ಮುಂಬೈ: ಮೂರು ವಿಶ್ವಕಪ್ನಲ್ಲಿ ಆಡಿರುವ ಯುವರಾಜ್ ಸಿಂಗ್ ಸೇರಿದಂತೆ ಪ್ರಮುಖ 5 ಆಟಗಾರರು 2015 ರ ವಿಶ್ವಕಪ್ನಲ್ಲಿ ಆಡುವ ಕನಸು ನುಚ್ಚುನೂರಾಗಿದೆ.
2007 ಟಿ20 ಹಾಗೂ 2011ರ ಏಕದಿನ ವಿಶ್ವಕಪ್ಅನ್ನು ಭಾರತ ತಂಡಕ್ಕೆ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದ ಯುವರಾಜ್ ಸಿಂಗ್ ಈ ಬಾರಿ ತಮ್ಮ ಕೊನೆಯ ವಿಶ್ವಕಪ್ನಲ್ಲಿ ಆಡುವ ಕನಸು ಹೊತ್ತುಕೊಂಡಿದ್ದ 5 ಆಟಗಾರರಿಗೆ ಬಿಸಿಸಿಐ ನಿರಾಸೆ ಮೂಡಿಸಿದೆ.
1.ಯುವರಾಜ್ ಸಿಂಗ್
2003ರಿಂದ 2011 ರವರೆಗೆ 3 ವಿಶ್ವಕಪ್ನಲ್ಲಿ ಆಡಿದ ಅನುಭವವುಳ್ಳ ಯುವರಾಜ್ ಸಿಂಗ್ ಈ ಬಾರಿ ವಿಶ್ವಕಪ್ಗೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಇದೀಗ ಅವರ ನಿರೀಕ್ಷೆ ಹುಸಿಯಾಗಿದ್ದು, ಅವರ ವೃತ್ತಿಜೀವನ ಮುಕ್ತಾಯವಾದಂತಾಗಿದೆ. ಯುವರಾಜ್ 304 ಪಂದ್ಯಗಳಲ್ಲಿ 8701 ರನ್ಗಳಿಸಿದ್ದಾರೆ.
2.ಅಜಿಂಕ್ಯಾ ರಹಾನೆ
ಭಾರತದ ಟೆಸ್ಟ್ ತಂಡದ ಖಾಯಂ ಆಟಗಾರನಾಗಿರುವ ಅಜಿಂಕ್ಯ ರಹಾನೆಯನ್ನು ಬಿಸಿಸಿಐ ವಿಶ್ವಕಪ್ನಿಂದ ಕೈಬಿಟ್ಟಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ. ರಹಾನೆ ಇಂಗ್ಲೆಂಡ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಯ್ಕೆ ಸಮತಿ ರಹಾನೆ ಬದಲು ವಿಜಯ್ ಶಂಕರ್,ಕೇದಾರ್ ಜಾಧವ್ಗೆ 4 ನೇ ಕ್ರಮಾಂಕಕ್ಕೆ ಆಯ್ಕೆ ಮಾಡಿದೆ. ರಹಾನೆ 90 ಏಕದಿನ ಪಂದ್ಯಗಳಲ್ಲಿ 2962 ರನ್ಗಳಿಸಿದ್ದಾರೆ.
3.ಆರ್.ಅಶ್ವಿನ್
ಕಳೆದೆರಡು ವರ್ಷಗಳಿಂದ ಏಕದಿನ ಕ್ರಿಕೆಟ್ನಿಂದ ದೂರವಿರುವ ಅಶ್ವಿನ್ 111 ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡವನ್ನು ಪ್ರತಿನಿದಿಸಿದ್ದು 150 ವಿಕೆಟ್ ಪಡೆದಿದ್ದಾರೆ. ಆಸ್ವಿನ್ ಈ ಬಾರಿ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದರು,ಆದರೆ ಯುವ ರಿಸ್ಟ್ ಸ್ಪಿನ್ ಬೌಲರ್ಗಳಾದ ಕುಲದೀಪ್ ಹಾಗೂ ಚಹಾಲ್ ಅಶ್ವಿನ್ರನ್ನ ಹಿಂದಿಕ್ಕಿ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
4.ಸುರೇಶ್ ರೈನಾ
2011 ಹಾಗೂ 2015 ರ ವಿಶ್ವಕಪ್ನಲ್ಲಿ ಗೆಮ್ ಫಿನಿಸರ್ ಆಗಿದ್ದ ರೈನಾ ನಂತರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಆದರೂ ಟಿ20 ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರೈನಾ 19ರ ವಿಶ್ವಕಪ್ನಲ್ಲಿ 4 ನೇ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಬಿಸಿಸಿಐ ರೈನಾರ ಕನಸಿಗೆ ತಣ್ಣೀರೆರಚಿದೆ.
5.ಶ್ರೇಯಸ್ ಅಯ್ಯರ್
24 ವರ್ಷದ ಶ್ರೇಯಸ್ ಅಯ್ಯರ್ ಆಡಿರುವ 5 ಇನಿಂಗ್ಸ್ನಿಂದ 2 ಅರ್ಧಶತಕದ ಸಹಿತ 210 ರನ್ ಗಳಿಸಿದ್ದು, 4ನೇ ಸ್ಥಾನಕ್ಕೆ ಸೂಕ್ತ ಪ್ರತಿಭೆ ಎಂದು ಬಿಂಬಿಸಲಾಗಿತ್ತು. ಬಿಸಿಸಿ ಈ ಯುವ ಆಟಗಾರ ಚೊಚ್ಚಲ ವಿಶ್ವಕಪ್ ಆಸೆಯನ್ನು ಮುಂದೂಡಿಸಿದೆ. ಐಪಿಎಲ್, ವಿಜಯ್ ಅಜಾರೆ ಹಾಗೂ ಸಯ್ಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಅಯ್ಯರ್ ಅದ್ಭುತ ಪ್ರದರ್ಶನ ನೀಡಿದ್ದರು.