ETV Bharat / briefs

ಚೌಕಿದಾರ್​ ಚೋರ್​ ಹೈ ಹೇಳಿಕೆ : ಸುಪ್ರೀಂನಲ್ಲಿ ವಿಷಾದ ವ್ಯಕ್ತಪಡಿಸಿದ ರಾಹುಲ್​ ಗಾಂಧಿ!

ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ರಫೇಲ್‌ ಡೀಲ್‌ಗೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ​, ಪದೇಪದೆ ಚೌಕಿದಾರ್​ ಚೋರ್​ ಹೈ ಎಂದು ಮೂದಲಿಸುತ್ತಿದ್ದರು.

ರಾಹುಲ್​,ಪ್ರಧಾನಿ ಮೋದಿ
author img

By

Published : Apr 22, 2019, 2:01 PM IST

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ 'ಚೌಕಿದಾರ್​ ಚೋರ್​ ಹೈ' ಎಂಬ ಪದವನ್ನ ಪದೇಪದೆ ಬಳಕೆ ಮಾಡುತ್ತಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸುಪ್ರೀಂಕೋರ್ಟ್​​ನಲ್ಲಿ ಈಗ ವಿಷಾದ ವ್ಯಕ್ತಪಡಿಸಿದ್ದಾರೆ.

ರಫೇಲ್​ ಡೀಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್​, ಚೌಕಿದಾರ್​ ಚೋರ್​ ಹೈ ಎಂಬ ಪದ ಬಳಕೆ ಮಾಡಿದ್ದರು. ಜತೆಗೆ ಚುನಾವಣಾ ಸಮಾರಂಭಗಳಲ್ಲೂ ಕೂಡ ಈ ಪದ ಬಳಿಕೆ ಮಾಡಿದ್ದರು. ಹೀಗಾಗಿ ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಎಂಪಿ ಮೇನಾಕ್ಷಿ ಲೇಖಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್​​ ರಾಹುಲ್‌ ಗಾಂಧಿಯವರಿಗೆ ನೋಟಿಸ್ ಜಾರಿ ಮಾಡಿತ್ತು. ಏಪ್ರಿಲ್​ 22ರೊಳಗೆ ಸ್ಪಷ್ಟನೆ ನೀಡುವಂತೆಯೂ ಸೂಚನೆ ನೀಡಿತ್ತು. ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ದೂರು ಸಹ ನೀಡಿತ್ತು. ಇದೀಗ ರಾಹುಲ್​ ಗಾಂಧಿ ಆ ರೀತಿ ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಹೇಳಿಕೆಯನ್ನ ತಿರುಚಿ ಈ ರೀತಿಯಾಗಿ ಬಿತ್ತರಿಸಲಾಗಿದೆ ಎಂದಿದ್ದಾರೆ.

Intro:Body:

ಚೌಕಿದಾರ್​ ಚೋರ್​ ಹೈ ಹೇಳಿಕೆ: ಸುಪ್ರೀಂನಲ್ಲಿ ವಿಷಾದ ವ್ಯಕ್ತಪಡಿಸಿದ ರಾಹುಲ್​! 

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ 'ಚೌಕಿದಾರ್​ ಚೋರ್​ ಹೈ' ಎಂಬ ಪದ ಬಳಕೆ ಮಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಸುಪ್ರೀಂಕೋರ್ಟ್​​ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. 

ರಫೇಲ್​ ಡೀಲ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್​, ಚೌಕಿದಾರ್​ ಚೋರ್​ ಹೈ ಎಂಬ ಪದ ಬಳಕೆ ಮಾಡಿದ್ದರು. ಇದೇ ವಿಷಯವನ್ನಿಟ್ಟುಕೊಂಡು ಬಿಜೆಪಿ ಎಂಪಿ ಮೇನಾಕ್ಷಿ ಲೇಖಿ ಸುಪ್ರೀಂ ಮೊರೆ ಹೋಗಿದ್ದರು. ​ ಇದರ ಪರಿಶೀಲನೆ ನಡೆಸಿದ ಸುಪ್ರೀಂಕೋರ್ಟ್​​ ನೋಟಿಸ್ ಜಾರಿ ಮಾಡಿ ಏಪ್ರಿಲ್​ 22ರೊಳಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಿದ್ದರು. 

ಇತ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಹ ನೀಡಿತು. 

ಇದೀಗ ರಾಹುಲ್​ ಗಾಂಧಿ ಆ ರೀತಿ ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಹೇಳಿಕೆಯನ್ನ ತಿರುಚಿ ಈ ರೀತಿಯಾಗಿ ಬಿತ್ತರಿಸಲಾಗಿದೆ ಎಂದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.