ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸ್ಸೆಲ್ಲಾ ನೀನೇ ಧಾರಾವಾಹಿಯಲ್ಲಿ ರಾಗಳಾಗಿ ಅಭಿನಯಿಸುವ ಮೂಲಕ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ರಶ್ಮಿ ಪ್ರಭಾಕರ್ ಇದೀಗ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.
ಹೌದು, ರಶ್ಮಿ ಪ್ರಭಾಕರ್ ಇದೀಗ ರಾಗ ಪಾತ್ರದಿಂದ ಹೊರಬರುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ರಶ್ಮಿ ಪ್ರಭಾಕರ್ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ.
ಮನಸ್ಸಿಗೆ ಭಾರವಾದರೂ ನಿಮ್ಮೆಲ್ಲರ ಬಳಿ ಹೇಳಲೇಬೇಕಾದ ವಿಷಯ.. ಮನಸ್ಸೆಲ್ಲಾ ನೀನೆ ರಾಗಳಾಗಿ ನನ್ನ ಅಧ್ಯಾಯ ಕಾರಣಾಂತರಗಳಿಂದ ಮುಗಿದಿದೆ. ಹೊಸ ರಾಗಾ ನಿಮ್ಮ ಮುಂದೆ ಆದಷ್ಟು ಬೇಗ ಬರ್ತಾಳೆ. ನನ್ನ ಹೊಸ ಪಾತ್ರಕ್ಕೆ ಇಷ್ಟು ಪ್ರೀತಿ ಕೊಟ್ಟ ನಿಮಗೆ ಧನ್ಯೋಸ್ಮಿ ಎಂದು ಬರೆದುಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಿನ್ನು ಆಲಿಯಾಸ್ ಲಚ್ಚಿಯಾಗಿ ಕನ್ನಡ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರಶ್ಮಿ ಪ್ರಭಾಕರ್ ಮನೋಜ್ಞ ನಟನೆಯ ಮೂಲಕ ಕರ್ನಾಟಕದಾದ್ಯಂತ ಮನೆ ಮಾತಾದರು.
ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಗಿದ ಬಳಿಕ ಕಿರುತೆರೆಯಿಂದ ದೂರವಿದ್ದ ರಶ್ಮಿ ಕೊಂಚ ಗ್ಯಾಪ್ ನ ಬಳಿಕ ಮನಸೆಲ್ಲಾ ನೀನೆಯ ರಾಗಾಳಾಗಿ ಕಿರುತೆರೆಗೆ ಮರಳಿದ್ದರು. ಇದೀಗ ಅರ್ಧದಲ್ಲಿಯೇ ಅವರು ಪಾತ್ರದಿಂದ ಹೊರಬರುತ್ತಿರುವುದು ಕಿರುತೆರೆ ವೀಕ್ಷಕರಿಗೆ ಬೇಸರ ತಂದಿರುವುದಂತೂ ನಿಜ.