ಲಂಡನ್: ಐಸಿಸಿ ಏಕದಿನ ವಿಶ್ವಕಪ್ಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ತಾನು ಆಡಿರುವ ಮೊದಲ ಅಭ್ಯಾಸ ಪಂದ್ಯದಲ್ಲೇ ನ್ಯೂಜಿಲ್ಯಾಂಡ್ ವಿರುದ್ಧ ಮುಗ್ಗರಿಸಿ, ಮುಖಭಂಗಕ್ಕೊಳಗಾಗಿದೆ. ಇದರ ಮಧ್ಯೆ ಅನೇಕ ಟೀಕೆಗಳು ತಂಡದ ವಿರುದ್ಧ ಕೇಳಿ ಬರಲಾರಂಭಿಸಿವೆ.
ಇದರಿಂದ ಎಚ್ಚೆತ್ತುಕೊಂಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಹ ಆಟಗಾರರಿಗೆ ವಾರ್ನ್ ಮಾಡಿದ್ದಾರೆ. ಆರಂಭಿಕ ಜೋಡಿ ಬ್ಯಾಟಿಂಗ್ನಲ್ಲಿ ದಿಢೀರ್ ಕುಸಿತ ಕಂಡಾಗ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಪ್ಲೇಯರ್ಸ್ ಸಜ್ಜುಗೊಂಡಿರಬೇಕು ಎಂದು ಹೇಳಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಮಾಡುವುದು ಕೆಲವೊಮ್ಮೆ ಕಷ್ಟ. ಹೀಗಾಗಿ ಯಾವುದೇ ಪರಿಸ್ಥಿತಿಯಲ್ಲೂ ಬ್ಯಾಟ್ ಬೀಸಲು ಸಜ್ಜಾಗಿರಬೇಕು ಎಂದು ಆಟಗಾರರನ್ನ ಕೊಹ್ಲಿ ಎಚ್ಚರಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 39ರನ್ಗಳಿಸುವಷ್ಟರಲ್ಲಿ 4ವಿಕೆಟ್ ಕಳೆದುಕೊಂಡಿತ್ತು. ಇದಾದ ಬಳಿಕ ಬಂದ ಆಟಗಾರರ ಪೈಕಿ ಜಡೇಜಾ ಹೊರತುಪಡಿಸಿ ಉಳಿದ ಆಟಗಾರರು ತಂಡವನ್ನ ಉತ್ತಮ ಮೊತ್ತದತ್ತ ತೆಗೆದುಕೊಂಡು ಹೋಗುವಲ್ಲಿ ವಿಫಲಗೊಂಡರು. ನ್ಯೂಜಿಲ್ಯಾಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆರು ವಿಕೆಟ್ಗಳ ಸೋಲು ಕಂಡಿರುವ ಟೀಂ ಇಂಡಿಯಾ ಮತ್ತೊಂದು ಅಭ್ಯಾಸ ಪಂದ್ಯವನ್ನ ಬಾಂಗ್ಲಾ ವಿರುದ್ಧ ಆಡಲಿದ್ದು, ಜೂನ್ 5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನ ಆಡಲಿದೆ.