ETV Bharat / briefs

ಬೆಂಗಳೂರಿನಲ್ಲಿ 5 ದಿನಗಳ ಹಿಂದೆಯಷ್ಟೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್​​ ಕೊಲೆ - 20 year rowdy sheeter

5 ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ 20 ವರ್ಷದ ರೌಡಿಶೀಟರ್​ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

rowdy-sheeter
author img

By

Published : Apr 13, 2019, 5:18 AM IST

ಬೆಂಗಳೂರು: 5 ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್​ನೊಬ್ಬನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹನುಮಂತನಗರದ ಕಾಳಿದಾಸ ಸರ್ಕಲ್ ಬಳಿ ನಡೆದಿದೆ.

ಭರತ್( 20) ಎಂಬಾತನೆ ಕೊಲೆಯಾದ ರೌಡಿಶೀಟರ್. ಈತ ಹನುಮಂತನಗರದ ಕಾಳಿದಾಸ ಸರ್ಕಲ್ ಬಳಿ ರಾತ್ರಿ 9 ಗಂಟೆ ವೇಳೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಮಾಡಿ ಪರಾರಿಯಾಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆ ಭರತ್​ನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಹನುಮಂತನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

Intro:Body:ಬೈಕ್ ನಲ್ಲಿ ಹೋಗುತ್ತಿದ್ದ ರೌಡಿಶೀಟರ್ ಗೆ ಚಾಕು ತಿವಿದು ಕೊಲೆ‌ ಮಾಡಿದ ದುಷ್ಕರ್ಮಿಗಳು

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ಗೆ ಇಬ್ಬರು ದುಷ್ಕರ್ಮಿಗಳು ಚಾಕು ತಿವಿದು ಕೊಲೆ ಮಾಡಿರುವ ಘಟನೆ ಹನುಮಂತ ನಗರದ ಕಾಳಿದಾಸ ಸರ್ಕಲ್ ನಲ್ಲಿ‌ ಇಂದು ರಾತ್ರಿ ನಡೆದಿದೆ.
ಭರತ್( 20) ಕೊಲೆಯಾದ ರೌಡಿಶೀಟರ್. ಬೆಂಗಳೂರಿನ ಹನುಮಂತನಗರದ ಕಾಳಿದಾಸ ಸರ್ಕಲ್ ಬಳಿ ರಾತ್ರಿ 9 ಗಂಟೆ ವೇಳೆ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಭರತ್ ನನ್ನು ಅಡ್ಡಗಟ್ಟಿ ಬೆದರಿಸಿ ಚಾಕು ಇರಿದು ಪರಾರಿಯಾಗಿದ್ದಾರೆ.
ಹಳೇ ದ್ವೇಷದ ಹಿನ್ನೆಲೆ ಭರತ್ ನನ್ನ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಾಮರಾಜಪೇಟೆ ಪೊಲೀಸರು ಅಪರಾಧ ಪ್ರಕರಣವೊಂದರಲ್ಲಿ ಭರತ್ ನನ್ನು ಜೈಲಿಗಟ್ಟಿದ್ದರು. ಕಳೆದ ಐದು ದಿನಗಳಿಂದಷ್ಟೇ ಜೈಲಿನಿಂದ ಹೊರಬಂದಿದ್ದ. ಸದ್ಯ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ಧಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

Conclusion:Bharath
ETV Bharat Logo

Copyright © 2024 Ushodaya Enterprises Pvt. Ltd., All Rights Reserved.