ಬೆಂಗಳೂರು: ಲಕ್ಷಾಂತರ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿರುವ ಐಎಂಎ ಸಂಸ್ಥೆಯ ವಂಚನೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡವು(ಎಸ್ಐಟಿ) ಐಎಂಎ ಸಂಸ್ಥೆಯ ಆಡಿಟರ್ ಇಕ್ಬಾಲ್ ಖಾನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ಚುರುಕುಗೊಳಿಸಿದೆ.
ಎಸ್ ಐಟಿಯಿಂದ ಶುಕ್ರವಾರ ನಡೆದಿದ್ದ ವಿಚಾರಣೆಯಲ್ಲಿ ವಂಚನೆ ಪ್ರಕರಣದಲ್ಲಿ ಕಂಪನಿ ಆಡಿಟರ್ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎನ್ನಲಾಗಿದೆ. 2009ರಲ್ಲಿ ಸ್ಥಾಪನೆಯಾಗಿದ್ದ ಐಎಂಎ ಕಂಪನಿ 2016ರವರೆಗೂ ನಡೆದ ಹಣದ ವ್ಯವಹಾರ ಸಾವಿರಾರು ಕೋಟಿ ನಡೆದಿದೆ. ಕಳೆದ 13 ವರ್ಷದಲ್ಲಿ ಐಎಂಎ ಕಂಪೆನಿ ವ್ಯವಹಾರ ₹11,500 ಕೋಟಿ ವ್ಯವಹಾರ ನಡೆದಿದೆ. ಕಂಪೆನಿಗೆ ಯಾರ ಬಳಿಯಿಂದ ಯಾರಿಗೆ ಹಣ ವರ್ಗಾವಣೆಯಾಗಿತ್ತು ಎಂಬುದರ ಬಗ್ಗೆ ಹೇಳಿದ್ದಾರೆ. ಹಣದ ವಹಿವಾಟು ಮಾಹಿತಿ ಆಧರಿಸಿ ಎಸ್ಐಟಿ ತನಿಖೆ ಚುರುಕುಗೊಳಿಸಿದೆ.