ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿ ನಾಯಕನಾಗಿ, ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ಅನುಭವವಿರುವ ಎಂಎಸ್ ಧೋನಿ ವಿಶ್ವಕಪ್ನಲ್ಲಿ ಬಹುಮುಖ ಪ್ರತಿಭೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ
ಧೋನಿ ಪಾತ್ರ ತಂಡದಲ್ಲಿ ಪ್ರಮುಖವಾಗಿದೆ ಏಕೆಂದರೆ ನಮ್ಮ ತಂಡದ ಮೊದಲ ಮೂರು ಸ್ಥಾನ ಅದ್ಭುತವಾಗಿದೆ. ಆದರೆ ಈ ಮೂರು ಸ್ಥಾನಗಳು ವಿಫಲವಾದರೆ 4 ಅಥವಾ 5ನೇ ಕ್ರಮಾಂಕದಲ್ಲಿ ಧೋನಿ ಕೊಡುಗೆ ತಂಡಕ್ಕೆ ಮಹತ್ವದಾಗಿದೆ. ಈ ಹಂತದಲ್ಲಿ ಧೋನಿ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಜೊತೆಯಾಗಿ ಸಮರ್ಥನೀಯ ಟಾರ್ಗೆಟ್ ನೀಡಲು ಶೆೇ 100 ರಷ್ಟ ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಯಾಟಿಂಗ್ ಜೊತೆಗೆ ಧೋನಿ ವಿಕೆಟ್ ಕೀಪಿಂಗ್ ಸ್ಕಿಲ್ ಕೂಡ ತಂಡಕ್ಕೆ ಅನುಕೂಲಕರವಾಗಿದೆ. ಧೋನಿ ವಿಕೆಟ್ ಕೀಪಿಂಗ್ ಜೊತೆಗೆ ಯುವ ಬೌಲರ್ಗಳಿಗೆ ನೀಡುವ ಸಲಹೆಗಳು ಸಹ ಇತ್ತೀಚೆಗಿನ ಕೆಲವು ಪಂದ್ಯಗಳಲ್ಲಿ ಯಶಸ್ವಿಯಾಗಿವೆ. ಇನ್ನು ಫೀಲ್ಡಿಂಗ್ ಸಂಯೋಜನೆಯಲ್ಲಿ ಕೊಹ್ಲಿ ಜೊತೆಗೆ ಇದ್ದೇ ಇರುತ್ತಾರೆ ಎಂದು ಗವಾಸ್ಕರ್ ಧೋನಿ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ.
ಇದರ ಜೊತೆಗೆ ಧೋನಿ ನಾಯಕನಾಗಿ 2011, ವಿಶ್ವಕಪ್ನಲ್ಲಿ ಧೋನಿ ನೇತೃತ್ವದಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿದೆ. ಈ ಸಂದರ್ಭದಲ್ಲಿ ಧೋನಿ ಚಾಣಾಕ್ಷ ನೀತಿಗಳಿಂದ ತಂಡವನ್ನು ಹೇಗೆ ಮುನ್ನಡೆಸಿದ್ದಾರೆ ಎಂಬುದು ನಮಗೆಲ್ಲ ತಿಳಿದಿದೆ ಎಂದು ಧೋನಿ ಸಾಮರ್ಥ್ಯವನ್ನು ಕೊಂಡಾಡಿದ್ದಾರೆ.