ಅಮೇಠಿ: ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮತಬೇಟೆಯ ವೇಳೆ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ತೆಗೆದುಕೊಂಡಿದೆ.
ಅಮೇಠಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ, ಅಲ್ಲಿನ ಪುಟ್ಟ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮಕ್ಕಳು 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಕೂಗಿದ್ದರು. ಇದನ್ನ ಕಂಡ ಪ್ರಿಯಾಂಕಾ ಸಂತೋಷಪಟ್ಟಿದ್ದರು. ಇದೇ ವೇಳೆ ಮತ್ತಷ್ಟು ಉತ್ಸಾಹಗೊಂಡಿದ್ದ ಮಕ್ಕಳು, ಮೋದಿ ವಿರುದ್ಧ ಇನ್ನೂ ಹೆಚ್ಚಿನ ಕೆಟ್ಟ ಬೈಗುಳಗಳನ್ನೂ ಬಳಸಿದ್ದರು. ಮಕ್ಕಳು ಈ ರೀತಿ ಪದಬಳಕೆ ಮಾಡಿ ಕಿರುಚಾಡುತ್ತಿದ್ದರೂ ಪ್ರಿಯಾಂಕಾ ತುಟಿ ಬಿಚ್ಚಿರಲಿಲ್ಲ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.