ಚೆನ್ನೈ: ಟೀಂ ಇಂಡಿಯಾದ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚುತ್ತಿದ್ದು, ಮೇಲಿಂದ ಮೇಲೆ ಬೆನ್ನು ನೋವಿನ ಸಮಸ್ಯಗೆ ಕೂಡ ಒಳಗಾಗುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್ ವಿರುದ್ಧದ ಪಂದ್ಯದಿಂದ ಧೋನಿ ಬೆನ್ನು ನೋವಿನ ಕಾರಣ ಹೊರಗುಳಿದಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಹಿ, ಮುಂಬರುವ ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ನಾನು ಫಿಟ್ನೆಸ್ ಬಗ್ಗೆ ಇನ್ನಷ್ಟು ಗಮನ ಹರಿಸುವೆ ಎಂದು ತಿಳಿಸಿದ್ದಾರೆ.
ಮೈದಾನದಲ್ಲಿ ಕೆಲವೊಮ್ಮೆ ಬೆನ್ನು ಹಿಡಿದಿಟ್ಟುಕೊಳ್ಳುತ್ತಿದ್ದು, ಅದರಿಂದ ಆಡಲು ತೊಂದರೆ ಆಗುತ್ತಿದೆ. ಮುಂಬರುವ ವಿಶ್ವಕಪ್ ವೇಳೆಗೆ ಶೇ.100ರಷ್ಟು ಫಿಟ್ ಆಗಿ ಕಣಕ್ಕಿಳಿಯಲು ಕ್ರಮ ಕೈಗೊಳ್ಳುವುದಾಗಿ ಮಾಹಿ ಹೇಳಿಕೊಂಡಿದ್ದಾರೆ.
ನಿನ್ನೆ ಸನ್ರೈಸರ್ಸ್ ವಿರುದ್ಧ ಗೆಲುವು ದಾಖಲು ಮಾಡಿರುವ ಸಿಎಸ್ಕೆ ತಂಡ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಂಡಿದೆ. ಹೀಗಾಗಿ ಮುಂದಿನ ಕೆಲ ಪಂದ್ಯಗಳಿಂದ ಧೋನಿ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಕೂಡ ದಟ್ಟವಾಗಿ ಕಂಡು ಬರುತ್ತಿದೆ.