ಮ್ಯಾಂಚೆಸ್ಟರ್: ಐಸಿಸಿ ವಿಶ್ವಕಪ್ 2019ರ ಆವೃತ್ತಿಯಲ್ಲಿ ಹೈವೋಲ್ಟೇಜ್ ಕದನವಾಗಿರುವ ಇಂಡೋ-ಪಾಕ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹ್ಮದ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
ಭಾರತ ತಂಡದಲ್ಲಿ ಗಾಯಗೊಂಡಿರುವ ಆರಂಭಿಕ ಆಟಗಾರ ಶಿಖರ್ ಧವನ್ ಬದಲಿಗೆ ಆಲ್ರೌಂಡರ್ ವಿಜಯ್ ಶಂಕರ್ರಿಗೆ ಅವಕಾಶ ನೀಡಲಾಗಿದೆ.
ಪಾಕಿಸ್ತಾನದ ಪರ ಆಸಿಫ್ ಅಲಿ ಬದಲಿಗೆ ಆಲ್ರೌಂಡರ್ ಇಮಾದ್ ವಾಸಿಂ, ಶಾಹೀನ್ ಅಫ್ರಿದಿ ಬದಲಿಗೆ ಸ್ಪಿನ್ನರ್ ಶದಾಬ್ ಖಾನ್ ತಂಡ ಸೇರ್ಪಡೆಗೊಂಡಿದ್ದಾರೆ.
ಎರಡು ತಂಡಗಳ ಅಂಕಿ ಅಂಶವನ್ನು ನೋಡುವುದಾದರೆ ಭಾರತ ತಂಡ ವಿಶ್ವಕಪ್ನಲ್ಲಿ 6-0ಯಲ್ಲಿ ಮುಂದಿದೆ. ಆದರೆ ಏಕದಿನ ಕ್ರಿಕೆಟ್ನಲ್ಲಿ ಪಾಕಿಸ್ತಾನ 73 -54 ರಲ್ಲಿ ಮುನ್ನಡೆ ಸಾಧಿಸಿದೆ.
-
#SarfarazAhmed wins the toss and elects to bowl in Manchester!
— ICC (@ICC) June 16, 2019 " class="align-text-top noRightClick twitterSection" data="
Pakistan bring in Imad Wasim and Shadab Khan while Vijay Shankar features for India. #TeamIndia #WeHaveWeWill pic.twitter.com/ps4Z65LuEc
">#SarfarazAhmed wins the toss and elects to bowl in Manchester!
— ICC (@ICC) June 16, 2019
Pakistan bring in Imad Wasim and Shadab Khan while Vijay Shankar features for India. #TeamIndia #WeHaveWeWill pic.twitter.com/ps4Z65LuEc#SarfarazAhmed wins the toss and elects to bowl in Manchester!
— ICC (@ICC) June 16, 2019
Pakistan bring in Imad Wasim and Shadab Khan while Vijay Shankar features for India. #TeamIndia #WeHaveWeWill pic.twitter.com/ps4Z65LuEc
ವಿಶ್ವಕಪ್ನಲ್ಲಿ ಭಾರತ ತಂಡ ಒಟ್ಟು 77 ಪಂದ್ಯಗಳನ್ನಾಡಿದ್ದು, 48ರಲ್ಲಿ ಜಯ ಸಾಧಿಸಿ 27 ರಲ್ಲಿ ಸೋಲುಕಂಡಿದೆ. ಒಮ್ಮೆ ಟೈ ಆಗಿದೆ. 1983 ಹಾಗೂ 2011ರಲ್ಲಿ ಭಾರತ ತಂಡ ಚಾಂಪಿಯನ್ ಆಗಿದೆ. 2003 ರಲ್ಲಿ ರನ್ನರ್ ಅಪ್ ಆಗಿತ್ತು.
ಪಾಕಿಸ್ತಾನ ತಂಡ 74 ಪಂದ್ಯಗಳಾಡಿದ್ದು, 41ರಲ್ಲಿ ಜಯ ಹಾಗೂ 31 ರಲ್ಲಿ ಸೋಲು ಕಂಡಿದೆ. 1992 ರಲ್ಲಿ ಚಾಂಪಿಯನ್ ಆಗಿದ್ದರೆ, 1999 ರಲ್ಲಿ ರನ್ನರ್ ಅಪ್ ಆಗಿದೆ.
ಪಾಕಿಸ್ತಾನ:
ಸರ್ಫರಾಜ್ ಅಹ್ಮದ್(ನಾಯಕ), ಫಾಖರ್ ಝಮಾನ್, ಇಮಾದ್ ವಾಸಿಂ, ಹಸನ್ ಅಲಿ, ಇಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಶೋಯಬ್ ಮಲಿಕ್, ಬಾಬರ್ ಅಜಂ, ಮೊಹ್ಮದ್ ಆಮಿರ್, ವಹಾಬ್ ರಿಯಾಜ್, ಶದಾಬ್ಖಾನ್
ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ವಿಜಯ್ ಶಂಕರ್, ಕೆಎಲ್ ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