ETV Bharat / briefs

ಹತ್ತು ದಿನ, 540 ಮಂದಿ ನಾಪತ್ತೆ...! ಮುತ್ತಿನ ನಗರಿಯಲ್ಲಿ ಏನಾಗ್ತಿದೆ..?

ಜೂನ್​ 1ರಿಂದ ಜೂನ್ 10ರ ಅವಧಿಯಲ್ಲಿ 540 ಮಂದಿ ಕಾಣೆಯಾಗಿದ್ದಾರೆ. ಸರಾಸರಿ 54 ಮಂದಿ ನಿತ್ಯ ನಾಪತ್ತೆಯಾಗುತ್ತಿದ್ದಾರೆ. 2 ವರ್ಷದ ಮಗುವಿನಿಂದ 80 ವರ್ಷದ ಎಲ್ಲ ವಯೋಮಾನದವರೂ ನಾಪತ್ತೆ ಪಟ್ಟಿಯಲ್ಲಿ ಸೇರಿದ್ದಾರೆ. ತೆಲಂಗಾಣ ಪೊಲೀಸರ ನಿರ್ಲಕ್ಷ್ಯವೂ ಈ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ನಾಪತ್ತೆ
author img

By

Published : Jun 13, 2019, 3:00 PM IST

ಹೈದರಾಬಾದ್: ಮುತ್ತಿನ ನಗರಿ ಎಂದೇ ಕರೆಸಿಕೊಳ್ಳುವ ಹೈದರಾಬಾದ್​​ನಲ್ಲಿ ಕಳೆದ ಹತ್ತು ದಿನದಲ್ಲಿ ಬರೋಬ್ಬರಿ 500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತೆಲುಗಿನ ಪ್ರಮುಖ ಪತ್ರಿಕೆ ಈನಾಡು ವರದಿ ಮಾಡಿದೆ.

ಏಮೈಪೋತುನ್ನಾರು..?(ಏನಾಗಿ ಹೋಗ್ತಿದ್ದೀರಾ..?) ಎನ್ನುವ ಹೆಸರಿನಲ್ಲಿ ಈನಾಡು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ವರದಿಯನ್ವಯ ಸಾಮಾಜಿಕ ಜಾಲತಾಣ ಪ್ರಭಾವವೇ ನಾಪತ್ತೆ ಮೂಲ ಕಾರಣ ಎಂದಿದೆ.

ಜೂನ್​ 1ರಿಂದ ಜೂನ್ 10ರ ಅವಧಿಯಲ್ಲಿ 540 ಮಂದಿ ಕಾಣೆಯಾಗಿದ್ದಾರೆ. ಸರಾಸರಿ 54 ಮಂದಿ ನಿತ್ಯ ನಾಪತ್ತೆಯಾಗುತ್ತಿದ್ದಾರೆ. 2 ವರ್ಷದ ಮಗುವಿನಿಂದ 80 ವರ್ಷದ ಎಲ್ಲ ವಯೋಮಾನದವರೂ ನಾಪತ್ತೆ ಪಟ್ಟಿಯಲ್ಲಿ ಸೇರಿದ್ದಾರೆ. ತೆಲಂಗಾಣ ಪೊಲೀಸರ ನಿರ್ಲಕ್ಷ್ಯವೂ ಈ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯ ಈ ವರದಿ ತೆಲುಗು ನಾಡಿನ ಮಂದಿಯನ್ನು ಭಯಭೀತಗೊಳಿಸಿದ್ದು, ಸಾಕಷ್ಟು ಮಂದಿ ಪೊಲೀಸರ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

2016ರಲ್ಲಿ 16,134 ನಾಪತ್ತೆ ಪ್ರಕರಣಗಳು ತೆಲಂಗಾಣದಲ್ಲಿ ದಾಖಲಾಗಿದ್ದವು. ಅಂದರೆ ಸರಾಸರಿ 44 ಮಂದಿ ಆ ವರ್ಷ ಕಾಣೆಯಾಗಿದ್ದರು. ಆದರೆ ಈ ಪ್ರಮಾಣ 2019ರಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಮೇ ಹಾಗೂ ಜೂನ್​​ ತಿಂಗಳಲ್ಲಿ ನಾಪತ್ತೆ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೂ ಇವೆ.

