ETV Bharat / briefs

25 ಕ್ಷೇತ್ರ ಗೆದ್ದರೂ ಮೂರೇ ಸಂಸದರಿಗೆ ಪಟ್ಟ: ಹಲವರಲ್ಲಿ ನಿರಾಸೆ

ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದ ಕರ್ನಾಟಕಕ್ಕೆ ಕೇಂದ್ರದಲ್ಲಿ ಮೂವರಿಗೆ ಮಾತ್ರ ಸ್ಥಾನ ನೀಡಲಾಗಿದೆ. ಇದು ಹಲವರಲ್ಲಿ ನಿರಾಸೆ ಉಂಟು ಮಾಡಿದ್ದರೂ ಮುಗುಳು ನಗೆಯಲ್ಲಿಯೇ ಮೋದಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಂಸದ ಉಮೇಶ್ ಜಾಧವ್, ಕಲಬುರಗಿ ಸಂಸದ
author img

By

Published : May 30, 2019, 6:43 PM IST

ಬೆಂಗಳೂರು: ಲೋಕ ಸಮರದಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 25ನ್ನು ಗೆದ್ದು ಬೀಗಿರುವ ಬಿಜೆಪಿಯು ಕಾಂಗ್ರೆಸ್​ ಪಕ್ಷವನ್ನು ಧೂಳಿಪಟ ಮಾಡಿದೆ. ಇದರೊಂದಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯುವ ಬಹಳಷ್ಟು ನಿರೀಕ್ಷೆಯಲ್ಲಿದ್ದ ಬಿಜೆಪಿಯ ಹಲವು ಆಕಾಂಕ್ಷಿಗಳಿಗೆ ತೀವ್ರ ನಿರಾಸೆಯಾಗಿದೆ ಎನ್ನಲಾಗ್ತಿದೆ.

bgl
ಕೇಂದ್ರ ಸರ್ಕಾದ ಸಚಿವ ಸ್ಥಾನದ ಆಕಾಂಕ್ಷಿಗಳು

ಕರ್ನಾಟಕದ ಕೇವಲ ಮೂವರು ಸಂಸದರಿಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪದವಿ ದೊರೆತಿರುವುದು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ. ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡ ಎರಡನೇ ಬಾರಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸೋಲಿಲ್ಲದ ಸರದಾರ, ಕಲಬುರಗಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿರುವ ಡಾ. ಉಮೇಶ್​ ಜಾಧವ್ ಅವರಿಗೆ ಬಿಜೆಪಿ ಸೇರುವಾಗ ಸಚಿವ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ವರಿಷ್ಠರು ನೀಡಿದ್ದರಂತೆ. ಆದರೆ, ಸಚಿವ ಸ್ಥಾನ ಸ್ವೀಕರಿಸುವವರ ಪಟ್ಟಿಯಲ್ಲಿ ಜಾಧವ್​ ಹೆಸರು ಕೈಬಿಟ್ಟಿರುವುದು ಬೇಸರ ಉಂಟು ಮಾಡಿದೆ ಎನ್ನಲಾಗ್ತಿದೆ.

ತುಮಕೂರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಮಣಿಸಿದ್ದ ಜಿ.ಎಸ್. ಬಸವರಾಜು ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನದ ನಿರೀಕ್ಷೆ ಇತ್ತಾದರೂ ನಿರಾಸೆಯುಂಟಾಗಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಬರೋಬ್ಬರಿ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಅನಂತಕುಮಾರ ಹೆಗಡೆ ಅವರಿಗೂ ಸಚಿವ ಸ್ಥಾನ ಕೈತಪ್ಪಿದ್ದು ಹಲವರಿಗೆ ಶಾಕ್​ ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮುಖಂಡ, ಹಿರಿಯ ನಾಯಕರಾಗಿರುವ ಶ್ರೀನಿವಾಸ ಪ್ರಸಾದ್ ಅವರಿಗೆ ಮತ್ತು ಚುನಾವಣೆಯಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತಿದ್ದ ಪ್ರಬಲ ಸಮುದಾಯದ ಸಂಸದರಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡರ್, ಜಿ.ಎಸ್. ಬಸವರಾಜು, ಜಿ.ಎಂ. ಸಿದ್ದೇಶ್ವರ್ ಅವರ ನಿರೀಕ್ಷೆ ಸಹ ಹುಸಿಯಾಗಿದೆ.

