ಚಿಕ್ಕೋಡಿ: ಅಥಣಿ ಮಾಜಿ ಪುರಸಭೆ ಉಪಾಧ್ಯಕ್ಷರ ಪುತ್ರ ಸಚಿನ್ ಪರಾಂಜಪೆ ಹಾಗೂ ಗೌತಮ್ ಪರಾಂಜಪೆ ಪುರಸಭೆ ಗುತ್ತಿಗೆ ಕಾರ್ಮಿಕರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಪುರಸಭೆ ಸಿಬ್ಬಂದಿಗಳು ಕೆಲಸ ಮೊಟಕುಗೊಳಿಸಿದ್ದಾರೆ.
ಶುಕ್ರವಾರ ಸಾಯಂಕಾಲ ಅಥಣಿ ಪುರಸಭೆ ಆವರಣದಲ್ಲಿ ಘಟನೆ ನಡೆದಿದೆ. ಬೀದಿ ದೀಪ ಅಳವಡಿಸುವ ಕುರಿತು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದ ಮಾಜಿ ಪುರಸಭೆ ಉಪಾಧ್ಯಕ್ಷರ ಪುತ್ರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ಕಾರ್ಮಿಕರು ಕೆಲಸಕ್ಕೆ ಹೋಗದೇ ಪುರಸಭೆ ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಆಗಮನಕ್ಕೆ ಕಾಯ್ದು ಕುಳಿತಿದ್ದಾರೆ.