ETV Bharat / briefs

ಕ್ರಿಕೆಟರ್‌ ಶಮಿ ಮನೆಯಲ್ಲಿ ಪತ್ನಿ ಹೈಡ್ರಾಮಾ.. ಹಸೀನ್​ ಜಹಾನ್​ ಬಂಧಿಸಿ, ನಂತರ ಬಿಡುಗಡೆಗೊಳಿಸಿದ ಪೊಲೀಸರು

ಈಗಾಗಲೇ ಗಂಡನ ವಿರುದ್ಧ ಕೋಲ್ಕತಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಹಸೀನಾ ಜಹಾನ್​, ಸದ್ಯ ಉತ್ತರಪ್ರದೇಶದಲ್ಲಿರುವ ಶಮಿ ಮನೆಗೆ ತೆರಳಿ ಹೈಡ್ರಾಮಾ ಮಾಡಿದ್ದಾಳೆ.

ಮೊಹಮ್ಮದ್ ಶಮಿ ಪತ್ನಿ
author img

By

Published : Apr 29, 2019, 5:13 PM IST

ಲಖನೌ: ಕ್ರಿಕೆಟರ್​ ಮೊಹಮ್ಮದ್​ ಶಮಿ ವಿರುದ್ಧ ಈಗಾಗಲೇ ಅನೇಕ ಗಂಭೀರ ಆರೋಪ ಮಾಡಿ ಕೋರ್ಟ್​ ಮೆಟ್ಟಿಲೇರಿರುವ ಹಸೀನ್​ ಜಹಾನ್​ ಗಂಡನ ಮನೆಗೆ ತೆರಳಿ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಹಸೀನ್‌ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಯುಪಿ ಪೊಲೀಸರು ಬಂಧಿಸಿ ಬಳಿಕ ರಿಲೀಸ್​ ಮಾಡಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಅಮರೋಹಾದಲ್ಲಿರುವ ಶಮಿ ಮನೆಗೆ ತೆರಳಿರುವ ಹಸೀನಾ, ಶಮಿ ಅವರ ತಾಯಿ ಮತ್ತು ಸಹೋದರರ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಇದೇ ವೇಳೆ ಮನೆಯಿಂದ ಹೊರಹೋಗುವಂತೆ ಅವರು ತಿಳಿಸಿದಾಗ ಮನೆಯ ರೂಂನಲ್ಲಿ ತನ್ನನ್ನು ಹಾಗೂ ಮಗಳನ್ನ ಕೂಡಿ ಹಾಕಿಕೊಂಡು ಲಾಕ್​ ಮಾಡಿಕೊಂಡಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿರುವ ಪೊಲೀಸರು ಹಸೀನ್​ ಜಹಾನ್​ನನ್ನು ಬಂಧನ ಮಾಡಿ ತದನಂತರ ರಿಲೀಸ್​ ಮಾಡಿದ್ದಾರೆ.

ಈ ವೇಳೆ ಮಾತನಾಡಿರುವ ಹಸೀನಾ, ನಾನು ಗಂಡನ ಮನೆಗೆ ಆಗಮಿಸಿದ್ದು, ಈ ಮನೆಯಲ್ಲಿರುವ ಎಲ್ಲ ಹಕ್ಕು ನನಗಿದೆ. ಆದರೆ, ಶಮಿ ಸಹೋದರರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಪೊಲೀಸರು ಇದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಈಗಾಗಲೇ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಿ ಕೋಲ್ಕತಾದಲ್ಲಿ ದೂರು ದಾಖಲು ಮಾಡಿದ್ದಾಳೆ.

ವಿಶ್ವಕಪ್​ಗಾಗಿ ಆಯ್ಕೆಯಾಗಿರುವ ಮೊಹಮ್ಮದ್​ ಶಮಿ ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದೊಂದಿಗೆ ಆಡುತ್ತಿದ್ದಾರೆ.

Intro:Body:

ಗಂಡನ ಮನೆಗೆ ತೆರಳಿ ಹೈಡ್ರಾಮಾ: ಹಸೀನ್​ ಜಹಾನ್​ ಅರೆಸ್ಟ್​ ಮಾಡಿದ ಪೊಲೀಸ್​! 

ಲಖನೌ: ಕ್ರಿಕೆಟರ್​ ಮೊಹಮ್ಮದ್​ ಶಮಿ ವಿರುದ್ಧ ಈಗಾಗಲೇ ಅನೇಕ ಗಂಭೀರ ಆರೋಪ ಮಾಡಿ ಕೋರ್ಟ್​ ಮೆಟ್ಟಿಲೇರಿರುವ ಹಸೀನ್​ ಜಹಾನ್​ ಗಂಡನ ಮನೆಗೆ ತೆರಳಿ ಹೈಡ್ರಾಮಾ ಮಾಡಿದ್ದು, ಅದೇ ಆರೋಪದ ಮೇಲೆ ಆಕೆಯನ್ನ ಯುಪಿ ಪೊಲೀಸರು ಬಂಧನ ಮಾಡಿ, ತದನಂತರ ರಿಲೀಸ್​ ಮಾಡಿರುವ ಘಟನೆ ನಡೆದಿದೆ. 

ಉತ್ತರಪ್ರದೇಶದ ಅಮರೋಹಾದಲ್ಲಿರುವ ಶಮಿ ಮನೆಗೆ ತೆರಳಿರುವ ಹಸೀನಾ, ಶಮಿ ಅವರ ತಾಯಿ ಮತ್ತು ಸಹೋದರರ ಜೊತೆ ಮಾತಿನ ಚಕಮಕಿ ನಡೆಸಿದ್ದಾಳೆ. ಇದೇ ವೇಳೆ ಮನೆಯಿಂದ ಹೊರಹೊಗುವಂತೆ ಅವರು ತಿಳಿಸಿದಾಗ ಮನೆಯ ರೂಂನಲ್ಲಿ ತನ್ನನ್ನು ಹಾಗೂ ಮಗಳನ್ನ ಕೂಡಿ ಹಾಕಿಕೊಂಡು ಲಾಕ್​ ಮಾಡಿಕೊಂಡಿದ್ದಾಳೆ. ಈ ವೇಳೆ ಮನೆಯಲ್ಲಿದ್ದರುವ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿರುವ ಪೊಲೀಸರು ಹಸೀನ್​ ಜಹಾನ್​ನನ್ನು ಬಂಧನ ಮಾಡಿ ತದನಂತರ ರಿಲೀಸ್​ ಮಾಡಿದ್ದಾರೆ.

ಈ ವೇಳೆ ಮಾತನಾಡಿರುವ ಹಸೀನಾ, ನಾನು ಗಂಡನ ಮನೆಗೆ ಆಗಮಿಸಿದ್ದು, ಈ ಮನೆಯಲ್ಲಿರುವ ಎಲ್ಲ ಹಕ್ಕು ನನಗಿದೆ. ಆದರೆ ಶಮಿ ಸಹೋದರರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದು, ಪೊಲೀಸರು ಇದಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ಈಗಾಗಲೇ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಅನೇಕ ಆರೋಪಗಳನ್ನು ಹೊರಿಸಿ, ಆತನ ವಿರುದ್ಧ ಕೋಲ್ಕತ್ತಾದಲ್ಲಿ ದೂರು ದಾಖಲು ಮಾಡಿದ್ದಾಳೆ. 

ವಿಶ್ವಕಪ್​ಗಾಗಿ ಆಯ್ಕೆಯಾಗಿರುವ ಮೊಹಮ್ಮದ್​ ಶಮಿ ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದೊಂದಿಗೆ ಆಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.