ವಿಶಾಖಪಟ್ಟಣಂ: ತೀವ್ರ ಕುತೂಹಲ ಮೂಡಿಸಿದ್ದ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡು ವಿಕೆಟ್ಗಳ ಜಯ ಸಾಧಿಸಿದೆ.
ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 163 ರನ್ಗಳ ಗುರಿಯನ್ನು ಬೆನ್ನತ್ತಿದ ಶ್ರೇಯಸ್ ಅಯ್ಯರ್ ಪಡೆಗೆ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಓಪನಿಂಗ್ ನೀಡಿದರು.
ಅಬ್ಬರಿಸಿದ ಪೃಥ್ವಿ ಶಾ 38 ಎಸೆತದಲ್ಲಿ 56 ರನ್ ಸಿಡಿಸಿ ಔಟಾದರು. ನಾಯಕ ಶ್ರೇಯಸ್ ಅಯ್ಯರ್ 8 ರನ್ ಪೆವಿಲಿಯನ್ ಸೇರಿದರು. ನಂತರ ಬಂದ ರಿಷಭ್ ಪಂತ್ ತಂಡಕ್ಕೆ ಆವರಿಸಿದ್ದ ಸೋಲಿನ ಕಾರ್ಮೋಡವನ್ನು ಸರಿಸಿದರು.
-
Keemo Paul ends the tension!@DelhiCapitals win the #Eliminator by 2 wickets and move on to Qualifier 2 🔵#DCvSRH pic.twitter.com/WzpjUeg5pC
— IndianPremierLeague (@IPL) May 8, 2019 " class="align-text-top noRightClick twitterSection" data="
">Keemo Paul ends the tension!@DelhiCapitals win the #Eliminator by 2 wickets and move on to Qualifier 2 🔵#DCvSRH pic.twitter.com/WzpjUeg5pC
— IndianPremierLeague (@IPL) May 8, 2019Keemo Paul ends the tension!@DelhiCapitals win the #Eliminator by 2 wickets and move on to Qualifier 2 🔵#DCvSRH pic.twitter.com/WzpjUeg5pC
— IndianPremierLeague (@IPL) May 8, 2019
ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕ ಅಬ್ಬರಿಸಿದ ಪಂತ್ 21 ಎಸೆತದಲ್ಲಿ ಆಕರ್ಷಕ 49 ರನ್ ಗಳಿಸಿ ಗೆಲುವಿನ ಸನಿಹದಲ್ಲಿ ಎಡವಿದರು.ಇನ್ಗ್ರಾಮ್ ಬದಲಿಗೆ ತಂಡ ಸೇರಿದ್ದ ಕಾಲಿನ್ ಮುನ್ರೋ ಕೇವಲ 14 ರನ್ನಿಗೆ ನಿರ್ಗಮಿಸಿದರು.
-
Together, WE RISE ❤#DCvSRH #ThisIsNewDelhi #DelhiCapitals #IPL #IPL2019 pic.twitter.com/IUxb632aWz
— Delhi Capitals (@DelhiCapitals) May 8, 2019 " class="align-text-top noRightClick twitterSection" data="
">Together, WE RISE ❤#DCvSRH #ThisIsNewDelhi #DelhiCapitals #IPL #IPL2019 pic.twitter.com/IUxb632aWz
— Delhi Capitals (@DelhiCapitals) May 8, 2019Together, WE RISE ❤#DCvSRH #ThisIsNewDelhi #DelhiCapitals #IPL #IPL2019 pic.twitter.com/IUxb632aWz
— Delhi Capitals (@DelhiCapitals) May 8, 2019
ಹೈದರಾಬಾದ್ ಪರ ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್ ಹಾಗೂ ರಶೀದ್ ಖಾನ್ ಎರಡು ವಿಕೆಟ್ ಪಡೆದು ಮಿಂಚಿದರು.
ಎಲಿಮಿನೇಟರ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಮೇ 10ರಂದು ಇದೇ ಮೈದಾನದಲ್ಲಿ ನಡೆಯುವ ಎರಡನೇ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.