಿಯಲೆಂದು ಬಸಾಕಲ್ ಸಮೀಪ ಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

Karwar
Karwar
author img

By

Published : May 21, 2021, 7:21 PM IST

ಕಾರವಾರ: ಲಾಕ್​ಡೌನ್​ನಲ್ಲಿ ಬೇಸರ ಕಳೆಯಲೆಂದು ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಅಂಕೋಲಾ ತಾಲೂಕಿನ ಬಸಾಕಲ್ ಗುಡ್ಡದ ಸಮೀಪ ಇಂದು ನಡೆದಿದೆ.

ಅಂಕೋಲಾದ ಬೆಳಾಬಂದರ್ ನಿವಾಸಿ ಸಂದೀಪ್​ ಬೀರಪ್ಪ ನಾಯ್ಕ (30), ಚೇತನ ನಾಗೇಶ್ ನಾಯ್ಕ (23) ನೀರುಪಾಲಾದವರಾಗಿದ್ದು, ಸಂದೀಪ ನಾಯ್ಕ ಮೃತ ದೇಹ ಪತ್ತೆಯಾಗಿದೆ. ನಾಪತ್ತೆಯಾದ ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಮನೆಯಲ್ಲಿದ್ದು ಬೇಸರಗೊಂಡಿದ್ದ ಇಬ್ಬರು ಯುವಕರು ಮೀನು ಹಿಡಿಯಲೆಂದು ಬಸಾಕಲ್ ಸಮೀಪ ಸಮುದ್ರಕ್ಕೆ ತೆರಳಿದ್ದರು. ಆದರೆ ಈ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಇನ್ನಷ್ಟೇ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿದ್ದು ಇನ್ನೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.