ಕರ್ನಾಟಕ ಕೋಟಾದಲ್ಲಿ ನಿರ್ಮಲಾ ಸೀತಾರಾಮನ್​ ಅವರಿಗೆ ಸಚಿವ ಸ್ಥಾನ: ನೆರೆಯ ರಾಜ್ಯದವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಕೋಟಾದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಜಯ ಸಾಧಿಸಿರುವ ಶೋಭಾ ಕರಂದ್ಲಾಜೆ ಅವರಿಗೂ ಸಹ ಯಾವುದೇ ಸ್ಥಾನ ಸಿಗದಿರುವುದು ಅವರಲ್ಲಿ ಬೇಸರ ಮೂಡಿಸಿದೆ ಎಂದು ಹೇಳಲಾಗ್ತಿದೆ.

ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ ಅವರು ಎರಡನೇ ಬಾರಿಗೆ ಸಚಿವ ಸ್ಥಾನಕ್ಕೇರಿದ್ದಾರೆ.

Intro: ಘಟಾನುಘಟಿ ನಾಯಕರ ಸೋಲಿಸಿದವರಿಗೂ ಇಲ್ಲ
ಅತಿ ಹೆಚ್ಚು ಮತ ಪಡೆದವರಿಗೂ ಇಲ್ಲ ಸಚಿವ ಸ್ಥಾನ...!

ಬೆಂಗಳೂರು : ಪ್ರಧಾನಿ ಮೋದಿ ಸಂಪುಟದಲ್ಲಿ ಸಚಿವ ರಾಗುವ ಭಾಗ್ಯ ಸಿಗದಿರುವುದು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯದ ಹಲವಾರು ಬಿಜೆಪಿ ಸಂಸದರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ೨೫ ಸ್ಥಾನಗಳನ್ನು ಗೆಲ್ಲಿಸಿಕೊಟ್ಟ ಕರ್ನಾಟಕಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರೆಯಬಹುದೆಂದು ಭಾವಿಸಲಾಗಿತ್ತು. ಹತ್ತಾರು ಆಕಾಂಕ್ಷಿತರಲ್ಲಿ ಕೇವಲ ಮೂವರು ಸಂಸದರಿಗೆ ಮಾತ್ರ ಮಂತ್ರಿಪದವಿ ನೀಡಲಾಗಿದೆ‌. ( ಹೊರ ರಾಜ್ಯದ ನಿರ್ಮಲಾ ಸೀತಾರಾಮನ್ ಅವರಿಗೂ ಕರ್ನಾಟಕ ಕೋಟಾದಲ್ಲಿ ಸಚಿವ ಸ್ಥಾನ ನೀಡಲಾಗಿದೆ )

ರಾಜ್ಯದಲ್ಲಿ ಘಟಾನುಘಟಿ ನಾಯಕರಾದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ ಆಪರೇಶನ್ ಕಮಲದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಡಾ.ಉಮೇಶ್ ಜಾಧವ್ ಅವರಿಗೆ ಸಚಿವ ಸ್ಥಾನ ಸಿಗಬಹುದೆಂದು ಹೆಚ್ಚಿನ ನಿರೀಕ್ಷೆ ಇತ್ತು. ಬಿಜೆಪಿ ಸೇರುವಾಗಲೂ ಚುನಾವಣೆಯಲ್ಲಿ ಖರ್ಗೆಯವರನ್ನು ಸೋಲಿಸಿದರೆ ಕೇಂದ್ರದಲ್ಲಿ ಮಂತ್ರಿ ಪದವಿ ನೀಡುವ ಭರವಸೆಯನ್ನು ಸಹ ಬಿಜೆಪಿ ವರಿಷ್ಟರು ನೀಡಿದ್ದ ರಂತೆ. ಆದರೆ ಈಗ ಸಚಿವ ರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರ ಪಟ್ಟಿಯಲ್ಲಿ ಜಾಧವ್ ಹೆಸರಿರದಿರುವುದು ಅವರಿಗೆ ಬೇಸರ ಉಂಟುಮಾಡಿದೆ.

