ಲೀಡ್ಸ್: ಪಾಕಿಸ್ತಾನ ವಿರುದ್ಧ ಕೊನೆಯ ಏಕದಿನ ಪಂದ್ಯದಲ್ಲಿ 54 ರನ್ಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯನ್ನು 4-0ಯಲ್ಲಿ ವಶಪಡಿಸಿಕೊಂಡಿದೆ.
ವಿಶ್ವಕಪ್ಗೂ ಮುನ್ನ ನಡೆದ ಮಹತ್ವದ ಸರಣಿಯಲ್ಲಿ ವಿಶ್ವಕಪ್ ಗೆಲ್ಲುವ ರೇಸ್ನಲ್ಲಿರುವ ಇಂಗ್ಲೆಂಡ್, ಪಾಕಿಸ್ತಾನವನ್ನು 4-0ಯಿಂದ ಮಣಿಸಿ ತಾನೂ ನಂ.1 ತಂಡವೆಂದು ನಿರೂಪಿಸಿದೆ.
ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡು 50 ಓವರ್ಗಳಲ್ಲಿ 351 ರನ್ ಗಳಿಸಿತು. ಆರಂಭಿಕರಾದ ಜೇಮ್ಸ್ ವಿನ್ಸ್ 33, ಬೈರ್ಸ್ಟೋವ್ 32, ರೂಟ್ 84, ಮಾರ್ಗನ್ 76, ಬಟ್ಲರ್ 34, ಸ್ಟೋಕ್ಸ್ 21 ಹಾಗೂ ಟಾಮ್ ಕರ್ರನ್ 29 ರನ್ ಗಳಿಸಿ ಉಪಯುಕ್ತ ಕೊಡುಗೆ ನೀಡಿದರು.
ಪಾಕಿಸ್ತಾನ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಯುವ ಬೌಲರ್ ಶಾಹೀನ್ ಆಫ್ರಿದಿ 84 ರನ್ ನೀಡಿ ದುಬಾರಿಯಾದರೂ 4 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಇಮಾದ್ ವಾಸಿಂ 3 ವಿಕೆಟ್, ಮೊಹಮ್ಮದ್ ಹಸ್ನೈನ್ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದರು.
352 ರನ್ಗಳ ಬೃಹತ್ ಮೊತ್ತ ಬೆನ್ನೆಟ್ಟಿದ ಪಾಕಿಸ್ತಾನ 3 ಓವರ್ಗಳಾಗುವಷ್ಟರಲ್ಲಿ ಫಾಖರ್ ಜಮಾನ್(0), ಅಬಿದ್ ಅಲಿ(5) ಹಾಗೂ ಮೊಹಮ್ಮದ್ ಹಫೀಜ್ (0) ವಿಕೆಟ್ ಕಳೆದುಕೊಂಡಿತು.
-
1️⃣1️⃣ consecutive ODI series without defeat! 👏
— England Cricket (@englandcricket) May 19, 2019 " class="align-text-top noRightClick twitterSection" data="
Highlights: https://t.co/mu5Be7Bjda#EngvPak pic.twitter.com/p6BLGUNwvg
">1️⃣1️⃣ consecutive ODI series without defeat! 👏
— England Cricket (@englandcricket) May 19, 2019
Highlights: https://t.co/mu5Be7Bjda#EngvPak pic.twitter.com/p6BLGUNwvg1️⃣1️⃣ consecutive ODI series without defeat! 👏
— England Cricket (@englandcricket) May 19, 2019
Highlights: https://t.co/mu5Be7Bjda#EngvPak pic.twitter.com/p6BLGUNwvg
ನಂತರ ಒಂದಾದ ಬಾಬರ್ ಅಜಂ(80)ಹಾಗೂ ನಾಯಕ ಸರ್ಫರಾಜ್ ಅಹ್ಮದ್(97) ರನ್ ಗಳಿಸಿ ತಂಡವನ್ನ ಗೆಲುವಿನತ್ತ ಕೊಡೊಯ್ಯಲು ಪ್ರಯತ್ನಿಸಿದರಾದರೂ ನಿರ್ಣಾಯಕ ಹಂತದಲ್ಲಿ ರನ್ ಕದಿಯಲು ಹೋಗಿ ರನ್ಔಟ್ ಆದರು.
ಕೊನೆಯಲ್ಲಿ ಆಸಿಫ್ ಅಲಿ 22, ಇಮಾದ್ ವಾಸಿಂ 25, ಹಸ್ನೈನ್ 28 ಹಾಗೂ ಆಫ್ರಿದಿ 19 ರನ್ ಗಳಿಸಿ ಗೆಲುವಿಗಾಗಿ ಮಾಡಿದ ಹೋರಾಟ ವಿಫಲವಾಯಿತು. ಪಾಕಿಸ್ತಾನ 46.5 ಓವರ್ಗಳಲ್ಲಿ 297 ರನ್ಗಳಿಗೆ ಆಲೌಟ್ ಆಗುವ ಮೂಲಕ 4-0ಯಲ್ಲಿ ಸರಣಿ ಕಳೆದುಕೊಂಡಿತು.
ಇಂಗ್ಲೆಂಡ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಬೆನ್ ವೋಕ್ಸ್ 5 ವಿಕೆಟ್ ಪಡೆದರೆ, ರಶೀದ್ 2, ಡೇವಿಡ್ ವಿಲ್ಲೆ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಏಕದಿನ ಶ್ರೇಯಾಂಕದಲ್ಲಿ ನಂ.1 ತಂಡವಾಗಿರುವ ಇಂಗ್ಲೆಂಡ್ ಈ ಸರಣಿ ಗೆಲುವಿನೊಂದಿಗೆ ತನ್ನ ವಿಶ್ವಕಪ್ ಗೆಲ್ಲುವ ರೇಸ್ನಲ್ಲಿ ತಾನೇ ಮೊದಲು ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿದೆ.