ನವದೆಹಲಿ: 2019ರ ಲೋಕಸಭಾ ಚುನಾವಣೆ ಫಲಿತಾಂಶ ಇನ್ನೇನು ಹೊರ ಬೀಳಲಿದೆ. ಈ ಬಾರಿ ಫಲಿತಾಂಶ ಇದೇ 23 ರಂದು ಪ್ರಕಟಗೊಳ್ಳಲಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಈ ಭಾರಿ ಬಹುತೇಕ ಸಮೀಕ್ಷೆ ಎನ್ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತವೆ ಎಂದು ಭವಿಷ್ಯ ನುಡಿದಿವೆ. ಆದರೆ ಇವೆಲ್ಲ ಸಮೀಕ್ಷೆಗಳು ನಿಜವಾಗುತ್ತಾ ಇಲ್ಲವೇ ಎಂಬುದು ಮೇ 23ಕ್ಕೆ ಗೊತ್ತಾಗಲಿದೆ.
ಈ ನಡುವೆ ಕಳೆದ ಮೂರು ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಪಡೆದಿದ್ದವು. ಹೇಗಿತ್ತು ಅವುಗಳ ಬಲಾಬಲ ಅನ್ನೋದನ್ನು ನೋಡೋದಾದರೆ,
2014 ರ ಎನ್ಡಿಎ, ಯುಪಿಎ ಇತರರ ಬಲಾಬಲ
ಮೇ 16 2014 ರಂದು ಪ್ರಕಟಗೊಂಡಿದ್ದ ಫಲಿತಾಂಶ
ಎನ್ಡಿಎ | ಯುಪಿಎ | ಇತರರು |
336 | 58 | 149 |
ಪ್ರಮುಖ ಪಕ್ಷಗಳು ಗೆದ್ದುಕೊಂಡ ಸೀಟುಗಳಿಷ್ಟು!
- ಬಿಜೆಪಿ - 282
- ಕಾಂಗ್ರೆಸ್ - 44
- ಎಐಎಡಿಎಂಕೆ- 37
- ಟಿಎಂಸಿ - 34
- ಬಿಜೆಡಿ - 20
- ಶಿವಸೇನಾ - 18
- ಟಿಆರ್ಎಸ್ - 11
- ಸಿಪಿಐಎಂ - 09
- ವೈಎಸ್ಆರ್ಪಿ- 09
- ಎನ್ಸಿಪಿ - 06
- ಲೋಕಜನಶಕ್ತಿ ಪಕ್ಷ 06
- ಎಸ್ಪಿ - 05
- ಆರ್ಜೆಡಿ - 04
- ಆಮ್ ಆದ್ಮಿ ಪಕ್ಷ 04
- ಅಕಾಲಿದಳ 04
- ಪಿಡಿಪಿ 03
- ಪಕ್ಷೇತರರು 03
- ಎಐಯುಡಿಎಫ್ - 03
- ಆರ್ಎಲ್ಎಸ್ಪಿ - 03
- ರಾಷ್ಟ್ರೀಯ ಲೋಕದಳ - 3
- ಜೆಡಿಎಸ್ - 02
- ಜೆಎಂಎಂ - 02
- ಐಯುಎಂಎಲ್- 02
- ಜೆಡಿಯು - 02
- ಸಿಪಿಐ - 01
ಎರಡು ದಶಕಗಳ EXIT POLL:ಸಮೀಕ್ಷೆ ಹೇಳಿದ್ದೇ ಬೇರೆ,ಮತದಾರನ ಆಯ್ಕೆಯೇ ಬೇರೆ!
ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 427 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಅದರಲ್ಲಿ ಆ ಪಕ್ಷ ಗೆದ್ದಿದ್ದು, 282 ಸ್ಥಾನಗಳನ್ನ. ಅಜಮಾಸು ಶೇ 60 ರಷ್ಟು ಸ್ಥಾನಗಳಲ್ಲಿ ಗೆದ್ದು ಪಕ್ಷ ಬೀಗಿತ್ತು.
