ಬೆಂಗಳೂರು: 2014ರಲ್ಲಿ ತೆರೆ ಕಂಡಿದ್ದ ಕೊಚ್ಚಡಿಯನ್ ಸಿನಿಮಾಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಯೊಂದಕ್ಕೆ ಹಣ ಪಾವತಿಸುವಂತೆ ನೀಡಿದ್ದ ಆದೇಶ ಪಾಲಿಸದ ಹಿನ್ನಲೆಯಲ್ಲಿ ತಮಿಳು ನಟ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಕೊಚ್ಚಡಿಯನ್ ಸಿನಿಮಾ ಸಂಬಂಧ ಜಾಹೀರಾತು ಮಾಡಿದ್ದ ಆಡ್ ಬ್ಯೂರೋ ಆಡ್ವಟೈಸಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಸಂಭಾವನೆಯಲ್ಲಿ ವ್ಯತ್ಯಾಸ ಮಾಡಿದ್ದ ಲತಾ ರಜಿನಿಕಾಂತ್ ವಿರುದ್ದ ಸಿವಿಲ್ ಕೋರ್ಟ್ನಲ್ಲಿ ಕಂಪೆನಿ ಮಾಲೀಕ ಅಬಿರ್ ಚಂದ್ ನಹರ್ ಕೋರ್ಟ್ನಲ್ಲಿ 10 ಕೋಟಿ ವಂಚನೆ ಕೇಸ್ ಹಾಕಿದ್ದರು .ಅಲ್ಲದೇ ನಕಲಿ ದಾಖಲೆ ತೋರಿಸಿ ವಂಚನೆ ಮಾಡಿದ್ದ ಅರೋಪ ಮಾಡಿದ್ದರು. ಆದರೆ ಇದನ್ನ ಪ್ರಶ್ನೀಸಿ ಲತಾ ರಜನಿಕಾಂತ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್ ಕ್ವಾಷ್ ಮಾಡಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಆ್ಯಡ್ ಕಂಪನಿ ಮಾಲೀಕ ನಂತರ ಪ್ರಕರಣವನ್ನ ವಿಚಾರಣೆ ಮಾಡಿದ್ದ ಸುಪ್ರೀಂಕೋರ್ಟ್ ಪೊಲೀಸರಿಗೆ ತನಿಖೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನಲೆ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಹಲಸೂರುಗೇಟ್ ಪೊಲೀಸರು ನೊಟಿಸ್ ಜಾರಿ ಮಾಡಿದ್ದಾರೆ. ಈ ಹಿಂದೆ ಕೂಡ ಅವರಿಗೆ ನೋಟಿಸ್ ಜಾರಿ ಮಾಡಿದಾಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.
ಇದೀಗ ನೋಟಿಸ್ ರಿಸಿವ್ ಮಾಡಿರುವ ಲತಾ, ನಾನು ಪ್ರವಾಸದಲ್ಲಿದ್ದೇನೆ ಮೇ 20ರ ನಂತರ ಹಾಜರಾಗುವುದಾಗಿ ಹೇಳಿದ್ದಾರೆ. ಇನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಳೆದ 2015ರಲ್ಲಿ ಎಫ್ಐಆರ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 196,199,420,463 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.