ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಮತ್ತೆ 20 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸಸ್ತಾಪೂರ್ ಗ್ರಾಮದ 27 ವರ್ಷದ ಕುವೈತ್ ಅಂತಾರಾಷ್ಟ್ರೀಯ ಪ್ರವಾಸ ಮಾಡಿದ್ದ ಯುವಕ, ಮಹಾರಾಷ್ಟ್ರದಿಂದ ವಾಪಸಾದ ಔರಾದ್ ತಾಲೂಕಿನ ಎಕಂಬಾ ಗ್ರಾಮದ 08, ಕಮಲನಗರ ತಾಲೂಕಿನ ಬೆಳಕೋಣಿ ಗ್ರಾಮದ 02, ಭಾಲ್ಕಿ ತಾಲೂಕಿನ ಆಳಂದಿಯ-01, ನಾಗರಾಳ-01, ಚಿಟಗುಪ್ಪ-01, ಬಸವಕಲ್ಯಾಣ ತಾಲೂಕಿನ ಉಮಾಪುರ್-01, ತಡೊಳಾ-03, ನಗರದ ಗುಂಪಾ ಬಡಾವಣೆಯ -01, ಚಿಟಗುಪ್ಪ ಪಟ್ಟಣದ ಕ್ರಿಶ್ಚಿಯನ್ ಕಾಲೋನಿಯ-01 ರಲ್ಲಿ ಸೋಂಕು ಪತ್ತೆಯಾಗಿದೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 370 ಕ್ಕೆ ಏರಿಕೆಯಾಗಿದ್ದು, 6 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ 203 ಜನರು ಗುಣಮುಖರಾಗಿದ್ದು, 161 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.