ಮಾಸ್ಕೋ(ರಷ್ಯಾ): ಮಹಿಳಾ ಉದ್ಯೋಗಿಗಳು ಸ್ಕರ್ಟ್ ಧರಿಸಿ ಕೆಲಸಕ್ಕೆ ಹಾಜರಾದರೆ ಹೆಚ್ಚಿನ ವೇತನ ನೀಡುವುದಾಗಿ ಇಲ್ಲಿನ ಕಂಪೆನಿಯೊಂದು ಘೋಷಿಸಿದೆ.
ಮಹಿಳಾ ಉದ್ಯೋಗಿಗಳು ಸ್ಕರ್ಟ್ ಧರಿಸಿ ಬಂದಲ್ಲಿ ನೂರು ರೌಬೆಲ್(1.19 ಪೌಂಡ್) ಹೆಚ್ಚಿನ ಸಂಬಳ ನೀಡುವುದಾಗಿ ಕೆಲ ದಿನಗಳ ಹಿಂದೆ ಹೇಳಿತ್ತು. ತಂಡದ ನಡುವಿನ ಬಾಂಧವ್ಯ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇದೇ ವೇಳೆ ಕಂಪೆನಿ ತಿಳಿಸಿತ್ತು.
ಕಂಪೆನಿಯ ಈ ತೀರ್ಮಾನವನ್ನು ಮಹಿಳಾ ಪರ ಹೋರಾಟಗಾರರು ತೀವ್ರವಾಗಿ ವಿರೋಧಿಸಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಮೆಂಟು ಮಾಡಿದ್ದಾರೆ.