"ನಾಪತ್ತೆ ಪ್ರಕರಣ ಏರಿಕೆ ಯಾವುದೇ ಭಯಪಡುವಂತಹ ವಿಚಾರವಲ್ಲ. ಬೇಸಿಗೆಯಲ್ಲಿ ಸಹಜವಾಗಿ ಕಾಣೆಯಾಗುವವರ ಸಂಖ್ಯೆ ಹೆಚ್ಚಾಗುತ್ತದೆ. ಪರೀಕ್ಷೆ ಹಾಗೂ ಶಾಲಾ ಆರಂಭಕ್ಕೆ ಹೆದರಿ ಮಕ್ಕಳು ಮನೆ ತೊರೆಯುತ್ತಾರೆ. ಕೆಲ ದಿನಗಳಲ್ಲಿ ಆ ಮಕ್ಕಳು ಮತ್ತೆ ಮನೆ ಸೇರುತ್ತಾರೆ" ಎಂದು ಐಜಿಪಿ ಸ್ವಾತಿ ಲಕ್ರಾ ಮಾಹಿತಿ ನೀಡಿದ್ದಾರೆ.

ಸದ್ಯ ಜೂನ್ 1ರಿಂದ 10ರ ಅವಧಿಯಲ್ಲಿ 540 ನಾಪತ್ತೆ ಪ್ರಕರಣ ದಾಖಲಾಗಿದ್ದು ಇದರಲ್ಲಿ 222 ಮಂದಿ ಪತ್ತೆಯಾಗಿದ್ದಾರೆ ಎಂದು ಈನಾಡು ವರದಿ ಪ್ರಕಟವಾದ ಮರುದಿನ ಪೊಲೀಸರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. 2018ರಲ್ಲಿ ಶೇ.85ರಷ್ಟು ನಾಪತ್ತೆ ಪ್ರಕರಣಗಳು ಸುಖಾಂತ್ಯ ಕಂಡಿದೆ ಎಂದು ಇದೇ ವೇಳೆ ಪೊಲೀಸರು ಹೇಳಿದ್ದಾರೆ.

Intro:Body:

ಹತ್ತು ದಿನ, 540 ಮಂದಿ ನಾಪತ್ತೆ...! ಮುತ್ತಿನ ನಗರಿಯಲ್ಲಿ ಏನಾಗ್ತಿದೆ..?

ಹೈದರಾಬಾದ್: ಮುತ್ತಿನ ನಗರಿ ಎಂದೇ ಕರೆಸಿಕೊಳ್ಳುವ ಹೈದರಾಬಾದ್​​ನಲ್ಲಿ ಕಳೆದ ಹತ್ತು ದಿನದಲ್ಲಿ ಬರೋಬ್ಬರಿ 500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತೆಲುಗಿನ ಪ್ರಮುಖ ಪತ್ರಿಕೆ ಈನಾಡು ವರದಿ ಮಾಡಿದೆ.

ಎಮೈಪೋತುನ್ನಾರು..?(ಏನಾಗುತ್ತಿದೆ..?) ಎನ್ನುವ ಹೆಸರಿನಲ್ಲಿ ಈನಾಡು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದೆ. ವರದಿಯನ್ವಯ ಸಾಮಾಜಿಕ ಜಾಲತಾಣ ಪ್ರಭಾವವೇ ನಾಪತ್ತೆ ಮೂಲ ಕಾರಣ ಎಂದಿದೆ.

