ETV Bharat / briefs

ಕಾಳಸಂತೆ‌ಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ: ಇಬ್ಬರು ಆರೋಪಿಗಳ ಬಂಧನ - ಇಬ್ಬರ ಆರೋಪಿಗಳ ಬಂಧನ,

ಕಾಳಸಂತೆ‌ಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

oxygen cylinder n black market, Bangalore oxygen cylinder n black market, Two accused arrest, Two accused arrest in Bangalore, ಕಾಳಸಂತೆ‌ಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ, ಇಬ್ಬರ ಆರೋಪಿಗಳ ಬಂಧನ, ಬೆಂಗಳೂರಿನಲ್ಲಿ ಇಬ್ಬರ ಆರೋಪಿಗಳ ಬಂಧನ,
ಕಾಳಸಂತೆ‌ಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ
author img

By

Published : May 27, 2021, 9:09 AM IST

Updated : May 27, 2021, 9:14 AM IST

ಬೆಂಗಳೂರು: ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅರುಣ್ ಕುಮಾರ್ ಮತ್ತು ಸೈಯದ್ ಸಾಕೀಬ್ ಬಂಧಿತರು. ಇವರಿಂದ 5 ಜಂಬೋ ಮೆಡಿಕಲ್ ಆಕ್ಸಿಜನ್ ಸಿಲಿಂಡರ್​ಗಳು ಮತ್ತು 2 ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಕೊರೊನಾ ಹಿನ್ನೆಲೆ ಆಕ್ಸಿಜನ್ ಅಭಾವ ಹೆಚ್ಚಿರುವ ಕಾರಣ‌ ಹೆಚ್ಚು ಬೆಲೆಗೆ ಮಾರಾಟ ಮಾಡಲು ಬೊಮ್ಮನಹಳ್ಳಿಯಿಂದ ದೊಡ್ಡಬಳ್ಳಾಪುರಕ್ಕೆ ಯಲಹಂಕ ಮಾರ್ಗವಾಗಿ ಸಿಲಿಂಡರ್​ಗಳನ್ನು ಸಾಗಿಸುತ್ತಿದ್ದರು. ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರುತ್ತಿದ್ದರು. 700 ರೂ. ಬೆಲೆಯ 60 ಲೀಟರ್ ಸಿಲಿಂಡರ್​ಗೆ 5 ಸಾವಿರ ರೂ. ನಿಗದಿಪಡಿಸಿ ಮಾರಾಟಕ್ಕೆ ಮುಂದಾಗಿದ್ದರು. ಈ ವಿಚಾರ ತಿಳಿದ ಸಿಸಿಬಿ ಪೊಲೀಸರು, ಖದೀಮರನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : May 27, 2021, 9:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.