Body: ಮಾಜಿ ಪ್ರಧಾನಿ ದೇವೇಗೌಡರ ನ್ನು ತುಮಕೂರಿನಲ್ಲಿ ಮಣಿಸಿದ ಜಿಎಸ್ ಬಸವರಾಜು ಅವರಿಗೆ ಮೊದಲ ಹಂತದಲ್ಲೇ ಸಚಿವ ಸ್ಥಾನ ಸಿಗಬಹುದೆನ್ನುವ ನಿರೀಕ್ಷೆ ಇತ್ತು. ಆದರೆ ಅದೂ ಸಹ ಹುಸಿಯಾಗಿದೆ.

ರಾಜ್ಯದಲ್ಲಿಯೇ ಅತ್ಯಧಿಕ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ ಅನಂತಕುಮಾರ ಹೆಗಡೆ ಅವರಿಗೆ ಮಂತ್ರಿ ಸ್ಥಾನ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಹಲವರಲ್ಲಿ ಇತ್ತು. ಆದರೆ ಕಟ್ಟಾ ಹಿಂದುತ್ವವಾದಿಯಾದ ಅನಂತಕುಮಾರ ಹೆಗಡೆ ಅವರನ್ನೂ ಪ್ರಧಾನಿ ಮೋದಿ ಪಕ್ಷದ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಜೋಡಿ ಸಚಿವ ಸ್ಥಾನ ಕ್ಕೆ ಪರಿಗಣಿಸದಿರುವುದು ಶಾಕ್ ನೀಡಿದೆ.

ಪರಿಶಿಷ್ಟ ಜಾತಿ - ಪರಿಶಿಷ್ಟ ಪಂಗಡ ದಿಂದ ಹಿರಿಯ ಮುಖಂಡ ರಾದ ಮಾಜಿ ಕೇಂದ್ರ ಸಚಿವ ವಿ.ಶ್ರೀನಿವಾಸ ಪ್ರಸಾದ್ ಗೆ ಮಂತ್ರಿ ಸ್ಥಾನ ಸಿಕ್ಕರೂ ಸಿಗಬಹುದೆನ್ನುವ ಭರವಸೆ ಇತ್ತು ಅದೂ ಸಹ ಹುಸಿಯಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತ ಲಿಂಗಾಯತ ಸಮುದಾಯಕ್ಕೆ ಕನಿಷ್ಟ ಇಬ್ಬರಿಗೆ ಸಚಿವ ಸ್ಥಾನ ಈ ಬಾರಿ ದೊರೆಯಬಹುದು ಎಂದು ಭಾವಿಸಲಾಗಿತ್ತು. ಈ ಸಮುದಾಯದಿಂದ ಶಿವಕುಮಾರ ಉದಾಸಿ, ಪಿಸಿ ಗದ್ದಿಗೌಡರ್, ಜಿಎಸ್ ಬಸವರಾಜ್,ಜಿಎಂ ಸಿದ್ದೇಶ್ವರ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರನ್ನು ಮಾತ್ರ ಪರಿಗಣಿಸಿ ಉಳಿದವರನ್ನು ಲೆಕ್ಕಕ್ಕೆ ತಗೆದುಕೊಳ್ಳಲಾಗಿಲ್ಲ.

ಮಹಿಳಾ ಕೋಟಾ ದಿಂದ ಹಾಗು ಯಾವಾಗಲೂ ಬಿಜೆಪಿ ಬೆಂಬಲಿಸುತ್ತ ಬಂದಿರುವ ಕರಾವಳಿ ಭಾಗದಿಂದ ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿ ಸ್ಥಾನ ದೊರೆಯಬಹುದೆನ್ನುವ ಆಶಾ ಭಾವನೆ ಇತ್ತು.ಅದೂ ಸಹ ಈಡೇರಿಲ್ಲದಿರುವುದು ಪಕ್ಷದಲ್ಲಿ ಬೇಸರ ಮೂಡಿಸಿದೆ.

Conclusion:ಪ್ರಧಾನಿ ಮೋದಿ ಸಂಪುಟದಲ್ಲಿ ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದ ಗೌಡ ಅವರು ಎರಡನೇ ಬಾರಿ ಸಚಿವರಾದರೆ, ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ ಮಂತ್ರಿಯಾಗಿ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕರ್ನಾಟಕದಿಂದ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರಿಗೂ ಸಚಿವ ಸ್ಥಾನ ನೀಡಲಾಗಿದೆ. ಈ ಹಿಂದೆ ಪ್ರಧಾನಿ ಮೋದಿ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆಯವರ ನ್ನ ಎರಡನೇ ಬಾರಿಗೆ ಪರಿಗಣಿಸಲಾಗಿಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.