ಇನ್ನು ಪ್ರತಿಪಕ್ಷ ಕಾಂಗ್ರೆಸ್ ಬರೋಬ್ಬರಿ 464 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದುಕೊಂಡಿದ್ದು ಮಾತ್ರ 44 ಸ್ಥಾನಗಳನ್ನ . ಇವರ ಸಕ್ಸಸ್ ರೇಟ್ ಶೇ 10 ಆಸುಪಾಸಿನಲ್ಲಿತ್ತು ಎನ್ನುವುದು ಗಮನಾರ್ಹ. ಕಾಂಗ್ರೆಸ್ ತನ್ನ ರಾಜಕೀಯ ಇತಿಹಾಸದಲ್ಲಿ ಕಳೆದ ಬಾರಿ ಅತ್ಯಂತ ಕಡಿಮೆ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಕಳಪೆ ಸಾಧನೆ ಮಾಡಿತ್ತು.
2014 ರಲ್ಲಿ ಚುನಾವಣಾ ಭವಿಷ್ಯ ನಿಜವಾಗಿದ್ವಾ?
ಕಳೆದ ಚುನಾವಣೆಯಲ್ಲಿ ಹಲವು ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆಗಳನ್ನ ಬಹಿರಂಗಗೊಳಿಸಿದ್ದವು. ಚಾಣಕ್ಯ ಹೊರತು ಪಡಿಸಿ ಯಾವುದೇ ಸಮೀಕ್ಷೆ ಹತ್ತಿರ ಫಲಿತಾಂಶ ನೀಡುವಲ್ಲಿ ವಿಫಲವಾಗಿದ್ದವು.
ಚುನಾವಣೋತ್ತರ ಸಮೀಕ್ಷೆಗಳು ಅಂದು ಹೇಳಿದ್ದೇನು?
ಸಂಸ್ಥೆ | ಎನ್ಡಿಎ | ಯುಪಿಎ | ಇತರೆ |
CNN-IBN | 276 (±6) | 97 (±5) | 148 (±23) |
India Today | 272 (±11) | 115 (±5) | 156 (±6) |
Chanakya | 340 (±14) | 70 (±9) | 133 (±11) |
Times Now | 249 | 148 | 146 |
ABP News | 274 | 97 | 165 |
CVoter | 289 | 101 | 148 |
ಇನ್ನು 2009 ರಲ್ಲೂ ಯುಪಿಎ ಹಾಗೂ ಎನ್ಡಿಎ ನಡುವೆ ಟಫ್ ಪೈಟ್ ಎಂಬ ಭವಿಷ್ಯವನ್ನು ಎಲ್ಲ ಮಾಧ್ಯಮಗಳು ಮತ್ತು ಸಮೀಕ್ಷೆಗಳು ನುಡಿದಿದ್ದವು. ಆದರೆ ಅಂತಿಮ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. 2009ರಲ್ಲಿ ಯುಪಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಚುನಾವಣೆಗೂ ಮುನ್ನ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ರೈತರ ಸುಮಾರು 60 ಸಾವಿರ ಕೋಟಿ ರೂ. ಮನ್ನಾ ಮಾಡಿತ್ತು. ಅಷ್ಟೇ ಅಲ್ಲ ನಾಗರಿಕ ಪರಮಾಣು ಒಪ್ಪಂದಕ್ಕೆ ಎಡಪಕ್ಷಗಳ ವಿರೋಧದ ನಡುವೆ ಅನುಮತಿ ನೀಡಿತ್ತು. ಇವರೆಡೂ ಕಾರಣಗಳಿಂದ ಎಲ್ಲರ ನಿರೀಕ್ಷೆಗಳನ್ನ ಹುಸಿ ಮಾಡಿ ಮನಮೋಹನ್ ಸಿಂಗ್ ಸರ್ಕಾರ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಎಲ್ಲ ಚುನಾವಣೆ ಸಮೀಕ್ಷೆಗಳನ್ನ ಸುಳ್ಳಾಗಿಸಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಬರೋಬ್ಬರಿ 262 ಸ್ಥಾನಗಳನ್ನ ಗಳಿಸಿ ಸರಳ ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆ ಅನುಭವಿಸಿತ್ತು.
