ಚಿಕ್ಕಮಗಳೂರು: ಜಿಲ್ಲೆಯ ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ಎಲ್ಎಲ್ಆರ್ ಅಥವಾ ಡಿಎಲ್ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಆದರೀಗ ಸಾರ್ವಜನಿಕರು ಕಚೇರಿಗಳಿಗೆ ತಪ್ಪಿಸಲು ಮತ್ತು ದಲ್ಲಾಳಿಗಳ ಕಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಆನ್ಲೈನ್ ವ್ಯವಸ್ಥೆ ಜಾರಿಗೆ ತಂದಿದೆ.
ಹೀಗಾಗಿ, ಆನ್ಲೈನ್ನಲ್ಲಿಯೇ ಡಿಎಲ್ ಹಾಗೂ ಎಲ್ಎಲ್ಗೆ ಅರ್ಜಿ ಸಲ್ಲಿಸಿ ತಮ್ಮ ಕಾರ್ಯಗಳನ್ನು ವೇಗವಾಗಿ ಪಡೆದುಕೊಳ್ಳಬಹುದು. ಈ ಕುರಿತು ಆರ್ಟಿಒ ಅಧಿಕಾರಿ ಮುರುಗೇಂದ್ರ ಶಿರೋಲ್ಕರ್ ಮಾತನಾಡಿ, ಈ ಆನ್ಲೈನ್ನಲ್ಲಿಯೇ ಸೇವೆ ಪ್ರಾರಂಭಿಸಿದ ಕಾರಣ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿದರೆ ಮಧ್ಯವರ್ತಿಗಳಿಗೆ ಕಡಿವಾಣ ಬೀಳಲಿದೆ. ಕೆಲಸ ಕೂಡ ಬೇಗ ಮುಗಿಯಲಿದೆ. ಹಾಗೆಯೇ ಜನರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಚಾಲನಾ ಪರವಾನಗಿ ಪಡೆಯಲು ಸಾಕಷ್ಟು ಹರಸಾಹಸ ಪಡಬೇಕಾಗಿತ್ತು. ಈ ಹಿಂದೆ ಬ್ರೋಕರ್ಗಳ ಹಾವಳಿ ಇತ್ತು. ಆನ್ಲೈನ್ ಬಂದ ಬಳಿಕ ಅದೆಕ್ಕೆಲ್ಲ ಕಡಿವಾಣ ಬೀಳಲಿದೆ. ಸರ್ಕಾರ ನಿಗದಿಪಡಿಸಿದ ಹಣ ಮಾತ್ರ ಪಾವತಿಸಬೇಕು. ಇದು ಸಾರ್ವಜನಿಕರಿಗೆ ತುಂಬಾ ಉಪಯೋಗವಾಗುತ್ತಿದೆ ಎಂದು ಹೇಳಿದರು.