ಚೆನ್ನೈ: ಐಪಿಎಲ್ನ ಮೊದಲ ಕ್ವಾಲಿಫೈಯರ್ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಆರು ವಿಕೆಟ್ಗಳಿಂದ ಮಣಿಸಿ ಮೊದಲ ತಂಡವಾಗಿ ಉಪಾಂತ್ಯ ಪ್ರವೇಶಿಸಿದೆ.
ಚೆನ್ನೈ ನೀಡಿದ್ದ 132 ರನ್ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ರೋಹಿತ್ ಪಡೆ 18.3 ಓವರ್ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿದೆ.
ಆರಂಭಿಕರಾದ ರೋಹಿತ್ ಶರ್ಮ(4) ಹಾಗೂ ಡಿಕಾಕ್(8) ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಈ ವೇಳೆ ಕ್ರಿಸ್ಗೆ ಆಗಮಿಸಿದ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
54 ಎಸೆತದಲ್ಲಿ 71 ಸಿಡಿಸಿದ ಸೂರ್ಯಕುಮಾರ್ಗೆ 28 ಬಾರಿಸುವ ಮೂಲಕ ಇಶಾನ್ ಕಿಶನ್ ಉತ್ತಮ ಸಾಥ್ ನೀಡಿದರು.
-
Off we go to Hyderabad to add some GOLD to our BLUE. #Believe 🏆💙#OneFamily #CricketMeriJaan #MumbaiIndians #MIvCSK pic.twitter.com/yVlbr1AZLT
— Mumbai Indians (@mipaltan) May 7, 2019 " class="align-text-top noRightClick twitterSection" data="
">Off we go to Hyderabad to add some GOLD to our BLUE. #Believe 🏆💙#OneFamily #CricketMeriJaan #MumbaiIndians #MIvCSK pic.twitter.com/yVlbr1AZLT
— Mumbai Indians (@mipaltan) May 7, 2019Off we go to Hyderabad to add some GOLD to our BLUE. #Believe 🏆💙#OneFamily #CricketMeriJaan #MumbaiIndians #MIvCSK pic.twitter.com/yVlbr1AZLT
— Mumbai Indians (@mipaltan) May 7, 2019
ಚೆನ್ನೈ ಪರ ಇಮ್ರಾನ್ ತಾಹಿರ್ ಎರಡು ವಿಕೆಟ್ ಕಿತ್ತರೆ, ಹರ್ಭಜನ್ ಸಿಂಗ್ ಹಾಗೂ ದೀಪಕ್ ಚಹರ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಬುಧವಾರ ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದರಲ್ಲಿ ವಿಜೇತ ತಂಡದ ಜೊತೆಗೆ ಚೆನ್ನೈ ಮೇ 10ರಂದು ಎರಡನೇ ಕ್ವಾಲಿಫೈಯರ್ ಆಡಲಿದೆ. ದ್ವಿತೀಯ ಕ್ವಾಲಿಫೈಯರ್ನಲ್ಲಿ ಗೆದ್ದ ಟೀಮ್ ಮೇ 12ರಂದು ಮುಂಬೈ ಇಂಡಿಯನ್ಸ್ ಜೊತೆಗೆ ಪ್ರಶಸ್ತಿಗಾಗಿ ಸೆಣಸಾಡಲಿದೆ.