2009 ರ ಚುನಾವಣೆ ಫಲಿತಾಂಶ
ಒಟ್ಟು ಸ್ಥಾನ 543
- ಯುಪಿಎ - 262
- ಕಾಂಗ್ರೆಸ್ - 206
- ಟಿಎಂಸಿ - 19
- ಡಿಎಂಕೆ - 18
- ಎನ್ಸಿಪಿ - 09
- ಎನ್ಸಿ - 03
- ಜೆಎಂಎಂ - 02
- ಮುಸ್ಲಿಂ ಲೀಗ್ (ಕೇರಳ) -02
- ಎಂಐಎಂ - 01
- ಬೋಡೋ ಫ್ರಂಟ್ - 01
- ಕೇರಳ ಕಾಂಗ್ರೆಸ್ - 01
- ಎನ್ಡಿಎ - 159
- ಬಿಜೆಪಿ - 116
- ಜೆಡಿಯು 20
- ಶಿವಸೇನಾ 11
- ಆರ್ಎಲ್ಡಿ 5
- ಅಕಾಲಿದಳ 4
- ಟಿಆರ್ಎಸ್ 2
- ಎಜಿಪಿ 1
ತೃತೀಯ ರಂಗ - 80( ಪ್ರಮುಖ ಪಕ್ಷಗಳ ವಿವರ)
- ಬಹುಜನ ಸಮಾಜ ಪಕ್ಷ(ಬಿಎಸ್ಪಿ) - 21
- ಸಿಪಿಐ ಎಂ - 16
- ಬಿಜೆಡಿ 14
- ಎಐಎಡಿಎಂಕೆ 09
- ಟಿಡಿಪಿ 06
- ಸಿಪಿಐ 04
- ಜೆಡಿಎಸ್ 03
- ಫಾರ್ವರ್ಡ್ ಬ್ಲಾಕ್ 02
- ಆರ್ಎಸ್ಪಿ 02
- ಎಂಡಿಎಂಕೆ 01
- ಹರ್ಯಾಣ ಜನಹಿತ ಕಾಂಗ್ರೆಸ್ 01
- ಜಾರ್ಖಂಡ್ ವಿಕಾಸ್ ಮೋರ್ಚಾ 01‘
ನಾಲ್ಕನೇ ರಂಗ 27
- ಎಸ್ಪಿ ( ಸಮಾಜವಾದಿ ಪಕ್ಷ) 27
- ಆರ್ಜೆಡಿ 04
- ಇತರರು 15
2009 ರ ಚುನಾವಣೆಯಲ್ಲಿ ಯುಪಿಎ 262 ಸ್ಥಾನಗಳನ್ನು ಗಳಿಸಿದರೆ, ತೃತೀಯ ರಂಗ ಹಾಗೂ ನಾಲ್ಕನೇ ರಂಗದ ಪಕ್ಷಗಳು 107 ಸ್ಥಾನಗಳನ್ನ ಪಡೆದಿದ್ದವು. ಇನ್ನು ಕೇವಲ 159 ಸ್ಥಾನಗಳನ್ನ ಪಡೆದ ಎನ್ಡಿಎ ಮತ್ತೊಮ್ಮೆ ಸೋತು ನಿರಾಸೆ ಅನುಭವಿಸಿತ್ತು. ನಾಲ್ಕನೇ ರಂಗದ ಬೆಂಬಲ ಪಡೆದ ಯುಪಿಎ ಅಧಿಕಾರದ ಗದ್ದುಗೆ ಹಿಡಿದಿತ್ತು. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಕೈಕೊಟ್ಟಿದ್ದವು. ಇಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ 200ಕ್ಕೂ ಹೆಚ್ಚು ಸ್ಥಾನಗಳನ್ನ ಪಡೆದಿತ್ತು ಎನ್ನುವುದು ವಿಶೇಷ.
ಎಲ್ಲರ ನಿರೀಕ್ಷೆಗಳನ್ನ ತಲೆ ಕೆಳಗು ಮಾಡಿದ 2004 ರ ಚುನಾವಣೆ
ಇಂಡಿಯಾ ಶೈನಿಂಗ್ಗೆ ಬಿದ್ದಿತ್ತು ಬಾರೀ ಹೊಡೆತ!: ಹೌದು 2004 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಚುನಾವಣೆ ಸಮೀಕ್ಷೆಗಳೂ ಅದನ್ನೇ ಹೇಳಿದ್ದವು. ಆದರೆ ಅಂತಿಮವಾಗಿ ಚುನಾವಣೆ ಫಲಿತಾಂಶ ಬಂದಾಗ ಎನ್ಡಿಎ ಸರ್ಕಾರ ಮಕಾಡೆ ಮಲಗಿತ್ತು.
