ಸುರಪುರ: ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಮನರಂಜನೆಯ ಮೂಲಕ ಆತ್ಮಸ್ಥೈರ್ಯ ತುಂಬಲು ಶಾಸಕ ನರಸಿಂಹ ನಾಯಕ ರಾಜುಗೌಡ ಮುಂದಾಗಿದ್ದಾರೆ.
ಹುಣಸಗಿ ತಾಲೂಕಿನ ರಾಜನಕೋಳೂರು ಕೊಡೆಕಲ್ ಮಧ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಶಾಸಕ ನರಸಿಂಹನಾಯಕ ರಾಜುಗೌಡ ಡೊಳ್ಳು ಬಾರಿಸುವ ಮೂಲಕ ಸೋಂಕಿತರಿಗೆ ಮನರಂಜನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ಡೊಳ್ಳು ಕುಣಿತವನ್ನು ಪ್ರದರ್ಶಿಸುತ್ತಿದ್ದರೆ, ಇದನ್ನು ಕಂಡ ಕೊರೊನಾ ಸೋಂಕಿತರು ಶಾಸಕ ರಾಜುಗೌಡ ತಮಗಾಗಿ ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಶಾಸಕರು ನಮಗಾಗಿ ಇಂತಹ ಕಾರ್ಯ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.