ETV Bharat / briefs

ಈ ಸಲ ವಿಶ್ವಕಪ್ ಗೆಲ್ಲೋರು ಯಾರು? ಕಾರಣ ಕೊಟ್ಟು ಭವಿಷ್ಯ ನುಡಿದ ಸಚಿನ್‌ - ಧೋನಿ

ಈ ಬಾರಿ ಇಂಗ್ಲೆಂಡ್​ ತಂಡ ವಿಶ್ವ ಚಾಂಪಿಯನ್​ ಆಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕ್ರಿಕೆಟ್‌ ಮಾಂತ್ರಿಕ ​, ಈ ಬಾರಿ ಕಪ್​ ಭಾರತಕ್ಕೆ ಬರಲಿದೆ, ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಭವಿಷ್ಯ ನುಡಿದರು.

ಸಚಿನ್​
author img

By

Published : May 2, 2019, 10:59 PM IST

ಮುಬೈ: ಈ ಬಾರಿ ವಿಶ್ವಕಪ್​ ಇಂಗ್ಲೆಂಡ್​ಗೆ ಸೇರಲಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್​ ತೆಂಡೂಲ್ಕರ್​, ಈ ಬಾರಿ ಕಪ್‌ ನಮ್ದೆ ಎಂದು ಬಲವಾದ ವಿಶ್ವಾಸ ವ್ಯಕ್ತಪಡಿಸಿದ್ರು.

ಇಂದು ತಮ್ಮದೇ ಒಡೆತನದ ಮಿಡಲ್​ಎಸೆಕ್ಸ್​ ಕ್ರಿಕೆಟ್​ ಅಕಾಡೆಮಿಯಲ್ಲಿ ನಡೆದ ತರಬೇತಿ ಕ್ಯಾಂಪ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವಿಶ್ವಕಪ್​ ಇಂಗ್ಲೆಂಡ್​ನಲ್ಲಿ ನಡೆಯುವುದರಿಂದ ಇಂಗ್ಲೆಂಡ್​ ತಂಡ ಚಾಂಪಿಯನ್​ ಆಗಬಹುದೇ ಎಂದ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸಚಿನ್​, ಈ ಬಾರಿ ವಿಶ್ವಕಪ್​ ಭಾರತಕ್ಕೆ ಬರಲಿದೆ, ಇದರಲ್ಲಿ ಯಾವುದೇ ಸಂದೇಹ ಬೇಡ ಎಂದು ನಗುಮುಖದಿಂದ ಉತ್ತರಿಸಿದ್ರು.

ಮೇ 30 ರಿಂದ ಇಂಗ್ಲೀಷರ ನಾಡಿನಲ್ಲಿ ನಡೆಯಲಿರುವ ವಿಶ್ವಕಪ್​ ಎಲ್ಲಾ ತಂಡಗಳಿಗೂ ಚಾಲೆಂಜ್​ ಆಗಲಿದೆ ಎಂಬ ಮಾತಿಗೆ ದನಿಗೂಡಿಸಿರುವ ಅವರು,, ನಮ್ಮ ತಂಡ ಕಳೆದ ಕೆಲವು ತಿಂಗಳಿನಿಂದ ಅತ್ಯುತ್ತಮ ಕ್ರಿಕೆಟ್‌ ಆಡುತ್ತಿದೆ. ಈ ವೇಳೆ ಎದುರಾಳಿ ತಂಡದ ಕೆಲವು ದೌರ್ಬಲ್ಯಗಳ ಜೊತೆಗೆ ತಂತ್ರಗಾರಿಕೆಗಳನ್ನು ಕಂಡುಕೊಂಡಿರುವುದರಿಂದ ವಿಶ್ವಕಪ್​ನಂಥ ದೊಡ್ಡ ಸರಣಿಯಲ್ಲಿ ಅನುಕೂಲವಾಗಲಿದೆ ಎಂದರು.

ಬೇಸಿಗೆಯಲ್ಲಿ ಇಂಗ್ಲೆಂಡ್​ ಪಿಚ್​ಗಳು ತುಂಬಾ ಫ್ಲಾಟ್​ ಅಗಿರಲಿದ್ದು, ಬ್ಯಾಟಿಂಗ್​ ನಡೆಸಲು ತುಂಬಾ ಸುಲಭವಾಗಲಿದೆ. ಸೂರ್ಯಾಸ್ತದ ನಂತರ ಪಿಚ್‌ನಲ್ಲಿ ತೇವದ ಅಂಶ ಕಂಡುಬರುವ ಕಾರಣ ಚೆಂಡು ಸ್ವಿಂಗ್‌ ಆಗಬಹುದು. ಆದರೂ ಇದು ಹೆಚ್ಚು ಕಾಲ ನಡೆಯುವುದಿಲ್ಲ, ಕೇವಲ ಆರಂಭಿಕ ಓವರ್‌ಗಳಲ್ಲಿ ಮಾತ್ರವೇ ಚೆಂಡು ತಿರುವು ಪಡೆಯಲು ಸಾಧ್ಯವಾಗಿರುವುದರಿಂದ ಬೌಲರ್​ಗಳಿಗಿಂತ ಬ್ಯಾಟ್ಸ್​ಮನ್​ಗಳೇ ಹೆಚ್ಚು ಮಿಂಚಲಿದ್ದಾರೆ. ಇದು ಕೂಡ ಭಾರತ ತಂಡಕ್ಕೆ ಹೆಚ್ಚು ಅನುಕೂಲ ಎಂದಿದ್ದಾರೆ.

ಜೊತೆಗೆ ಭಾರತ ತಂಡ ಕಳೆದ ವರ್ಷವಷ್ಟೇ ಇಂಗ್ಲೆಂಡ್​ ವಿರುದ್ಧ ದೀರ್ಘ ಸರಣಿ ಆಡಿದೆ. ಎರಡು ಚಾಂಪಿಯನ್​ ಟ್ರೋಫಿಯಲ್ಲಿ ಪಾಲ್ಗೊಂಡಿರುವ ಟೀಮ್​ ಇಂಡಿಯಾ ಎರಡರಲ್ಲೂ ಫೈನಲ್​ಗೆ ಪ್ರವೇಶ ಪಡೆದಿದೆ. ಒಂದು ಬಾರಿ ಚಾಂಪಿಯನ್​, ಇನ್ನೊಮ್ಮೆ ರನ್ನರ್​ ಆಫ್​ ಕೂಡ ಅಗಿದೆ. ಈ ಸಂದರ್ಭದಲ್ಲಿ ಆಡಿದ ಆಟಗಾರರು ಕೂಡ ತಂಡದಲ್ಲೇ ಇರುವುದರಿಂದ ಈ ಸಲ ಕಪ್​ ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ಗೂ ಮುನ್ನ ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಕೆ.ಎಲ್​ ರಾಹುಲ್​ ಹಾಗೂ ಧೋನಿ ಚುಟುಕು ಕ್ರಿಕೆಟ್​ನಲ್ಲಿ ಉತ್ತಮ ಲಯದಲ್ಲಿರುವುದು ಕೂಡ ಭಾರತ ತಂಡಕ್ಕೆ ಹೆಚ್ಚು ಆತ್ಮ ವಿಶ್ವಾಸ ತಂದುಕೊಟ್ಟಿದೆ ಎಂದು ಅವರು ಇದೇ ವೇಳೆ ಹೇಳಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.