ಬೆಂಗಳೂರು: ಬಿಜೆಪಿ ದಲಿತ ವಿರೋಧಿ. ಯಾವುದೇ ಕಾರಣಕ್ಕೂ ಲೋಕಸಭಾ ಕಣದಿಂದ ನಾನು ಹಿಂದೆ ಸರಿಯಲ್ಲ, ಭಾರತೀಯ ಜನತಾ ಪಾರ್ಟಿ ನನ್ನ ತೇಜೋವಧೆ ಮಾಡಿದ್ದಾರೆ ಎಂದು ಹೇಳಿ, ಬಿಜೆಪಿ ನಾಯಕ ಡಿ ಎಸ್ ವೀರಯ್ಯ ಯು-ಟರ್ನ್ ಹೊಡೆದಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಸಜ್ಜಾಗಿದ್ದ ಡಿ.ಎಸ್ ವೀರಯ್ಯಗೆ ಟಿಕೆಟ್ ನೀಡದ ಕಾರಣ, ಕಮಲದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಬೆಂಗಳೂರಿನ ಕಾಡುಗೋಡಿ ವಾರ್ಡ್ ಕಾರ್ಪೊರೇಟರ್ ಮುನಿಸ್ವಾಮಿಗೆ ಟಿಕೆಟ್ ನೀಡಲಾಗಿದೆ.
ವೀರಯ್ಯ ಗೆದ್ದು ಬಿಡುತ್ತಾರೆ ಎಂದು ಅಸೂಯೆಯಿಂದ ಟಿಕೆಟ್ ತಪ್ಪಿಸಲಾಗಿದೆ. ನಾನೊಬ್ಬ ದಲಿತ ಪ್ರತಿನಿಧಿ. ಪಕ್ಷಕ್ಕೆ ಶ್ರಮಿಸಿದ್ದೇನೆ, ಬಿಜೆಪಿಯವರು ದಲಿತ ನಾಯಕತ್ವವನ್ನು ದಮನ ಮಾಡಲು ಮುಂದಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ವಾಪಸ್ಸು ಪಡೆಯುವ ಮಾತಿಲ್ಲ ಎಂದಿರುವ ಅವರು ತೇಜಸ್ವಿನಿ ಅನಂತಕುಮಾರ್ಗೆ ಟಿಕೆಟ್ ಕೊಡದೇ ಇರುವುದು ಬೇಸರವಾಗಿದೆ ಎಂದರು.
ಕೋಲಾರ ಜನ ನನ್ನ ಗೆಲ್ಲಿಸುತ್ತಾರೆಂಬ ವಿಶ್ವಾಸ ನನಗಿದೆ. ಕೋಲಾರದ ಋಣವನ್ನು ತೀರಿಸುತ್ತೇನೆ. ಇಲ್ಲಿ ಮುನಿಯಪ್ಪ ವಿರೋಧಿ ಅಲೆ ಇದೆ. ಯಾರು ನನ್ನನ್ನು ಸಂಪರ್ಕಿಸಿಲ್ಲ ಎಂದಿದ್ದರು. ಇದಾದ ಬಳಿಕ ಅವರು ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ.