ಮಹಾರಾಷ್ಟ್ರ : ದೇಶಾದ್ಯಂತ ಬಿಜೆಪಿ ಕರೆ ನೀಡಿರುವ ಧರಣಿ ಬಗ್ಗೆ ಶಿವಸೇನೆ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಾದ್ಯಂತ ಇಂತಹ ಸೂಪರ್ ಸ್ಪ್ರೆಡರ್ ಧರಣಿ ಕಾರ್ಯಕ್ರಮಗಳು ನಡೆಯಬೇಕಾಗುತ್ತದೆ. ಬಿಜೆಪಿಗೆ ಇನ್ನೂ ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವುದು ಕಾಣುತ್ತಿಲ್ಲ ಎನಿಸುತ್ತಿದೆ ಎಂದು ಚತುರ್ವೇದಿ ಟಾಂಗ್ ನೀಡಿದ್ದಾರೆ.
ಬಂಗಾಳದಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಗೊಂಡ ಬಳಿಕ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ವ್ಯಾಪಕ ಹಿಂಸಾಚಾರದ ವಿರುದ್ಧ ಬಿಜೆಪಿ ಮೇ 5ರಂದು ರಾಷ್ಟ್ರವ್ಯಾಪಿ ಧರಣಿ ನಡೆಸಲಿದೆ.
ಪಕ್ಷದ ಎಲ್ಲಾ ಸಾಂಸ್ಥಿಕ ಮಂಡಳಿಗಳಲ್ಲಿನ ಎಲ್ಲಾ ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಚತುರ್ವೇದಿ, ಬಿಜೆಪಿಯ ಪ್ರಕಾರ ಕೊರೊನಾ ದೇಶದಲ್ಲಿ ಇನ್ನೂ ಹೆಚ್ಚಾಗಿಲ್ಲ ಎಂದು ಅಂದುಕೊಂಡಿದೆಯೋ ಏನೋ ಎಂದು ಕುಹಕವಾಡಿದ್ದಾರೆ.