ಜೂನ್​ 1ರಿಂದ ಜೂನ್ 10ರ ಅವಧಿಯಲ್ಲಿ 540 ಮಂದಿ ಕಾಣೆಯಾಗಿದ್ದಾರೆ. ಸರಾಸರಿ 54 ಮಂದಿ ಪ್ರತಿನಿತ್ಯ ನಾಪತ್ತೆಯಾಗುತ್ತಿದ್ದಾರೆ. 2 ವರ್ಷದ ಮಗುವಿನಿಂದ 80 ವರ್ಷದ ಎಲ್ಲ ವಯೋಮಾನದವರೂ ನಾಪತ್ತೆ ಪಟ್ಟಿಯಲ್ಲಿ ಸೇರಿದ್ದಾರೆ. ತೆಲಂಗಾಣ ಪೊಲೀಸರ ನಿರ್ಲಕ್ಷ್ಯವೂ ಈ ಸಂಖ್ಯೆ ಹೆಚ್ಚಳಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಸದ್ಯ ಈ ವರದಿ ತೆಲುಗು ನಾಡಿನ ಮಂದಿಯನ್ನು ಭಯಭೀತಗೊಳಿಸಿದ್ದು, ಸಾಕಷ್ಟು ಮಂದಿ ಪೊಲೀಸರ ಕಾರ್ಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

2016ರಲ್ಲಿ 16,134 ನಾಪತ್ತೆ ಪ್ರಕರಣಗಳು ತೆಲಂಗಾಣದಲ್ಲಿ ದಾಖಲಾಗಿದ್ದವು. ಅಂದರೆ ಸರಾಸರಿ 44 ಮಂದಿ ಆ ವರ್ಷ ಕಾಣೆಯಾಗಿದ್ದರು. ಆದರೆ ಈ ಪ್ರಮಾಣ 2019ರಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಮೇ ಹಾಗೂ ಜೂನ್​​ ತಿಂಗಳಲ್ಲಿ ನಾಪತ್ತೆ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೂ ಇವೆ.

"ನಾಪತ್ತೆ ಪ್ರಕರಣ ಏರಿಕೆ ಯಾವುದೇ ಭಯಪಡುವಂತಹ ವಿಚಾರವಲ್ಲ. ಬೇಸಿಗೆಯಲ್ಲಿ ಸಹಜವಾಗಿ ಕಾಣೆಯಾಗುವವರ ಸಂಖ್ಯೆ ಹೆಚ್ಚಾಗುತ್ತದೆ. ಪರೀಕ್ಷೆ ಹಾಗೂ ಶಾಲಾ ಆರಂಭಕ್ಕೆ ಹೆದರಿ ಮಕ್ಕಳು ಮನೆ ತೊರೆಯುತ್ತಾರೆ. ಕೆಲ ದಿನಗಳಲ್ಲಿ ಆ ಮಕ್ಕಳು ಮತ್ತೆ ಮನೆ ಸೇರುತ್ತಾರೆ" ಎಂದು ಐಜಿಪಿ ಸ್ವಾತಿ ಲಕ್ರಾ ಮಾಹಿತಿ ನೀಡಿದ್ದಾರೆ.

ಸದ್ಯ ಜೂನ್ 1ರಿಂದ 10ರ ಅವಧಿಯಲ್ಲಿ 540 ನಾಪತ್ತೆ ಪ್ರಕರಣ ದಾಖಲಾಗಿದ್ದು ಇದರಲ್ಲಿ 222 ಮಂದಿ ಪತ್ತೆಯಾಗಿದ್ದಾರೆ ಎಂದು ಈನಾಡು ವರದಿ ಪ್ರಕಟವಾದ ಮರುದಿನ ಪೊಲೀಸರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. 2018ರಲ್ಲಿ ಶೇ.85ರಷ್ಟು ನಾಪತ್ತೆ ಪ್ರಕರಣಗಳು ಸುಖಾಂತ್ಯ ಕಂಡಿದೆ ಎಂದು ಇದೇ ವೇಳೆ ಪೊಲೀಸರು ಹೇಳಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.