ಬೆಂಗಳೂರು: ಪಾಲಿಕೆ ಸಾರ್ವಜನಿಕರಿಗಾಗಿ ಪಿಕೆ ಸ್ಟ್ರೀಟ್ ಮ್ಯಾಪಿಂಗ್ ಆ್ಯಪ್ ಬಿಡುಗಡೆ ಮಾಡುತ್ತಿದೆ. ನಿಯಮಗಳ ಪ್ರಕಾರ ಪೌರಕಾರ್ಮಿಕರನ್ನು ಕಸ ಗುಡಿಸಲು ಮಾತ್ರ ನೇಮಿಸಿಕೊಳ್ಳಲಾಗಿದೆ. ಆ ಪ್ರಕಾರವಾಗಿ ಪಿಕೆಸ್ಟ್ರೀಟ್ ಮ್ಯಾಪಿಂಗ್ ಆ್ಯಪ್ ಡೆವಲಪ್ ಮಾಡಿ ಅಧಿಕಾರಿಗಳ ಮಾಹಿತಿಗೆ ನೀಡಲಾಗಿತ್ತು. ಪೌರಕಾರ್ಮಿಕರನ್ನು ಆ ರಸ್ತೆ ಮೇಲೆ ಮ್ಯಾಪ್ ಮಾಡಲಾಗಿತ್ತು. ಪೌರಕಾರ್ಮಿಕರಿಗೆ 500 ರಿಂದ 750 ಮೀಟರ್ ರಸ್ತೆಯನ್ನು ಗುಡಿಸಬೇಕಾಗುತ್ತದೆ. ಯಾವ ರಸ್ತೆಯನ್ನು ಯಾವ ಪೌರಕಾರ್ಮಿಕರು ಗುಡಿಸುತ್ತಾರೆ ಎಂಬ ಮಾಹಿತಿ ಈ ಅಪ್ಲಿಕೇಷನ್ನಲ್ಲಿ ಇರುತ್ತದೆ. ಇನ್ಮುಂದೆ ಇದೇ ಆ್ಯಪ್ನ ಸಾರ್ವಜನಿಕರಿಗೂ ಬಿಡುಗಡೆ ಮಾಡಲಾಗ್ತಿದೆ.
ಸಾರ್ವಜನಿಕರು ಇದೇ ಆ್ಯಪ್‌ನಲ್ಲಿ ದೂರು ಸಹಾ ನೀಡಬಹುದು. 16 ಸಾವಿರ ಪೌರಕಾರ್ಮಿಕರ ಮಾಹಿತಿ ಈ ಆ್ಯಪ್‌ನಲ್ಲಿರಲಿದೆ. ಮನೆ ಕಸಗಳಿಗೆ ಪೌರಕಾರ್ಮಿಕರು ಜವಾಬ್ದಾರಿಯಲ್ಲ. ಮನೆಗಳ ಕಸ ಕೊಂಡೊಯ್ಯುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದ್ದು, ಇದಕ್ಕೆ ಪೌರಕಾರ್ಮಿಕರು ಜವಾಬ್ದಾರರಲ್ಲ.
ಹೊಸ ಟೆಂಡರ್ ಆದ ಬಳಿಕ ಪ್ರತಿ ಆಟೋ ಟಿಪ್ಪರ್ಗಳಿಗೆ ಸ್ಮಾರ್ಟ್ ಕಂಟ್ರೋಲ್ ರೂಂ ಮಾಡಲಾಗುತ್ತದೆ. ವಾಹನಗಳಲ್ಲಿರುವ ಜಿಪಿಎಸ್ನಿಂದ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಲಿದೆ. ಹೊಸ ಆ್ಯಪ್ ಹಾಕಿದ್ರೆ ಕಸ ವಿಲೇವಾರಿ ಮತ್ತಷ್ಟು ಜನ ಸ್ನೇಹಿ ಆಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಆದರೆ, ಪಾಲಿಕೆಯ ಅದೆಷ್ಟೋ ಆ್ಯಪ್‌ಗಳು ಇದ್ರೂ ಯಾವು ದೂ ನೆಟ್ಟಗಿಲ್ಲ. ಈ ಆ್ಯಪ್ ಕೂಡಾ ಅವುಗಳ ಸಾಲಿಗೆ ಸೇರದೆ ಜನ ಸ್ನೇಹಿಯಾಗುತ್ತಾ ಕಾದು ನೋಡಬೇಕಿದೆ.