ETV Bharat / briefs

ಅನೈತಿಕ ಚಟುವಟಿಕೆಗಳ ಗೂಡಾದ ನಿರ್ವಹಣೆ ಇಲ್ಲದ ಸರ್ಕಾರಿ ಕಟ್ಟಡಗಳು - ಬಾಡಿಗೆ ಕಟ್ಟಡ

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಿರ್ವಹಣೆ ಇಲ್ಲದೇ ಬಳಕೆ ಯೋಗ್ಯ ಸರ್ಕಾರಿ ಕಟ್ಟಡಗಳು ಪಾಳು ಬಿದ್ದಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಟ್ಟಡಗಳ ನಿರ್ವಹಣೆ ಇಲ್ಲದೇ ಪಾಳು ಬಿದ್ದ ಕಟ್ಟಡಗಳು
author img

By

Published : Jun 7, 2019, 2:37 PM IST

ಶಿರಸಿ: ನಗರದ ವಿವಿಧ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿ ಗೃಹಗಳು ಸರಿಯಾದ ನಿರ್ವಹಣೆ ಇಲ್ಲದೇ ಪಾಳುಬಿದ್ದಿವೆ. ಇನ್ನು ಬಳಕೆಗೆ ಯೋಗ್ಯವಿರುವ ಕಟ್ಟಡಗಳ ಸುತ್ತ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುವುದರ ಜತೆಗೆ, ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಸರ್ಕಾರಕ್ಕೆ ಮತ್ತೊಂದು ಹೊರೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಬಿ‌ಎಸ್ಎನ್ಎಲ್ ಕಚೇರಿ ಮತ್ತು ವಸತಿ ಗೃಹಗಳು, ಅಂಚೆ ಇಲಾಖೆ ವಸತಿ ಗೃಹ, ರಾಜ್ಯ ಸರ್ಕಾರದ ಅಡಿ ಬರುವ ರೇಷ್ಮೆ ಇಲಾಖೆಯ ಬೃಹತ್ ಕಟ್ಟಡ, ಶಿಕ್ಷಣ ಇಲಾಖೆಗೆ ಸೇರಿದ ಸಭಾ ಭವನಗಳು ಹೀಗೆ ಹತ್ತಾರು ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಾಳಾಗಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ಪಾಳು ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣವಾಗಿವೆ. ನಿರ್ವಹಣೆ ಕೊರತೆಯಿಂದ ಸಾರ್ವಜನಿಕರ ತೆರಿಗೆ ಹಣ ನಷ್ಟವಾಗುತ್ತಿದೆ. ಆದರೆ, ಇದಕ್ಕೆ ಸಂಬಂಧ ಪಟ್ಟ ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ.

ಜಾಗದ ಕೊರತೆಯಿಂದ ಸಹಕಾರಿ ಇಲಾಖೆ , ಗ್ರಾಮೀಣ ಸಡಕ್ ಯೋಜನಾ ಕಚೇರಿ, ಆರ್​​ಟಿಒ, ನಗರ ಯೋಜನಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಖಾಲಿ ಇರುವ ಸರ್ಕಾರಿ ಕಟ್ಟಡಗಳಿಗೆ ಕಚೇರಿಗಳನ್ನು ಸ್ಥಳಾಂತರಿಸಿದರೆ ಸರ್ಕಾರಕ್ಕೆ ಆಗುವ ಲಕ್ಷಾಂತರ ರೂಪಾಯಿ ನಷ್ಟ ತಪ್ಪಿಸಬಹುದು. ಕೂಡಲೇ ಪರಿಶೀಲಿಸಿ ಶಿಥಿಲಗೊಂಡ ಕಟ್ಟಡವನ್ನು ಸರಿಪಡಿಸಿ ಹಾಗೂ ಸರ್ಕಾರಿ ಜಾಗದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಅಗತ್ಯವಿರುವ ಇಲಾಖೆಗಳಿಗೆ ಜಾಗವನ್ನು ನೀಡಿ ಸರ್ಕಾರದ ಆಸ್ತಿಯ ಸಮರ್ಪಕ ಬಳಕೆಗೆ ಮುಂದಾಗಬೇಕಿದೆ ಎಂದರು.

Intro:ಶಿರಸಿ :
ಸರ್ಕಾರ ಹಾಗೂ ಆಯಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶಿರಸಿ ನಗರದ ವಿವಿಧ ಸರ್ಕಾರಿ ಕಟ್ಟಡಗಳು, ಅಧಿಕಾರಿಗಳ ವಸತಿಗೃಹಗಳು ಪಾಳುಬಿದ್ದು ಹಾಳಾಗುತ್ತಿವೆ. ಇದರಿಂದ ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟವಾಗುತ್ತಿದ್ದು, ಇನ್ನೊಂದೆಡೆ ಕೆಲ ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿ ಕಚೇರಿ ನಡೆಸುವುರಿಂದಲೂ ಸರ್ಕಾರಕ್ಕೆ ನಷ್ಟವಾಗುತ್ತಿದೆ.

