ಬೆಂಗಳೂರು: ವರ್ಗಾವಣೆ ಅಭಿವೃದ್ಧಿ ಹಕ್ಕು (ಟಿಡಿಆರ್) ಹಗರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಎಸಿಬಿ ಅಧಿಕಾರಿಗಳಿಂದ ದಾಳಿಗೆ ಒಳಗಾಗಿ ನಿನ್ನೆ ವಿಚಾರಣೆಗೊಳಪಟ್ಟಿದ್ದ ವಾಲ್ ಮಾರ್ಕ್ ಕಂಪೆನಿಯ ನಿರ್ದೇಶಕ ರತನ್ ಬಾಬುಲಾಲ್ ಲಾಥ್ಗೆ ಮತ್ತೆ ಇಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.
ನಿನ್ನೆ ಬೆಳ್ಳಗೆ 11 ಗಂಟೆಯಿಂದ ಸಂಜೆವರೆಗೂ ವಿಚಾರಣೆಗೆ ಹಾಜರಾಗಿದ್ದು, ಎಸಿಬಿ ಅಧಿಕಾರಿಗಳು ಕೇಳಿದ್ದ 120 ಪ್ರಶ್ನೆಗಳಿಗೂ ತಮ್ಮ ಮೇಲೆ ಬಂದಿರುವ ಟಿಡಿಆರ್ ಹಗರಣಕ್ಕೂ ಸಂಬಂಧ ಇಲ್ಲದಂತೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಸ್ತೆ ವಿಸ್ತರಣೆಗಾಗಿ ರಾಮಮೂರ್ತಿ ನಗರದಿಂದ ಟಿ.ಸಿ.ಪಾಳ್ಯ ಸಿಗ್ನಲ್ವರೆಗೂ ಸುಮಾರು 1500 ಅಡಿ ಜಾಗ ಅಕ್ರಮವಾಗಿ ಡೆವಲಪ್ವೆುಂಟ್ ರೈಟ್ಸ್ ಸರ್ಟಿಫಿಕೆಟ್ (ಡಿಆರ್ಸಿ) ಮಾಡಿಸಿಕೊಂಡಿದ್ದು, ಈ ಮೂಲಕ ಇದೇ ರಸ್ತೆಯೊಂದರಲ್ಲಿ ಸುಮಾರು 56.39 ಕೋಟಿ ರೂ.ಹಗರಣ ಇದಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಬಿಡದಿಯಲ್ಲೂ ಮೂರೂವರೆ ಎಕರೆಯಲ್ಲಿ ಅಂದಾಜು 30 ಕೋಟಿ ರೂ. ಮೌಲ್ಯದ ಡಿಆರ್ ಸಿ ಮಾಡಿಸಿಕೊಂಡಿರುವ ಈತನ ಮೇಲಿದೆ. ಆರೋಪಿಗಳಾದ ಬಿ.ಎಸ್ ಸುರೇಂದ್ರನಾಥ್, ಕೆ.ಗೌತಮ್, ಸುರೇಶ್ ನಿಗೂ ಹೋಗಿದೆ ತಲಾ ಶೇ.15ರಷ್ಟು ಹಣ ಹಂಚಿಕೆಯಾಗಿದೆ ಎನ್ನಲಾಗುತ್ತಿದೆ.. ಪ್ರಕರಣದಲ್ಲಿ ಕೆಲ ಪಾಲಿಕೆ ಸದಸ್ಯರು, ಬಿಬಿಎಂಪಿ, ಬಿಡಿಎ ಅಧಿಕಾರಿಗಳ ಕೈವಾಡವಿದ್ದು, ನೊಟೀಸ್ ನೀಡಲು ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.