ಮುಂಬೈ: ರಸ್ತೆಗಿಳಿದರೆ ಸಾಕು ಹಾರ್ನ್ ಅಬ್ಬರ... ಟ್ರಾಫಿಕ್ನಲ್ಲಿ ಒಂದು ನಿಮಿಷ ಸಿಲುಕಿದ್ದರೆ ಮತ್ತದೇ ಹಾರ್ನ್ ಕಿರಿಕಿರಿ.. ಇದಕ್ಕೆ ಏನೂ ಪರಿಹಾರ ಇಲ್ವಾ ಎನ್ನುವ ಮಂದಿಗೆ ಹನ್ನೊಂದು ವರ್ಷದ ಬಾಲಕಿ ಒಂದೊಳ್ಳೆ ಐಡಿಯಾ ನೀಡಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಖಾತೆಯಲ್ಲಿ ಹನ್ನೊಂದು ವರ್ಷದ ಬಾಲಕಿಯ ಐಡಿಯಾವನ್ನು ಶೇರ್ ಮಾಡಿದ್ದಾರೆ.
-
At the end of a tiring day, when you see something like this in the mail..the weariness vanishes...I know I’m working for people like her, who want a better—and quieter world! 😊 pic.twitter.com/lXsGLcrqlf
— anand mahindra (@anandmahindra) April 3, 2019 " class="align-text-top noRightClick twitterSection" data="
">At the end of a tiring day, when you see something like this in the mail..the weariness vanishes...I know I’m working for people like her, who want a better—and quieter world! 😊 pic.twitter.com/lXsGLcrqlf
— anand mahindra (@anandmahindra) April 3, 2019At the end of a tiring day, when you see something like this in the mail..the weariness vanishes...I know I’m working for people like her, who want a better—and quieter world! 😊 pic.twitter.com/lXsGLcrqlf
— anand mahindra (@anandmahindra) April 3, 2019
ನೇರವಾಗಿ ಆನಂದ್ ಮಹೀಂದ್ರಾರಿಗೆ ಪತ್ರ ಬರೆದಿದ್ದ ಮಹಿಕಾ ಮಿಶ್ರಾ ಎನ್ನುವ 11 ವರ್ಷದ ಬಾಲಕಿ ಹಾರ್ನ್ ಕಿರಿಕಿರಿಗೆ ವಿವರವಾದ ಪರಿಹಾರ ನೀಡಿದ್ದಾಳೆ. ಮಹೀಂದ್ರಾ ಕಂಪೆನಿಯಲ್ಲಿ ಮುಂದಿನ ದಿನಗಳಲ್ಲಿ ತಯಾರಾಗುವ ಕಾರುಗಳಲ್ಲಿನ ಹಾರ್ನ್ ಹತ್ತು ನಿಮಿಷದಲ್ಲಿ ಕೇವಲ ಐದು ನಿಮಿಷ ಮಾತ್ರ ಹಾರ್ನ್ ಆಗುವಂತಿರಬೇಕು ಮತ್ತು ಆ ಹಾರ್ನ್ ಕೇವಲ ಮೂರು ಸೆಕೆಂಡ್ ಮಾತ್ರ ಕೇಳಿಸುವಂತಿರಬೇಕು ಎಂದು ತನ್ ಐಡಿಯಾವನ್ನು ಹಂಚಿಕೊಂಡಿದ್ದಾಳೆ.
ಆನಂದ್ ಮಹೀಂದ್ರ ಟ್ವಿಟರ್ನಲ್ಲಿ ಶೇರ್ ಬಾಲಕಿಯ ಪತ್ರ ಶೇರ್ ಮಾಡ್ತಿದ್ದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಆನಂದ್ ಮಹೀಂದ್ರ ಅಡಿಬರಹದಲ್ಲಿ ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.