ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಎಷ್ಟರ ಮಟ್ಟಿಗೆ ಅಪಾಯಕಾರಿ ಆಗಿದೆ ಅಂದ್ರೆ ಭಾರೀ ಗಾತ್ರದ ವಾಹನಗಳು ತಲೆ ಮೇಲೆ ಮಾಡಿ ನಿಲ್ಲೋ ಸ್ಥಿತಿಗೆ ಬಂದು ನಿಂತಿದೆ.
ಹೌದು ಮಣಿಪಾಲದಲ್ಲಿ ನಡೆಯುತ್ತಿರೋ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರೋ ಪರಿಣಾಮ ಪ್ರತೀ ನಿತ್ಯ ಒಂದಲ್ಲ ಒಂದು ಅವಘಡ ನಡೆಯುತ್ತಲೇ ಇದೆ. ಮಣಿಪಾಲದಲ್ಲಿ ಧಿಡೀರ್ ಎದುರಾಗೋ ಮಣ್ಣಿನ ಏರು ರಸ್ತೆಯಿಂದ ಭಾರೀ ಗಾತ್ರದ ವಾಹನಗಳು ಪಲ್ಟಿಯಾಗುತ್ತಿವೆ.
ಇತ್ತೀಚೆಗಷ್ಟೇ ಆಯಿಲ್ ಟ್ಯಾಂಕರ್ ಒಂದು ಏರಿನಲ್ಲಿ ಮುಂದಕ್ಕೆ ಚಲಿಸಲಾಗದೆ ಅನಿಲ ಸೋರಿಕೆಯಾಗಿತ್ತು. ಇಂದು ಮತ್ತೆ ಮರದ ದಿಣ್ಣೆ ಸಾಗಿಸೋ ಲಾರಿ ಏರಿನಲ್ಲಿ ಸಿಲುಕಿ ಮೇಲೆ ಕೆಳಗಾಗಿದೆ. ಹೀಗೆ ಭಾರೀ ವಾಹನಗಳ ಅವಘಡದಿಂದ ಟ್ರಾಫಿಕ್ ಜಾಮ್ ಗೂ ಕಾರಣವಾಗಿದೆ. ಜಿಲ್ಲಾಧಿಕಾರಿ ಹೆಪ್ಸಿಬಾ ಹಾಗೂ ಎಸ್ಪಿ ನಿಶಾ ಸ್ಥಳಕ್ಕೆ ಆಗಮಿಸಿ ಹೆದ್ದಾರಿ ಕಾಮಗಾರಿ ಇಲಾಖೆ ಅಧಿಕಾರಿಗಳಿಗೆ ಎಷ್ಟೇ ಎಚ್ಚರಿಕೆ ನೀಡಿದ್ರು ಅಧಿಕಾರಿಗಳು ಮಾತ್ರ ಕಾಮಗಾರಿ ವಿಳಂಬ ಮಾಡುತ್ತಲೇ ಇದ್ದಾರೆ.ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.