ಲಾಹೋರ್: ಇಂಗ್ಲೆಂಡ್ನಲ್ಲಿ ನಡೆಯುವ 12ನೇ ವಿಶ್ವಕಪ್ಗೆ ಪಾಕಿಸ್ತಾನ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದ್ರೆ ವೇಗಿ ಮೊಹಮ್ಮದ್ ಅಮೀರ್ಗೆ ತಂಡದಿಂದ ಗೇಟ್ ಪಾಸ್ ನೀಡಲಾಗಿದೆ.
2017ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿಯ ಫೈನಲ್ನಲ್ಲಿ ಭಾರತದ ವಿರುದ್ಧ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಪಾಕಿಸ್ತಾನಕ್ಕೆ ಚಾಂಪಿಯನ್ ಟ್ರೋಫಿ ತಂದುಕೊಟ್ಟಿದ್ದ ಮೊಹಮ್ಮದ್ ಅಮೀರ್ರನ್ನು ಆಯ್ಕೆ ಸಮಿತಿ ವಿಶ್ವಕಪ್ ತಂಡದಿಂದ ಕೈಬಿಟ್ಟಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
-
BREAKING: Pakistan have announced their #CWC19 squad. 🇵🇰 pic.twitter.com/NBlvAc2vbo
— Cricket World Cup (@cricketworldcup) April 18, 2019 " class="align-text-top noRightClick twitterSection" data="
">BREAKING: Pakistan have announced their #CWC19 squad. 🇵🇰 pic.twitter.com/NBlvAc2vbo
— Cricket World Cup (@cricketworldcup) April 18, 2019BREAKING: Pakistan have announced their #CWC19 squad. 🇵🇰 pic.twitter.com/NBlvAc2vbo
— Cricket World Cup (@cricketworldcup) April 18, 2019
ತಂಡದ ನಾಯಕನನ್ನಾಗಿ ಸರ್ಫರಾಜ್ ಅಹಮ್ಮದ್ ಮುಂದುವರಿದಿದ್ದಾರೆ. ಯುವ ಬೌಲರ್ಗಳಾದ ಶಹೀನ್ ಆಫ್ರಿದಿ ಹಾಗೂ ಮೊಹಮ್ಮದ್ ಹಸ್ನೈನ್ಗೆ ಅವಕಾಶ ನೀಡಲಾಗಿದೆ. ಹಿರಿಯ ಆಟಗಾರ ಶೋಯಬ್ ಮಲ್ಲಿಕ್ ಹಾಗೂ ಮೊಹಮ್ಮದ್ ಹಫೀಜ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಪಾಕಿಸ್ತಾನ 15 ಸದಸ್ಯರ ತಂಡ ಇಂತಿದೆ
ಸರ್ಫರಾಜ್ ಅಹ್ಮದ್(ನಾಯಕ), ಅಬೀದ್ ಅಲಿ, ಬಾಬರ್ ಅಜಂ, ಫಹೀಮ್ ಅಶ್ರಫ್, ಫಾಖರ್ ಝಮಾನ್, ಹ್ಯಾರೀಸ್ ಸೋಹೈಲ್ ,ಹಸನ್ ಅಲಿ, ಇಮಾದ್ ವಾಸಿಂ, ಇಮಾಮ್ ಉಲ್ ಹಕ್,ಜುನೈದ್ ಖಾನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಶದಾಬ್ ಖಾನ್, ಶಹೀನ್ ಆಫ್ರಿದಿ, ಶೋಯಬ್ ಮಲಿಕ್