ETV Bharat / briefs

ಪಾಕ್ ಮೇಲೆ ಭಾರತ ದಾಳಿ ಮಾಡುತ್ತಾ...? ವಿದೇಶಾಂಗ ಇಲಾಖೆಯಿಂದ ಸ್ಪಷ್ಟೀಕರಣ

ಭಾರತೀಯ ವಿದೇಶಾಂಗ ಇಲಾಖೆ ಭಾನುವಾರ ಸಂಜೆ ಪಾಕ್ ಹೇಳಿಕೆಗೆ ತನ್ನ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿಯ ಬೇಜವಾಬ್ದಾರಿತನದ ಹೇಳಿಕೆಯನ್ನ ಅಲ್ಲಗಳೆದಿದೆ.

author img

By

Published : Apr 7, 2019, 9:36 PM IST

ಭಾರತ

ನವದೆಹಲಿ: ಇನ್ನೊಂದು ವಾರದಲ್ಲಿ ಪಾಕಿಸ್ತಾನ ಮೇಲೆ ಭಾರತ ದಾಳಿ ನಡೆಸಲಿದೆ ಎನ್ನುವ ಪಾಕ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.

ಭಾರತೀಯ ವಿದೇಶಾಂಗ ಇಲಾಖೆ ಭಾನುವಾರ ಸಂಜೆ ಪಾಕ್ ಹೇಳಿಕೆಗೆ ತನ್ನ ಪ್ರತಿಕ್ರಿಯೆ ನೀಡಿದ್ದು, ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮಾತು ಬೇಜವಾಬ್ದಾರಿ ಎಂದು ಬಣ್ಣಿಸಿರುವ ವಿದೇಶಾಂಗ ಇಲಾಖೆ, ಇದು ಉಭಯ ದೇಶಗಳ ನಡುವೆ ಶಾಂತಿ ಕದಡುವ ಪ್ರಯತ್ನ ಹಾಗೂ ಪಾಕ್ ಪ್ರಚೋದಿತ ಉಗ್ರರರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕ್‌ ಮಾಡುತ್ತಿರುವ ನಾಟಕ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಭಾನುವಾರ ಬೆಳಗ್ಗೆ ಪಾಕ್‌ನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿಕೆಯೊಂದನ್ನು ನೀಡಿದ್ದು, ಅದರಂತೆ ಇನ್ನೊಂದು ವಾರದಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ ಎಂದಿದ್ದರು.

ಏ.16ರಿಂದ 20ರ ನಡುವೆ ಈ ದಾಳಿ ನಡೆಯುವ ಸಾಧ್ಯತೆಯನ್ನು ಸಚಿವರು ವ್ಯಕ್ತಪಡಿಸಿದ್ದರು. ಇದು ಉಭಯ ದೇಶಗಳಲ್ಲಿ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಸದ್ಯ ಈ ಹೇಳಿಕೆಯನ್ನು ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ.

Intro:Body:

ಪಾಕ್ ಮೇಲೆ ಭಾರತ ದಾಳಿ ಮಾಡುತ್ತಾ...? ಸ್ಪಷ್ಟೀಕರಣ ನೀಡಿದ ವಿದೇಶಾಂಗ ಇಲಾಖೆ

ನವದೆಹಲಿ: ಇನ್ನೊಂದು ವಾರದಲ್ಲಿ ಪಾಕಿಸ್ತಾನ ಮೇಲೆ ಭಾರತ ದಾಳಿ ನಡೆಸಲಿದೆ ಎನ್ನುವ ಪಾಕ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.

ಭಾರತೀಯ ವಿದೇಶಾಂಗ ಇಲಾಖೆ ಭಾನುವಾರ ಸಂಜೆ ಪಾಕ್ ಹೇಳಿಕೆಗೆ ತನ್ ಪ್ರತಿಕ್ರಿಯೆ ನೀಡಿದ್ದು, ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಬೇಜವಾಬ್ದಾರಿ ಮಾತನ್ನು ತಿರಸ್ಕರಿಸಿದೆ. ಇದು ಉಭಯ ದೇಶಗಳ ನಡುವೆ ಶಾಂತಿ ಕದಡುವ ಪ್ರಯತ್ನ , ಹಾಗೂ ಪಾಕ್ ಪ್ರಚೋದಿತ ಉಗ್ರರರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕಿಸ್ತಾನ ಮಾಡುತ್ತಿರುವ ನಾಟಕ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಭಾನುವಾರ ಬೆಳಗ್ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿಕೆಯೊಂದನ್ನು ನೀಡಿದ್ದು, ಅದರಂತೆ ಇನ್ನೊಂದು ವಾರದಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಲಿದೆ ಎಂದಿದ್ದರು.

ಏ.16ರಿಂದ 20ರ ನಡುವೆ ಈ ದಾಳಿ ನಡೆಯುವ ಸಾಧ್ಯತೆಯನ್ನು ಸಚಿವರು ವ್ಯಕ್ತಪಡಿಸಿದ್ದರು. ಇದು ಉಭಯ ದೇಶಗಳಲ್ಲಿ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಸದ್ಯ ಈ ಹೇಳಿಕೆಯನ್ನು ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.