ಬಾಗಲಕೋಟೆ: ಜಿಲ್ಲೆಯ ಇಳಕಲ್ ತಾಲೂಕಿನ ಕೃಷ್ಣಾಪುರ ಗ್ರಾಮದ ಯಮುನವ್ವ ಮಾದರ ಎಂಬ 70 ವರ್ಷದ ಮಹಿಳೆಗೆ ಇಂದಿಗೂ ಆಶ್ರಯ ಮನೆ ಸಿಗದೇ ಇರುವುದು ದುರ್ದೈವದ ಸಂಗತಿಯಾಗಿದೆ.
ಕೂಲಿ ಮಾಡಿ ಬದುಕು ನಡೆಸುವ ಯಮುನವ್ವನಿಗೆ ಇರುವ ಒಂದೇ ಆಸೆ ಎಂದರೆ ತಾನು ಸಾಯುವುದರೊಳಗಾಗಿ ಸರ್ಕಾರ ಆಶ್ರಯ ಮನೆ ಕಟ್ಟಿಸಿಕೊಡಬೇಕು ಎಂಬುದಂತೆ.
ಚುನಾವಣೆ ಸಂದರ್ಭದಲ್ಲಿ ಬರುವ ಜನಪ್ರತಿನಿಧಿಗಳು 20 ವರ್ಷದಿಂದಲೂ ಆಶ್ವಾಸನೆ ನೀಡಿ ಹೋಗುತ್ತಿದ್ದಾರೆ ಎಂದು ಹತಾಶೆಯಿಂದ ಹೇಳುತ್ತಾರೆ ಯಮುನವ್ವ. ಯಮುನವ್ವನಿಗೆ ಒಬ್ಬ ಮಗಳಿದ್ದು, ಆಕೆ ಮದುವೆಯಾದ ನಂತರ ಯಮುನವ್ವ ಒಬ್ಬರೇ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ.
ನಾನು ಸಾಯೋದ್ರೊಳಗೆ ಆಶ್ರಯ ಮನೆ ಕೊಡುಸ್ರೋ ಯಪ್ಪಾ... ಎಂದು ಮನೆಯ ಬಳಿ ಬರುವ ಜನಪ್ರತಿನಿಧಿಗಳನ್ನು ಕೇಳುತ್ತಿದ್ದಾರೆ.