ನವದೆಹಲಿ: ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಿರುವ ಚೀನಾ ಮೂಲಕ ಷಿಯೋಮಿ ಇದೀಗ ಮತ್ತೊಂದು ವಿಶೇಷ ಮೊಬೈಲ್ ಮೂಲಕ ಸಮಚಲನ ಸೃಷ್ಟಿಸಲು ಮುಂದಾಗಿದೆ.
ರೆಡ್ಮಿ ನೋಟ್ 7 ಪ್ರೋ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಇದೇ ಕಂಪೆನಿ ರೆಡ್ಮಿ ಕೆ20 ಪ್ರೋ ರಿಲೀಸ್ ಮಾಡಲು ಸಿದ್ಧವಾಗಿದೆ. ಟ್ವಿಟರ್ನಲ್ಲಿ ವಿಶ್ವದ ವೇಗವಾದ ಫೋನ್ ಸದ್ಯದಲ್ಲೇ ಬರಲಿದೆ ಎಂದು ಪೋಸ್ಟ್ ಮಾಡಲಾಗಿದೆ.
-
Some celebrations are short-lived. Stay tuned. pic.twitter.com/NitBxGxOVA
— Redmi India (@RedmiIndia) June 14, 2019 " class="align-text-top noRightClick twitterSection" data="
">Some celebrations are short-lived. Stay tuned. pic.twitter.com/NitBxGxOVA
— Redmi India (@RedmiIndia) June 14, 2019Some celebrations are short-lived. Stay tuned. pic.twitter.com/NitBxGxOVA
— Redmi India (@RedmiIndia) June 14, 2019
ಒನ್ಪ್ಲಸ್ 7 ಪ್ರೋಗೆ ಟಕ್ಕರ್ ನೀಡಲು ಬರುತ್ತಿರುವ ರೆಡ್ಮಿ ಕೆ20 ಮೊಬೈಲ್ ಬಿಡುಗಡೆ ಬಗ್ಗೆ ಟ್ವೀಟ್ ಮಾಡಲಾಗಿದ್ದು ಕೆಲ ಸಂಭ್ರಮಗಳು ಕ್ಷಣಿಕ, ನಿರೀಕ್ಷಿಸಿ ಎಂದು ಬರೆದುಕೊಂಡಿದೆ.
ವಿಶ್ವದ ವೇಗದ ಸ್ಮಾರ್ಟ್ಫೋನ್ ವಿಶೇಷತೆ:
855 ಸ್ನಾಪ್ಡ್ರಾಗನ್ನ ರೆಡ್ಮಿ ಕೆ20 ಮೊಬೈಲ್ನಲ್ಲಿ 8GB ರ‍್ಯಾಮ್ ಇರಲಿದೆ. ಪಾಪ್ ಅಪ್ ಅಪ್ ಸೆಲ್ಫೀ ಇರಲಿದ್ದು, ಈ ಮೂಲಕ ತಿಂಗಳ ಹಿಂದೆ ಬಿಡುಗಡೆಯಾಗಿರುವ ಒನ್ಪ್ಲಸ್ 7 ಪ್ರೋಗೆ ಸ್ಪರ್ಧೆಯೊಡ್ಡಲಿದೆ. ಡಿಸ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಇದರ ವಿಶೇಷತೆಯಾಗಿದೆ. ಮೂರು ಮುಂಬದಿ ಹಾಗೂ ಒಂದು ಹಿಂಬದಿ ಕ್ಯಾಮರಾವನ್ನು ಹೊಂದಿದೆ.
ರೆಡ್ಮಿ ಕೆ20ಯ ಬಾರತೀಯ ಬೆಲೆ ಇನ್ನೂ ನಿಗದಿಯಾಗಿಲ್ಲವಾದರೂ ಸುಮಾರು 25,000ದಿಂದ 30,000 ಇರುವ ಸಾಧ್ಯತೆ ಇದೆ ಎನ್ನಲಾಗಿದೆ.