ಮಂಡ್ಯ: ಸುಮಲತಾ ಅಂಬರೀಶ್ ಅವರ ವಿಜಯೋತ್ಸವದಲ್ಲಿ ಪಿಕ್ ಪಾಕೆಟ್ ಮಾಡಿ ತನ್ನ ಸ್ನೇಹಿತರಿಗೆಲ್ಲೆ ಎಣ್ಣೆ ಹೊಡೆಸಿದ್ದ ಆರೋಪಿವೋರ್ವ ಈಗ ಕಂಬಿ ಎಣಿಸುವಂತಾಗಿದೆ.
ಇಂದು ನಗರದಲ್ಲಿ ನಡೆದ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಈತ ಪಿಕ್ ಪಾಕೆಟ್ ಮಾಡಿ ತನ್ನ ಸ್ನೇಹಿತರಿಗೆ ಪಾರ್ಟಿ ಕೊಡಿಸುತ್ತಿದ್ದ. ಹಣ ಕಳಡದುಕೊಂಡ ವ್ಯಕ್ತಿ ಈತನಿಗಾಗಿ ಹುಡುಕಾಟ ನಡೆಸಿದಾಗ, ಬಾರ್ವೊಂದರಲ್ಲಿ ಚಾಲಾಕಿ ಸಿಕ್ಕಿಬಿದ್ದಿದ್ದಾನೆ.
ಸುಮಲತಾ ಅಂಬರೀಶ್ ಆಗಮನದ ವೇಳೆ ಅಭಿಮಾನಿಗಳು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಈ ವೇಳೆ ಭಾನುಪ್ರಕಾಶ್ ಎಂಬುವರ ಪಿಕ್ ಪಾಕೇಟ್ ಮಾಡಿದ್ದ ಖದೀಮ, ಪರ್ಸ್‌ನಲ್ಲಿದ್ದ 9 ಸಾವಿರ ರೂ. ಹಣದಿಂದ ಗೆಳೆಯರಿಗೆ ಗುಂಡು-ತುಂಡಿನ ಪಾರ್ಟಿ ಕೊಡಿಸುತ್ತಿದ್ದನಂತೆ. ಈ ವೇಳೆ ಹಣ ಕಳೆದುಕೊಂಡ ಭಾನುಪ್ರಕಾಶ್ ಕೈಗೆ ಬಾರ್ಲ್ಲಿ ಸಿಕ್ಕಿದ್ದಾನೆ. ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.