ಪವಾಡ ಸದೃಶ್ಯ ರೀತಿಯಲ್ಲಿ ಅಧಿಕಾರ ಹಿಡಿದಿತ್ತು ಯುಪಿಎ
ಅಚ್ಚರಿಯ ರೀತಿಯಲ್ಲಿ ಪಿಎಂ ಆಗಿದ್ರು ಮನಮೋಹನ್ ಸಿಂಗ್: ಶೈನಿಂಗ್ ಇಂಡಿಯಾ ಕ್ಯಾಂಪೇನ್ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದರು ವಾಜಪೇಯಿ. ದೇಶಾದ್ಯಂತ ಮತ್ತೆ ವಾಜಪೇಯಿ ಅಧಿಕಾರಕ್ಕೆ ಬರ್ತಾರೆ ಅಂತಾನೆ ಎಲ್ಲಡೆಯಿಂದ ಮಾತುಗಳು ಕೇಳಿ ಬರ್ತಿದ್ದವು. ಆದರೆ, ಸೋನಿಯಾ ಗಾಂಧಿ ಇತರ ಪಕ್ಷಗಳೊಂದಿಗೆ ಮಾಡಿಕೊಂಡ ಹೊಂದಾಣಿಕೆ ಹಾಗೂ ಮೈತ್ರಿ ಈ ಎಲೆಕ್ಷನ್ನಲ್ಲಿ ಕೆಲಸ ಮಾಡಿತ್ತು. ಆ ಮೂಲಕ ಜನಪ್ರೀಯ ಪಿಎಂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಹೀನಾಯ ಸೋಲು ಅನುಭವಿಸಿತ್ತು.
ಅಂದು ಸಮೀಕ್ಷೆಗಳೇನು ಹೇಳಿದ್ದವು? ಆಗಿದ್ದೇನು?
ಸಮೀಕ್ಷಾ ಫಲಿತಾಂಶ
ಸಂಸ್ಥೆ | ಎನ್ಡಿಎ | ಯುಪಿಎ | ಇತರೆ |
ಆಜ್ತಕ್ | 248 | 190 | 105 |
ಎನ್ಡಿಟಿವಿ/ನೀಲ್ಸನ್ | 250 | 205 | 120 |
ಸಹರಾ ಡಿಆರ್ಎಸ್ | 278 | 181 | 102 |
ಸ್ಟಾರ್ ನ್ಯೂಸ್ ಸಿ ವೋಟರ್ | 275 | 186 | 98 |
ಝೀ ನ್ಯೂಸ್ | 249 | 176 | 117 |
ನಿಜವಾದ ಫಲಿತಾಂಶ | 189 | 225 | 129 |
2004 ರಲ್ಲಿದ್ದ ರಾಜಕೀಯ ಪರಿಸ್ಥಿತಿ
ಆಗ ಬಿಜೆಪಿ ಮಿತ್ರಪಕ್ಷವಾದ ಟಿಡಿಪಿ ಆಂಧ್ರಪ್ರದೇಶದಲ್ಲಿ ಆಡಳಿತದಲ್ಲಿತ್ತು. ಈ ಸಂದರ್ಭದಲ್ಲಿ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಮೇಲೆ ನಕ್ಸಲ್ ದಾಳಿಯೂ ನಡೆದಿತ್ತು. ಇದೇ ಘಟನೆಯ ಲಾಭ ಪಡೆದು ಆರು ತಿಂಗಳ ಮೊದಲೇ ಚುನಾವಣೆಗೆ ಹೊರಟು ನಿಂತಿದ್ದರು ಚಂದ್ರಬಾಬು ನಾಯ್ಡು. ಇದೇ ವೇಳೆ, ವಾಜಪೇಯಿ ಅತ್ತ ಕರ್ನಾಟಕದ ಆಗಿನ ಸಿಎಂ ಎಸ್ ಎಂ ಕೃಷ್ಣ ಸಹ ಅವಧಿ ಪೂರ್ವ ಚುನಾವಣೆಗೆ ಹೋಗಿದ್ದರು. ವಿಪರ್ಯಾಸ ಎಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ, ಟಿಡಿಪಿ ಹಾಗೂ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರ ಅಚ್ಚರಿಯ ರೀತಿಯಲ್ಲಿ ಸೋಲು ಅನುಭವಿಸಿದ್ದವು.
