ETV Bharat / briefs

"ಡೆಲ್ಟಾ ವಿರುದ್ಧದ ಹೋರಾಟಕ್ಕೆ Sputnik V​ ಹೆಚ್ಚು ಪರಿಣಾಮಕಾರಿ" - ಅಪೊಲೊ ಆಸ್ಪತ್ರೆ

ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಸ್ಪುಟ್ನಿಕ್​ ವಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದ ವರದಿಯೊಂದು ತಿಳಿಸಿದೆ. ಸದ್ಯ ಸ್ಪುಟ್ನಿಕ್ ವಿ ಲಸಿಕೆ ಬೆಲೆ 1,145 ರೂ. ಇದ್ದು, ಇದು ಆಸ್ಪತ್ರೆಯ ಶುಲ್ಕಗಳು ಮತ್ತು ತೆರಿಗೆಯನ್ನು ಒಳಗೊಂಡಿರುತ್ತದೆ.

ಸ್ಪುಟ್ನಿಕ್​ ವಿ
ಸ್ಪುಟ್ನಿಕ್​ ವಿ
author img

By

Published : Jun 15, 2021, 5:20 PM IST

Updated : Jun 15, 2021, 5:26 PM IST

ಕೊರೊನಾ ವೈರಸ್​ನ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡಲು ಸ್ಪುಟ್ನಿಕ್​ ವಿ ಹೆಚ್ಚು ಪರಿಣಾಮಕಾರಿಯಾಗಿದೆ. ರಷ್ಯಾದ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಇಂದಿನಿಂದ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಸ್ಪುಟ್ನಿಕ್ ವಿ ಲಸಿಕೆ ಬೆಲೆ 1,145 ರೂ. ಇದ್ದು, ಇದು ಆಸ್ಪತ್ರೆಯ ಶುಲ್ಕಗಳು ಮತ್ತು ತೆರಿಗೆಯನ್ನು ಒಳಗೊಂಡಿರುತ್ತದೆ.

ಅಪೊಲೊ ಆಸ್ಪತ್ರೆಗಳು ಮತ್ತು ಡಾ. ರೆಡ್ಟೀಸ್​ ಲ್ಯಾಬ್​ನಲ್ಲಿ​ ‘ಸ್ಪುಟ್ನಿಕ್ ವಿ' ರೋಲ್- ಔಟ್ ಮಾಡುವ ಮೊದಲ ಹಂತದ ಪ್ರಾಯೋಗಿಕವಾಗಿ ಬಳಕೆ ಆರಂಭವಾಗಿದೆ. ಮೇ 17 ರಂದು ಹೈದರಾಬಾದ್‌ನಲ್ಲಿ ಮತ್ತು ಮೇ 18 ರಂದು ವಿಶಾಖಪಟ್ಟಣಂನಲ್ಲಿ ನಡೆದಿತ್ತು.

ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ತುರ್ತು ಬಳಕೆಗೆ ಉಪಯೋಗಿಸುವುದಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದೆ. ಇದು COVID-19 ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತದೆ. ಈಗಾಗಲೇ ಭಾರತದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಯನ್ನು ದೇಶದಲ್ಲಿ ಜನರಿಗೆ ನೀಡಲಾಗುತ್ತಿದೆ.

ರಷ್ಯಾದ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್​ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಈ ಲಸಿಕೆ ಶೇಕಡಾ 94.3 ರಷ್ಟು ಪರಿಣಾಮಕಾರಿ ಎಂದು ಹೇಳಲಾಗುತ್ತದೆ.

ಇತ್ತೀಚೆಗೆ, ಭಾರತವು ರಷ್ಯಾದಿಂದ ಸುಮಾರು 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಪಡೆದುಕೊಂಡಿದೆ. ಇದು ಆಮದು ಮಾಡಿದ ಕೋವಿಡ್ -19 ಲಸಿಕೆಗಳ ಮೂರನೇ ಮತ್ತು ಅತಿದೊಡ್ಡ ವಿತರಣೆಯಾಗಿದೆ. ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಈ ಲಸಿಕೆಗಳು ಆಗಮಿಸಿದ್ದವು.

Last Updated : Jun 15, 2021, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.