ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ವೇಳೆ ಗಾಯಗೊಂಡಿದ್ದ ಶಿಖರ್ ಧವನ್ ಸ್ಥಾನಕ್ಕೆ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಆಯ್ಕೆಯಾಗಲಿದ್ದಾರೆಂಬ ಗೊಂದಲಕ್ಕೆ ಬಿಸಿಸಿಐ ತೆರೆ ಎಳೆದಿದೆ.
ಗಾಯಗೊಂಡಿರುವ ಶಿಖರ್ ಧವನ್ ಮೇಲೆ ಬಿಸಿಸಿಐನ ವೈದ್ಯಕೀಯ ಟೀಂ ನಿಗಾ ಇಟ್ಟಿದ್ದು, ಅವರನ್ನೇ ಇಂಗ್ಲೆಂಡ್ ಪ್ರವಾಸದಲ್ಲಿ ಮುಂದುವರಿಸಲು ಮ್ಯಾನೇಜ್ಮೆಂಟ್ ಮುಂದಾಗಿರುವುದಾಗಿ ಪ್ರಕಟಣೆ ಹೊರಡಿಸಿದೆ.
-
Team India opening batsman Mr Shikhar Dhawan is presently under the observation of the BCCI medical team. The team management has decided that Mr Dhawan will continue to be in England and his progress will be monitored. #TeamIndia pic.twitter.com/8f1RelCsXf
— BCCI (@BCCI) June 11, 2019 " class="align-text-top noRightClick twitterSection" data="
">Team India opening batsman Mr Shikhar Dhawan is presently under the observation of the BCCI medical team. The team management has decided that Mr Dhawan will continue to be in England and his progress will be monitored. #TeamIndia pic.twitter.com/8f1RelCsXf
— BCCI (@BCCI) June 11, 2019Team India opening batsman Mr Shikhar Dhawan is presently under the observation of the BCCI medical team. The team management has decided that Mr Dhawan will continue to be in England and his progress will be monitored. #TeamIndia pic.twitter.com/8f1RelCsXf
— BCCI (@BCCI) June 11, 2019
ಲಭ್ಯವಾಗಿರುವ ಮಾಹಿತಿ ಪ್ರಕಾರ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯಗಳಿಂದ ಶಿಖರ್ ಧವನ್ ಹೊರಗುಳಿಯಲಿದ್ದು, ಅಷ್ಟರೊಳಗೆ ಅವರು ಗುಣಮುಖರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಶತಕ ಸಿಡಿಸಿದ್ದ ಶಿಖರ್, ಕೌಲ್ಟರ್ ನೇಲ್ ಓವರ್ನಲ್ಲಿ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಪಂದ್ಯದಲ್ಲಿ ಶಿಖರ್ ಕ್ಷೇತ್ರ ರಕ್ಷಣೆ ಮಾಡಿರಲಿಲ್ಲ.
ಒಂದು ವೇಳೆ ವಿಶ್ವಕಪ್ ಟೂರ್ನಿಯಲ್ಲಿ ಶಿಖರ್ ಧವನ್ ಮುಂದುವರೆದು ಕೆಲ ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡರೆ, ಆರಂಭಿಕರಾಗಿ ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್ ನಡೆಸಲಿದ್ದು, ನಾಲ್ಕನೇ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಳ್ಳಲಿದ್ದಾರೆ.
ಇದಕ್ಕೂ ಮೊದಲು ಶಿಖರ್ ಧವನ್ ಸ್ಥಾನಕ್ಕೆ ವಿಶ್ವಕಪ್ನ ಮೀಸಲು ಆಟಗಾರ ರಿಷಭ್ ಪಂತ್ ಆಯ್ಕೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.