2004ರ ಫಲಿತಾಂಶ ಹೊರ ಬಿದ್ದಾಗ ಯುಪಿಎ 218 ಸ್ಥಾನಗಳನ್ನ ಗೆದ್ದರೆ, ಎಡಪಕ್ಷಗಳು 59 ಹಾಗೂ ಸಮಾಜವಾದಿ ಪಕ್ಷ 36 ಸ್ಥಾನಗಳನ್ನ ಬಾಚಿಕೊಂಡಿದ್ದವು. ಈ ಎಲ್ಲ ಪಕ್ಷಗಳು ಕೂಡಿಕೊಂಡು ಸಮ್ಮಿಶ್ರ ಸರ್ಕಾರವನ್ನ ರಚನೆ ಮಾಡಿದ್ದವು. ಸೋನಿಯಾ ಗಾಂಧಿ ಬದಲಿಗೆ ಅಚ್ಚರಿ ಅಭ್ಯರ್ಥಿಯಾಗಿ ಮನಮೋಹನ್ ಸಿಂಗ್ ಅವರನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿತ್ತು.
ಪ್ರಮುಖ ಪಕ್ಷಗಳು ಪಡೆದ ಸ್ಥಾನಗಳು
- ಕಾಂಗ್ರೆಸ್ - 145
- ಬಿಜೆಪಿ - 138
- ಸಿಪಿಐಎಂ - 69
- ಎಸ್ಪಿ 36
- ಎಐಡಿಎಂಕೆ 33
- ಆರ್ಜೆಡಿ 24
- ಬಿಎಸ್ಪಿ 19
- ಡಿಎಂಕೆ 16
- ಶಿವಸೇನಾ 12
- ಬಿಜೆಡಿ 11
- ಸಿಪಿಐ 10
- ಎನ್ಸಿಪಿ 09
- ಜೆಡಿಯು 08
- ಅಕಾಲಿದಳ 08
- ಟಿಡಿಪಿ 05
- ಟಿಆರ್ಎಸ್ 05
- ಜೆಎಂಎಂ 05
- ಲೋಕಜನಶಕ್ತಿ ಪಕ್ಷ 04
- ಎಂಡಿಎಂಕೆ 04
- ಆರ್ಎಲ್ಡಿ 03
- ಜೆಡಿಎಸ್ 03
- ಆರ್ಎಸ್ಪಿ 03
- ಫಾರ್ವರ್ಡ್ ಬ್ಲಾಕ್ 03
- ಟಿಎಂಸಿ 02
- ಎನ್ಸಿ 02
ಈ ಚುನಾವಣೆಯಲ್ಲಿ ಕಾಂಗ್ರೆಸ್ 400 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಬಿಜೆಪಿ 364 ಸ್ಥಾನಗಳಲ್ಲಿ ಕಣಕ್ಕಿಳಿದು 138 ಸ್ಥಾನಗಳಲ್ಲಿ ಏಕಾಂಗಿಯಾಗಿ ಜಯ ಗಳಿಸಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗೆಲುವಿನ ಸ್ಥಾನಗಳಲ್ಲಿ ಅಂತಹ ಮಹಾನ್ ವ್ಯತ್ಯಾಸವೇನು ಇರಲಿಲ್ಲ. ಆದರೆ ಸೋನಿಯಾ ಗಾಂಧಿ ಚುನಾವಣೆ ಪೂರ್ವ ಹೊಂದಾಣಿಕೆ ಮೂಲಕ ಎನ್ಡಿಎ ಅಬ್ಬರಕ್ಕೆ ತಡೆಯೊಡ್ಡಲು ಯಶಸ್ವಿಯಾಗಿದ್ದರು. ಇದು ಫಲಿತಾಂಶ ಬಂದಾಗ ಸೋನಿಯಾ ಸ್ಟ್ಯಾಟರ್ಜಿ ವರ್ಕೌಟ್ ಆಗಿತ್ತು.