ಗಂಗಾವತಿ: ಭತ್ತದ ನಾಡು ಕೊಪ್ಪಳದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಮತಬೇಟೆ ನಡೆಸಿದರು. ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ, ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ನಮೋ ನೇರ ವಾಗ್ದಾಳಿ ನಡೆಸಿದರು.
ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲ ಮನ್ನಾ ಮಾಡುತ್ತೆನೆಂದು ಹೇಳಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ರೈತರ ಸಾಲಮನ್ನಾ ಆಗಿಲ್ಲ. ಕೃಷಿ ಸಮ್ಮಾನ್ ಯೋಜನೆಗೂ ಅಡ್ಡಗಾಲು ಹಾಕಿದ್ದೀರಿ. ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರುತ್ತಾರೆಂದು ಕುಮಾರಸ್ವಾಮಿ ಅಣುಕಿಸಿದ್ದಾರೆ. ಇಂತಹ ಹೇಳಿಕೆ ಯಾವ ಆಧಾರದ ಮೇಲೆ ಹೇಳಿದ್ದೀರಿ. ಭಾರತೀಯ ಸೇನೆ ನೀವೂ ಮಾಡುತ್ತಿರುವ ಅಪಮಾನವಿದು ಎಂದರು.