ಉತ್ತರ ಕನ್ನಡದ ಶಿರಸಿಯಲ್ಲಿ ಕೇಂದ್ರ ಸರ್ಕಾರದ ಸ್ವಾಮ್ಯದ ಬಿ‌ಎಸ್.ಎನ್.ಎಲ್. ಕಚೇರಿ ಮತ್ತು ವಸತಿ ಗೃಹಗಳು, ಅಂಚೆ ಇಲಾಖೆ ವಸತಿ ಗೃಹ, ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ರೇಷ್ಮೆ ಇಲಾಖೆ ಬೃಹತ್ ಕಟ್ಟಡ, ಶಿಕ್ಷಣ ಇಲಾಖೆಗೆ ಸೇರಿದ ಸಭಾಭವನಗಳು ಹೀಗೆ ಹತ್ತಾರು ಕಟ್ಟಡಗಳು ನಿರ್ವಹಣೆಯ ಕೊರತೆಯಿಂದ ಮತ್ತು ಅಧಿಕಾರಿಗಳ ಬೇಜವಬ್ದಾರಿಯಿಂದ ಪಾಳು ಬಿದ್ದಿವೆ. ಪಾಳು ಕಟ್ಟಡಗಳು ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಮಾರ್ಪಾಟಾಗಿದೆ.
Body:ವಸತಿ, ಕಚೇರಿ ಕಟ್ಟಡಗಳು ಹಲವು ವರ್ಷಗಳಿಂದ ನಿರುಪಯುಕ್ತವಾಗಿವೆ. ಸರ್ಕಾರಿ ಆಸ್ತಿ ಪಾಸ್ತಿ ನಷ್ಟವಾಗುತ್ತಿದೆ. ಕೆಲ ಕಟ್ಟಡ ಗಟ್ಟಿಮುಟ್ಟಾಗಿದ್ದರೂ ನಿರ್ವಹಣೆ ಕೊರತೆಯಿಂದಾಗಿ ಪಾಳು ಬಿದ್ದಿವೆ. ಕೆಲ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಕಟ್ಟಡಗಳ ಬಳಿ ಇರುವ ಅಷ್ಟೂ ಜಾಗದಲ್ಲಿ ಮುಳ್ಳಿನಗಿಡಗಳು ಬೆಳೆದಿವೆ. ರಾತ್ರಿಯಾದ ಮೇಲೆ ಅನೈತಿಕ ಚಟುವಟಿಕೆ ತಾಣಗಳಾಗಿ ಮಾರ್ಪಾಡಾಗಿವೆ. ಆದರೆ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಇಲಾಖೆಗಳು, ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಂತಿದೆ.
ಬೈಟ್ (೧) : ಪರಮಾನಂದ ಹೆಗಡೆ, ಸಾಮಾಜಿಕ ಕಾರ್ಯಕರ್ತ.
Conclusion:ಬಾಡಿಗೆ ಕಟ್ಟಡದಲ್ಲಿ :
ಸಹಕಾರಿ ಇಲಾಖೆ , ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನಾ ಕಚೇರಿ, ಆರ್.ಟಿ.ಒ. ಕಚೇರಿ, ನಗರ ಯೋಜನಾ ಪ್ರಾಧಿಕಾರ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳು ನಗರದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವುಗಳಿಗೆ ಜಾಗದ ಕೊರತೆಯಿದೆ. ಇದಲ್ಲದೇ ಅಬಕಾರಿ ಇಲಾಖೆಗೆ ನೂತನ ಕಟ್ಟಡ ನಿರ್ಮಾಣವಾಗುತ್ತಿರುವ ಕಾರಣ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಇವುಗಳಿಗೆ ಖಾಲಿಯಿರುವ ಸರ್ಕಾರಿ ಕಟ್ಟಡಗಳಿಗೆ ತೆರಳಲು ಅನುಕೂಲ ಮಾಡಿಕೊಟ್ಟಲ್ಲಿ ಸರ್ಕಾರಿ ಹಣ ಉಳಿಸಿದಂತಾಗುತ್ತದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಶೀಲಿಸಿ ಶಿಥಿಲಗೊಂಡ ಕಟ್ಟಡವನ್ನು ಸರಿಪಡಿಸಿ ಹಾಗೂ ಸರ್ಕಾರಿ ಜಾಗದಲ್ಲಿರುವ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಅಗತ್ಯವಿರುವ ಇಲಾಖೆಗಳಿಗೆ ಜಾಗವನ್ನು ನೀಡಿ ಸರ್ಕಾರದ ಆಸ್ತಿಯ ಸಮರ್ಪಕ ಬಳಕೆಗೆ ಮುಂದಾಗಬೇಕಿದೆ.
ಬೈಟ್ (೨) ಯು.ಟಿ.ರಾಜು, ನಾಗರಿಕ

........
ಸಂದೇಶ‌ ಭಟ್ ಶಿರಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.